Asianet Suvarna News Asianet Suvarna News

ರಾಜಸ್ಥಾನ ಚುನಾವಣೆ ದಿನಾಂಕ ಬದಲಿಸಿದ ಆಯೋಗ, ಇಲ್ಲಿದೆ ಕಾರಣ

ಭಾರತದ ಚುನಾವಣಾ ಆಯೋಗವು ರಾಜಸ್ಥಾನ ವಿಧಾನಸಭಾ ಚುನಾವಣೆಯ ಚುನಾವಣಾ ದಿನಾಂಕಗಳನ್ನು ನವೆಂಬರ್ 23 ರಿಂದ ನವೆಂಬರ್ 25 ಕ್ಕೆ ಬದಲಾಯಿಸಿದೆ.
 

Rajasthan assembly election now on Nov 25 as  Election Commission of India revises schedule san
Author
First Published Oct 11, 2023, 6:07 PM IST


ನವದೆಹಲಿ (ಅ.11): ಭಾರತದ ಚುನಾವಣಾ ಆಯೋಗವು ರಾಜಸ್ಥಾನ ವಿಧಾನಸಭಾ ಚುನಾವಣೆಯ ಚುನಾವಣಾ ದಿನಾಂಕಗಳನ್ನು ನವೆಂಬರ್ 23 ರಿಂದ ನವೆಂಬರ್ 25 ಕ್ಕೆ ಬದಲಾಯಿಸಿದೆ. ನವೆಂಬರ್‌ 23ರಂದು ದೊಡ್ಡ ಪ್ರಮಾಣದಲ್ಲಿ ಮದುವೆ ಹಾಗೂ ಇತರ ಸಾಮಾಜಿಕ ಕಾರ್ಯಗಳು ನಿಗದಿಯಾಗುತ್ತದೆ. ಇದು ಮತ ಹಾಕುವ ಜನರಿಗೆ ಅನಾನುಕೂಲತೆಗೆ ಕಾರಣವಾಗಬಹುದು ಎನ್ನುವ ಕಾರಣಕ್ಕೆ ಚುನಾವಣೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುರುವುದಾಗಿ ತಿಳಿಸಿದೆ. ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಸಂಘಟನೆಗಳ ಮನವಿಯ ಮೇಲೆ ಈ ನಿರ್ಧಾರವನ್ನು ಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.  ಚುನಾವಣಾ ಆಯೋಗ ಪ್ರಕಟಿಸಿರುವ ವೇಳಾಪಟ್ಟಿಯಂತೆ ಗೆಜೆಟ್ ಅಧಿಸೂಚನೆ ಹೊರಡಿಸುವ ದಿನಾಂಕ ಅಕ್ಟೋಬರ್ 30. ನಾಮಪತ್ರ ಸಲ್ಲಿಸಲು ನವೆಂಬರ್ 6 ಕೊನೆಯ ದಿನವಾಗಿದ್ದು, ನವೆಂಬರ್ 7 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 9 ಕೊನೆಯ ದಿನವಾಗಿದೆ.

ರಾಜಸ್ಥಾನ 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಮುಂದಿನ ವರ್ಷ ಜನವರಿ 14 ರಂದು ರಾಜ್ಯ ವಿಧಾನಸಭೆಯ ಅವಧಿ ಮುಕ್ತಾಯವಾಗಲಿದೆ. ಚುನಾವಣಾ ಸಮಿತಿಯು ಮಧ್ಯಪ್ರದೇಶ (ನವೆಂಬರ್ 17), ಛತ್ತೀಸ್‌ಗಢ (ನವೆಂಬರ್ 7 ಮತ್ತು 17), ಮಿಜೋರಾಂ (ನವೆಂಬರ್ 7) ಮತ್ತು ತೆಲಂಗಾಣ (ನವೆಂಬರ್ 30) ಸೇರಿದಂತೆ ಇತರ ರಾಜ್ಯಗಳ ಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ಈ ರಾಜ್ಯಗಳ ಚುನಾವಣೆಯನ್ನು 2024 ರ ಲೋಕಸಭೆ ಚುನಾವಣೆಗೆ ಮೊದಲು ಸೆಮಿಫೈನಲ್ ಎಂದು ಪರಿಗಣಿಸಲಾಗುತ್ತಿದೆ. ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿಯಲ್ಲಿದ್ದು, ಲೋಕಸಭೆಗೆ 25 ಸದಸ್ಯರನ್ನು ರಾಜಸ್ಥಾನ ಕಳಿಸುತ್ತದೆ.

Breaking: ಐದು ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟಿಸಿದ ಕೇಂದ್ರ ಚುನಾವಣಾ ಆಯೋಗ!

ರಾಜಸ್ಥಾನದಲ್ಲಿ ಪ್ರಸ್ತುತ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್‌100 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಜನ ಸಮಾಜ ಪಕ್ಷ ಮತ್ತು ಸ್ವತಂತ್ರ ಶಾಸಕರ ನೆರವಿನೊಂದಿಗೆ ಸರ್ಕಾರ ರಚಿಸಿತು. ಬಿಜೆಪಿ 73 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2013ರ ವಿಧಾನಸಭೆ ಚುನಾವಣೆಯಲ್ಲಿ ಕೇಸರಿ ಪಕ್ಷ 163 ಸ್ಥಾನಗಳನ್ನು ಗೆದ್ದಿತ್ತು.

ಖಾಸಗಿ ಸಂಸ್ಥೆಗಳಿಗೆ ಚುನಾವಣೆ ಕೆಲಸ ಇಲ್ಲ, ಕರ್ನಾಟಕದ ಚಿಲುಮೆ ಪ್ರಕರಣದ ಹಿನ್ನೆಲೆಯಲ್ಲಿ ಆಯೋಗ ಸ್ಪಷ್ಟನೆ

Follow Us:
Download App:
  • android
  • ios