Breaking: ಐದು ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟಿಸಿದ ಕೇಂದ್ರ ಚುನಾವಣಾ ಆಯೋಗ!

Five States Election ಕೇಂದ್ರ ಚುನಾವಣಾ ಆಯೋಗ ಸೋಮವಾರ ದೇಶದ ಐದು ರಾಜ್ಯಗಳಿಗೆ ಚುನಾವಣೆ ಘೋಷಣೆ ಮಾಡಿದೆ. ಕೇಂದ್ರ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌, ಇಸಿ ಅನೂಪ್‌ ಚಂದ್ರ ಮತ್ತು ಅರುಣ್‌ ಗೋಯೆಲ್‌ ಸುದ್ದಿಗೋಷ್ಠಿಯಲ್ಲಿ ದಿನಾಂಕ ಘೋಷಣೆ ಮಾಡಿದ್ದಾರೆ.

Election Commission announce poll schedule for Madhya Pradesh Chhattisgarh Rajasthan Telangana and Mizoram san

ನವದೆಹಲಿ (ಅ.9): ದೇಶದ ಐದು ಪ್ರಮುಖ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಕೇಂದ್ರ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  ಮಿಜೋರಾಂ ನವೆಂಬರ್‌ 7 ರಂದು ಚುನಾವಣೆ ನಡೆಯಲಿದೆ, ಛತ್ತೀಸ್‌ಗಢದಲ್ಲಿ 2 ಹಂತದಲ್ಲಿ ನವೆಂಬರ್‌ 7 ಹಾಗೂ 17 ರಂದು ನಡೆಯಲಿದೆ. ಮಧ್ಯಪ್ರದೇಶದಲ್ಲಿ ನವೆಂಬರ್‌ 17ರಂದು ನಡೆಯಲಿದೆ. ರಾಜಸ್ಥಾನದಲ್ಲಿ ನವೆಂಬರ್ 23 ರಂದು ಮತದಾನ ನಡೆಯಲಿದೆ. ತೆಲಂಗಾಣದಲ್ಲಿ ನವೆಂಬರ್‌ 30 ರಂದು ಚುನಾವಣೆ ನಡೆಯಲಿದೆ. ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್‌ 3 ರಂದು ನಡೆಯಲಿದೆ.

ಒಟ್ಟು ಐದು ರಾಜ್ಯಗಳಲ್ಲಿ 679 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು. ಈ ಐದೂ ರಾಜ್ಯಗಳಲ್ಲಿ 16.14 ಕೋಟಿ ಮತದಾರರು ಇದ್ದಾರೆ ಎಂದು ರಾಜೀವ್‌ ಕುಮಾರ್‌ ವಿವರ ನೀಡಿದರು. ಮಿಜೋರಾಮ್‌ನಲ್ಲಿ 8.52 ಲಕ್ಷ, ಛತ್ತೀಸ್‌ಗಢದಲ್ಲಿ 2.03 ಕೋಟಿ, ಮಧ್ಯಪ್ರದೇಶದಲ್ಲಿ 5.6 ಕೋಟಿ, ರಾಜಸ್ಥಾನದಲ್ಲಿ 5.25 ಕೋಟಿ ಹಾಗೂ ತೆಲಂಗಾಣದಲ್ಲಿ 3.17 ಕೋಟಿ ಮತದಾರರು ಇದ್ದಾರೆ ಎಂದು ಚುನಾವಣಾ ಆಯೋಗ (Election Commission Of India) ಮಾಹಿತಿ ನೀಡಿದೆ. ಈ ಐದೂ ರಾಜ್ಯಗಳಲ್ಲಿ 60.2 ಲಕ್ಷ ಹೊಸ ಮತದಾರರು ಇದ್ದಾರೆ. ಮುಂಬರುವ 5 ರಾಜ್ಯಗಳಲ್ಲಿ 7.8 ಕೋಟಿ ಮಹಿಳೆಯರು ಮತ ಚಲಾವಣೆ ಮಾಡಲಿದ್ದಾರೆ.

ಮತದಾರರ ಅನುಭವವನ್ನು ಹೆಚ್ಚಿಸಲು 17,734 ಮಾದರಿ ಮತಗಟ್ಟೆಗಳು, 621 ಮತಗಟ್ಟೆಗಳನ್ನು PwD ಸಿಬ್ಬಂದಿ ನಿರ್ವಹಿಸುತ್ತಾರೆ ಮತ್ತು 8,192 ಪೂಲಿಂಗ್‌ ಸ್ಟೇಷನ್‌ನಲ್ಲಿ ಮಹಿಳೆಯರು ನೇತೃತ್ವ ಹೊಂದಿರಲಿದ್ದಾರೆ.

ತೆಲಂಗಾಣ (Telangana), ರಾಜಸ್ಥಾನ (Rajasthan), ಛತ್ತೀಸ್‌ಗಢ (Chhattisgarh, ) ಮತ್ತು ಮಧ್ಯಪ್ರದೇಶದ (Madhya Pradesh) ಶಾಸಕಾಂಗ ಸಭೆಗಳ ಅವಧಿಯು ಜನವರಿ 2024 ರಲ್ಲಿ ವಿವಿಧ ದಿನಾಂಕಗಳಲ್ಲಿ ಮುಕ್ತಾಯಗೊಳ್ಳಲಿದೆ, ಆದರೆ ಮಿಜೋರಾಂ (Mizoram) ವಿಧಾನಸಭೆಯ ಅವಧಿಯು ಈ ವರ್ಷ ಡಿಸೆಂಬರ್ 17 ರಂದು ಕೊನೆಗೊಳ್ಳಲಿದೆ. ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಆಡಳಿತ ನಡೆಸುತ್ತಿದ್ದರೆ, ಮಧ್ಯಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿದೆ. ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಮತ್ತು ಈಶಾನ್ಯ ರಾಜ್ಯದಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರದಲ್ಲಿದೆ.

ಮಿಜೋರಾಂ ವಿಧಾನಸಭೆ ಚುನಾವಣೆ
ಅಧಿಸೂಚನೆ ಪ್ರಕಟ: ಅಕ್ಟೋಬರ್‌ 13
ನಾಮಪತ್ರ ಸಲ್ಲಿಕೆಗೆ ಕೊನೇ ದಿನ: ಅಕ್ಟೋಬರ್‌ 20
ನಾಮಪತ್ರ ಪರಿಶೀಲನೆ: ಅಕ್ಟೋಬರ್ 21
ನಾಮಪತ್ರ ಹಿಂಪಡೆಯಲು ಕೊನೇ ದಿನ: ಅಕ್ಟೋಬರ್‌ 23
ಮತದಾನದ ದಿನಾಂಕ: ನವೆಂಬರ್‌ 7

ಛತ್ತೀಸ್‌ ಗಢ ವಿಧಾನಸಭೆ ಚುನಾವಣೆ
ಅಧಿಸೂಚನೆ ಪ್ರಕಟ: ಅಕ್ಟೋಬರ್‌ 13 (ಮೊದಲ ಹಂತ), ಅಕ್ಟೋಬರ್‌ 21 (2ನೇ ಹಂತ)
ನಾಮಪತ್ರ ಸಲ್ಲಿಕೆಗೆ ಕೊನೇ ದಿನ: ಅಕ್ಟೋಬರ್‌ 20 (ಮೊದಲ ಹಂತ), ಅಕ್ಟೋಬರ್‌ 30 (2ನೆ ಹಂತ)
ನಾಮಪತ್ರ ಪರಿಶೀಲನೆ: ಅಕ್ಟೋಬರ್ 21 (ಮೊದಲ ಹಂತ), ಅಕ್ಟೋಬರ್‌ 31 (2ನೇ ಹಂತ)
ನಾಮಪತ್ರ ಹಿಂಪಡೆಯಲು ಕೊನೇ ದಿನ: ಅಕ್ಟೋಬರ್‌ 23 (ಮೊದಲ ಹಂತ), ನವೆಂಬರ್‌ 2 (2ನೇ ಹಂತ)
ಮತದಾನದ ದಿನಾಂಕ: ನವೆಂಬರ್‌ 7 (ಮೊದಲ ಹಂತ), ನವೆಂಬರ್‌ 17 (2ನೇ ಹಂತ)

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ
ಅಧಿಸೂಚನೆ ಪ್ರಕಟ: ಅಕ್ಟೋಬರ್‌ 21
ನಾಮಪತ್ರ ಸಲ್ಲಿಕೆಗೆ ಕೊನೇ ದಿನ: ಅಕ್ಟೋಬರ್‌ 30
ನಾಮಪತ್ರ ಪರಿಶೀಲನೆ: ಅಕ್ಟೋಬರ್ 31
ನಾಮಪತ್ರ ಹಿಂಪಡೆಯಲು ಕೊನೇ ದಿನ:  ನವೆಂಬರ್‌ 2
ಮತದಾನದ ದಿನಾಂಕ: ನವೆಂಬರ್‌ 17

ರಾಜಸ್ಥಾನ ವಿಧಾನಸಭೆ ಚುನಾವಣೆ
ಅಧಿಸೂಚನೆ ಪ್ರಕಟ: ಅಕ್ಟೋಬರ್‌ 30
ನಾಮಪತ್ರ ಸಲ್ಲಿಕೆಗೆ ಕೊನೇ ದಿನ: ನವೆಂಬರ್‌ 6
ನಾಮಪತ್ರ ಪರಿಶೀಲನೆ: ನವೆಂಬರ್‌ 7
ನಾಮಪತ್ರ ಹಿಂಪಡೆಯಲು ಕೊನೇ ದಿನ:  ನವೆಂಬರ್‌ 9    
ಮತದಾನದ ದಿನಾಂಕ: ನವೆಂಬರ್‌ 23

ತೆಲಂಗಾಣ ವಿಧಾನಸಭೆ ಚುನಾವಣೆ
ಅಧಿಸೂಚನೆ ಪ್ರಕಟ: ನವೆಂಬರ್‌ 3
ನಾಮಪತ್ರ ಸಲ್ಲಿಕೆಗೆ ಕೊನೇ ದಿನ: ನವೆಂಬರ್‌ 10
ನಾಮಪತ್ರ ಪರಿಶೀಲನೆ: ನವೆಂಬರ್‌ 13
ನಾಮಪತ್ರ ಹಿಂಪಡೆಯಲು ಕೊನೇ ದಿನ:  ನವೆಂಬರ್‌ 15    
ಮತದಾನದ ದಿನಾಂಕ: ನವೆಂಬರ್‌ 30

ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ: ಡಿಸೆಂಬರ್‌ 3, ಭಾನುವಾರ

 

Election Commission announce poll schedule for Madhya Pradesh Chhattisgarh Rajasthan Telangana and Mizoram san

Latest Videos
Follow Us:
Download App:
  • android
  • ios