ನೆರವು ಕೇಳಿದ ರೈತನ ಕಾಲಿನಿಂದ ಒದ್ದ ಕಾಂಗ್ರೆಸ್ ಶಾಸಕ, ವೈರಲ್ ವಿಡಿಯೋ ತಂದ ಸಂಕಷ್ಟ!
ನೆರವಿನ ಅರ್ಜಿಯನ್ನು ಹಿಡಿದು ಕ್ಷೇತ್ರದ ಶಾಸಕನ ಬಳಿ ಬಂದ ರೈತ, ಸಹಾಯ ಮಾಡಿ ಎಂದು ಕಾಂಗ್ರೆಸ್ ಶಾಸಕನ ಕಾಲಿಗೆ ಎರಗಿದ್ದಾರೆ. ಆಕ್ರೋಶದಿಂದಲೇ ಏರುಧ್ವನಿಯಲ್ಲಿ ಗದರಿಸಿದ ಶಾಸಕ, ರೈತನ ಪೇಟಾಗೆ ಕಾಲಿನಿಂದ ಒದ್ದು, ಹೊರಗೆ ಹಾಕಿದ ವಿಡಿಯೋ ವೈರಲ್ ಆಗಿದೆ.
ಜೈಪುರ(ಅ.17) ರಾಜಸ್ಥಾನ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ತಲೆನೋವು ಹೆಚ್ಚಾಗಿದೆ. ಒಂದೆಡೆ ಬಂಡಾಯ, ಜೊತೆಗೆ ಶಾಸಕರ ವರ್ತನೆ ಕೂಡ ಪಕ್ಷಕ್ಕೆ ತೀವ್ರ ಹಿನ್ನಡೆ ತಂದಿದೆ. ನೆರವು ಕೇಳಿ ಕಾಂಗ್ರೆಸ್ ಶಾಸಕ ರಾಜೇಂದ್ರ ಬಿದುರಿ ಬಳಿ ಬಂದ ರೈತನ ಕಾಲಿನಿಂದ ಒದ್ದು ಹೊರಗೆ ಹಾಕಿದ ವಿಡಿಯೋ ವೈರಲ್ ಆಗಿದೆ. ಏರುಧ್ವನಿಯಲ್ಲಿ ಗದರಿಸಿ ರೈತನ ಹೊರಕ್ಕೆ ಕಳುಹಿಸಿದ ಶಾಕನ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
2021ರ ಈ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ. ಲೋಭಿ ರಾಮ್ ಅನ್ನೋ ರೈತ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕ್ಷೇತ್ರದ ಶಾಸಕನ ಭೇಟಿಯಾಗಲು ಹಲವು ದಿನಗಳಿಂದ ಅಲೆದಾಡಿದ್ದಾರೆ. ಕೊನೆಗೆ ಕಾಂಗ್ರೆಸ್ ಶಾಸಕ ರಾಜೇಂದ್ರ ಬಿದುರಿ ತನ್ನ ಗ್ರಾಮದ ಪಕ್ಕದಲ್ಲಿರುವ ಪಟ್ಟಣದ ಹೊಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ ಅನ್ನೋದನ್ನು ಅರಿತು ಅಲ್ಲಿಗೆ ತೆರಳಿದ್ದಾರೆ.
ಚುನಾವಣೆ ಬೆನ್ನಲ್ಲೇ ಮಧ್ಯಪ್ರದೇಶ ಕಾಂಗ್ರೆಸ್‌ನಲ್ಲಿ ತಮಮಳ, ಹಿರಿಯ ನಾಯಕ ರಾಜೀನಾಮೆ!
ಹೊಟೆಲ್ ಲಾಂಜ್ ಬಳಿ ತೆರಳಿದ ರೈತ, ಶಾಸಕರು ಆಗಮಿಸುತ್ತಿದ್ದ ತಲೆಗೆ ಸುತ್ತಿತ್ತ ರಾಜಸ್ಥಾನಿ ಪೇಟ ತೆಗೆದು ಗೌರವ ಸೂಚಿಸಿದ್ದಾರೆ. ಇಷ್ಟೇ ಅಲ್ಲ ತನ್ನ ಮನವಿಗೆ ಸ್ಪಂದಿಸುವಂತೆ ಶಾಸಕನ ಕಾಲಿಗೆ ಎರಗಿದ್ದಾರೆ. ರೈತನ ನೋಡುತ್ತಿದ್ದಂತೆ ರಾಜೇಂದ್ರ ಬಿದುರಿ ಪಿತ್ತ ನೆತ್ತಿಗೇರಿದೆ. ರೈತನ ಗದರಿಸಲು ಆರಂಭಿಸಿದ್ದಾರೆ. ಕಾಲಿಗೆ ಎರಗುತ್ತಿದ್ದಂತೆ ಮಾರುದ್ದ ದೂರಕ್ಕೆ ಸರಿದ ಶಾಸಕ, ಮತ್ತೆ ಗದರಿಸಿ ಕಾಲಿನಿಂದ ಒದ್ದಿದ್ದಾರೆ. ಕಾಲಿಗೆ ಎರಗುವಾಗ ಪಕ್ಕದಲ್ಲೇ ಇಟ್ಟಿದ್ದ ರಾಜಸ್ಥಾನಿ ಪೇಟಾಗೆ ಶಾಕಕ ಕಾಲಿನಿಂದ ಒದ್ದಿದ್ದಾರೆ.
ಈ ನಡೆಯಿಂದ ರೈತ ಕೂಡ ಬೆಚ್ಚಿ ಬಿದ್ದಿದ್ದಾರೆ. ಎದ್ದು ನಿಂತು ಕೈಮುಗಿ ಕ್ಷಮೆ ಕೇಳಿ ಮನವಿಗೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಶಾಸಕನ ದರ್ಪದಿಂದ ಹೊರಗೆ ಹೋಗುವಂತೆ ಗದರಿಸಿದ್ದಾರೆ. ಇಷ್ಟೇ ಅಲ್ಲ ದೂರದಲ್ಲಿ ಬಿದ್ದಿರುವ ರಾಜಸ್ಥಾನಿ ಪೇಟ ತೆಗೆದು ಹೊರಗೆ ಹೋಗುವಂತೆ ಸೂಚಿಸಿದ್ದಾರೆ. ಪಕ್ತದಲ್ಲಿ ನಿಂತಿದ್ದ ಸೆಕ್ರಟರಿ, ಅಧಿಕಾರಿಗಳು ಗಪ್ ಚುಪ್ ಆಗಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಹೊಟೆಲ್ ಸಿಸಿಟಿವಿಯಲ್ಲಿ ದಾಖಲಾಗಿರುವ ಈ ದೃಶ್ಯ ಕಾಂಗ್ರೆಸ್ ಪಕ್ಷದ ಸಂಕಷ್ಟ ಹೆಚ್ಚಿಸಿದೆ.
ಪಂಚರಾಜ್ಯ ಚುನಾವಣೆ: ಮಧ್ಯ ಪ್ರದೇಶ, ಛತ್ತೀಸ್‌ಗಢ ಕೈ ಪಾಲು, ರಾಜಸ್ಥಾನ ಬಿಜೆಪಿಗೆ: ಸಮೀಕ್ಷೆ
ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಎರಡು ಬಣಗಳ ನಡುವಿನ ಕಿತ್ತಾಟದ ನಡುವೆ ಇದೀಗ ಶಾಸಕರ ಈ ರೀತಿ ನಡೆ ವಿರುದ್ದ ಆಕ್ರೋಶ ಹೆಚ್ಚಾಗಿದೆ. ಚುನಾವಣೆ ಸಮೀಪದಲ್ಲೇ ಈ ವಿಡಿಯೋ ವೈರಲ್ ಆಗಿರುವುದು ಕಾಂಗ್ರೆಸ್ ತಲೆನೋವು ಹೆಚ್ಚಿಸಿದೆ.