ಚುನಾವಣೆ ಬೆನ್ನಲ್ಲೇ ಮಧ್ಯಪ್ರದೇಶ ಕಾಂಗ್ರೆಸ್‌ನಲ್ಲಿ ತಮಮಳ, ಹಿರಿಯ ನಾಯಕ ರಾಜೀನಾಮೆ!

ಮಧ್ಯ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಿಸಿದೆ. ಇದರ ಬೆನ್ನಲ್ಲೇ ಅಸಮಾಧಾನವೂ ಭುಗಿಲೆದ್ದಿದೆ. ಇದೀಗ ಮಾಜಿ ಸಿಎಂ ಕಮಲ್‌ನಾಥ್ ಬಲಗೈ ಬಂಟ  ಎಂದೇ ಗುರುತಿಸಿಕೊಂಡಿದ್ದ ಕಾಂಗ್ರೆಸ್ ನಾಯಕ ರಾಜೀನಾಮೆ ನೀಡಿ ಹೊರಬಂದಿದ್ದಾರೆ.

Madhya Pradesh Assembly election 2023 Congress leader Yadvendra Singh resigns from party ckm

ಇಂದೋರ್(ಅ.17) ಮಧ್ಯಪ್ರದೇಶ ಚುನಾವಣೆ ಕಾವು ಜೋರಾಗಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇತರ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತಿದೆ. ಇದರ ಬೆನ್ನಲ್ಲೇ ಟಿಕೆಟ್ ವಂಚಿತರ ಅಸಮಾಧಾನ ಜೋರಾಗುತ್ತಿದೆ. ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ಕಮಲನಾಥ್ ಆಪ್ತನಾಗಿ ಗುರುತಿಸಿಕೊಂಡಿದ್ದ ಯದ್ವೇಂದ್ರ ಸಿಂಗ್ ಅಸಮಾಧಾನಗೊಂಡಿದ್ದಾರೆ. ಟಿಕೆಟ್ ನಿರಾಕರಿದ ಕಾರಣಕ್ಕೆ ಆಕ್ರೋಶಗೊಂಡಿರುವ ಯದ್ವೇಂದ್ರ ಸಿಂಗ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಕಮಲನಾಥ್ ವಿರುದ್ಧ ಆಕ್ರೋಶ ಹೊರಹಾಕಿರುವ ಯದ್ವೇಂದ್ರ ಸಿಂಗ್, ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದ್ದಾರೆ.

ಕಾಂಗ್ರೆಸ್‌ನಿಂದ ರಾಜೀನಾಮೆ ನೀಡಿ ಹೊರಬಂದ ಯದ್ವೇಂದ್ರ ಸಿಂಗ್ ಇದೀಗ ಬಹುಜನ ಸಮಾಜ ಪಾರ್ಟಿ ಸೇರಿಕೊಂಡಿದ್ದಾರೆ. ಬಳಿಕ ಮಾತನಾಡಿರುವ ಯದ್ವೇಂದ್ರ ಸಿಂಗ್, ಕಾಂಗ್ರೆಸ್ ಪಕ್ಷ ಕಟ್ಟಲು ಸುದೀರ್ಘ ವರ್ಷಗಳ ಕಾಲು ದುಡಿದಿದ್ದೇನೆ. ಮಧ್ಯ ಪ್ರದೇಶದಲ್ಲಿ ತಳಮಟ್ಟದಿಂದ ಪಕ್ಷ ಕಟ್ಟಿ ಈ ಮಟ್ಟಕ್ಕೆ ಬೆಳೆಸಿದ್ದೇನೆ. ನನ್ನಂತ ಹಲವು ನಾಯಕರು ದುಡಿದಿದ್ದಾರೆ. ಕಮಲನಾಥ್ ಬಲಗೈ ಬಂಟ ಎಂದೇ ಗುರುಸಿತಿಕೊಂಡಿದ್ದೆ. ಆದರೆ ನನಗೆ ಟಿಕೆಟ್ ನಿರಾಕರಿಸಿದ್ದಾರೆ. ನನ್ನ ಕ್ಷೇತ್ರದಲ್ಲಿ ಸಮೀಕ್ಷೆ ಮಾಡಲಾಗಿದೆ. ನನ್ನ ಗೆಲುವು ಸ್ಪಷ್ಟವಾಗಿದೆ. ಆದರೂ ಟಿಕೆಟ್ ನಿರಾಕರಿಸಲಾಗಿದೆ. ನನಗೆ ಟಿಕೆಟ್ ನಿರಾಕರಿಸಿದ ಕಮಲನಾಥ್‌ಗೆ ತಕ್ಕ ಪಾಠ ಕಲಿಸಲು ಬಹುಜನ ಸಮಾಜ ಪಾರ್ಟಿ ಸೇರಿದ್ದೇನೆ ಎಂದು ಯದ್ವೇಂದ್ರ ಸಿಂಗ್ ಹೇಳಿದ್ದಾರೆ.

ಸಮೀಕ್ಷೆಯಲ್ಲಿ ಮಧ್ಯಪ್ರದೇಶದ ಭವಿಷ್ಯ ಏನಾಗಿದೆ..? ಗೆಲುವು, ಸೋಲು ಯಾರಿಗೆ..?

ಪಕ್ಷ ಬದಲಾಯಿಸಿದರೂ ನನ್ನ ಕ್ಷೇತ್ರದಲ್ಲಿ ನಾನು ಗೆಲ್ಲುತ್ತೇನೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಕಮಲ್‌ನಾಥ್ ಆಪ್ತರನ್ನು ಸೋಲಿಸುವುದೇ ನನ್ನ ಗುರಿ. ನನ್ನ ವಿರುದ್ದ ಕಮಲನಾಥ್ ತೆಗೆದುಕೊಂಡ ನಿರ್ಧಾರಕ್ಕೆ ಪಶ್ಚಾತ್ತಾಪ ಪಡುವಂತೆ ಮಾಡುತ್ತೇನೆ ಎಂದು ಯದ್ವೇಂದ್ರ ಸಿಂಗ್ ಹೇಳಿದ್ದಾರೆ.

ಮಧ್ಯ ಪ್ರದೇಶ ಚುನಾವಣೆಗೆ ಕಾಂಗ್ರೆಸ್ 144 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕಮಲನಾಥ್ ಚಿಂದ್ವಾರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ನಾಗೋಡ್ ಕ್ಷೇತ್ರದಿಂದ ರಶ್ಮಿ ಸಿಂಗ್ ಪಟೇಲ್‌ಗೆ ಟಿಕೆಟ್ ನೀಡಲಾಗಿದೆ. ನವೆಂಬರ್ 17 ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಮಧ್ಯ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ನಡೆಯಲಿದೆ.

3 ರಾಜ್ಯಗಳಿಗೆ ಕಾಂಗ್ರೆಸ್‌ ಮೊದಲ ಪಟ್ಟಿ ಪ್ರಕಟ, 200 ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ

Latest Videos
Follow Us:
Download App:
  • android
  • ios