ಎಬಿ ಬದಲು ಒ ಪಾಸಿಟೀವ್ ಬ್ಲಡ್ ಹಾಕಿ ಎಡವಟ್ಟು, ಚಿಕಿತ್ಸೆ ನಡುವೆ 23ರ ಯುವಕ ಸಾವು!
ರಸ್ತೆ ಅಪಘಾತದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ 23ರ ಯುವಕನನ್ನು ಆಸ್ಪತ್ರೆ ದಾಖಲಿಸಲಾಗಿದೆ. ತರಾತುರಿಯಲ್ಲಿ ಯುವಕನಿಗೆ ಚಿಕಿತ್ಸೆ ಆರಂಭಗೊಂಡಿದೆ. ಆದರೆ ಕೆಲ ಗಂಟೆಗಳ ಬಳಿಕ ಯುವಕ ಮೃತಪಟ್ಟಿದ್ದಾನೆ. ಎಬಿ ಬದಲು ಒ ಪಾಸಿಟಿವ್ ರಕ್ತವವನ್ನು ಹಾಕಿದ್ದೇ ಈ ಸಾವಿಗೆ ಕಾರಣ ಅನ್ನೋ ಆರೋಪ ಕೇಳಿಬಂದಿದೆ.
ಜೈಪುರ(ಫೆ.23) ಆಸ್ಪತ್ರೆ ಸಿಬ್ಬಂದಿಗಳು ಒಂದು ಸಣ್ಣ ಎಡವಟ್ಟು ಮಾಡಿದರು ಪರಿಣಾಮ ಅತ್ಯಂತ ಘೋರವಾಗಿರುತ್ತದೆ. ಈಗಾಗಲೇ ಈ ರೀತಿಯ ಹಲವು ಘಟನೆಗಳು ನಡೆದಿದೆ. ಇದೀಗ 23ರ ಹರೆಯದ ಯುವಕ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾನೆ.ತಕ್ಷಣೇ ಯುವಕಕನ್ನು ಆಸ್ಪತ್ರೆ ದಾಖಲಿಸಲಾಗಿತ್ತು.ಅಪಘಾತದಲ್ಲಿ ಅಪಾರ ಪ್ರಮಾಣದ ರಕ್ತ ಹರಿದ ಕಾರಣ ದೇಹದಲ್ಲಿ ರಕ್ತದ ಕೊರತೆ ಎದುರಾಗಿತ್ತು. ಹೀಗಾಗಿ ತರಾತುರಿಯಲ್ಲಿ ಯುವಕನ ದೇಹಕ್ಕೆ ರಕ್ತ ಇಂಜೆಕ್ಟ್ ಮಾಡಲಾಗಿದೆ. ಆದರೆ ಯುವಕನ ರಕ್ತದ ಗ್ರೂಪ್ ಎಬಿ. ಆಸ್ಪತ್ರೆ ಸಿಬ್ಬಂದಿಗಳು ಒ ಪಾಸಿಟೀವ್ ರಕ್ತವನ್ನು ಹಾಕಿದ್ದಾರೆ. ಇದರ ಪರಿಣಾಮ ಯುವಕ ಮೃತಪಟ್ಟಿದ್ದಾನೆ ಎಂಬ ಗಂಭೀರ ಆರೋಪ ರಾಜಸ್ಥಾನದ ಸವಾಯಿ ಮಾನ್ ಸಿಂಗ್ ಸರ್ಕಾರಿ ಆಸ್ಪತ್ರೆಯಲ್ಲಿ ಕೇಳಿಬಂದಿದೆ.
ಬಂದಿಕುಯಿ ಪಟ್ಟಣದ ಸಚಿನ್ ಶರ್ಮಾ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ. ಸ್ಥಳೀಯರು ಸಚಿನ್ ಶರ್ಮಾನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆ ಸವಾಯಿ ಮಾನ್ ಸಿಂಗ್‌ಗೆ ದಾಖಲಿಸಿದ್ದಾರೆ. ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಪಘಾತದ ಕಾರಣ ಸಚಿನ್ ಶರ್ಮಾ ದೇಹದಿಂದ ರಕ್ತ ಹರಿದು ಹೋಗಿತ್ತು. ಹೀಗಾಗಿ ತಕ್ಷಣವೇ ಸಚಿನ್ ಶರ್ಮಾಗೆ ರಕ್ತ ನೀಡುವುದು ಅನಿವಾರ್ಯವಾಗಿತ್ತು.
2ನೇ ಪತ್ನಿಗೆ ಮನೆಯಲ್ಲೇ ಹೆರಿಗೆಗೆ ಪತಿ ಒತ್ತಾಯ, ಪುಟ್ಟ ಕಂದಮ್ಮ ಜೊತೆ ಕೊನೆಯುಸಿರೆಳೆದ ತಾಯಿ!
ತರಾತುರಿಯಲ್ಲಿ ಸಚಿನ್ ಶರ್ಮಾಗೆ ರಕ್ತ ಹಾಕಲಾಗಿದೆ. ಆದರೆ ಸಚಿನ್ ಶರ್ಮಾ ರಕ್ತದ ಗ್ರೂಪ್ ಎಬಿ ಪಾಸಿಟಿವ್. ಆಸ್ಪತ್ರೆ ಸಿಬ್ಬಂದಿಗಳು ಒ ಪಾಸಿಟೀವ್ ರಕ್ತ ಹಾಕಿದ್ದಾರೆ. ಇದರ ಪರಿಣಾಮ ಕೆಲ ಗಂಟೆಗಳಲ್ಲಿ ಸಚಿನ್ ಶರ್ಮಾ ಮೃತಪಟ್ಟಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ.ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಅನ್ನೋ ಆರೋಪ ಬಲವಾಗುತ್ತಿದೆ.
ಆಸ್ಪತ್ರೆ ಸೂಪರಿಡೆಂಟ್ ಅಚಲ್ ಶರ್ಮಾ ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಸಚಿನ್ ಶರ್ಮಾ ನಿಧನ ಕುರಿತು ಕೆಲ ಆರೋಪಗಳಿವೆ. ಇದಕ್ಕಾಗಿ ವಿಶೇಷ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ತನಿಖೆ ನಡೆಸಿ ವರದಿ ನೀಡಲಿದೆ. ಸಚಿನ್ ಶರ್ಮಾ ಚಿಕಿತ್ಸೆ ವೇಳೆ ನಿರ್ಲಕ್ಷ್ಯ, ಎಡವಟ್ಟು ಮಾಡಿರುವುದು ಸಾಬೀತಾದರೆ ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಅಚಲ್ ಶರ್ಮಾ ಹೇಳಿದ್ದಾರೆ.
ಸಚಿನ್ ಶರ್ಮಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ. ಆರೋಪ ಕೇಳಿಬಂದಿರುವ ಕಾರಣ ಸೂಕ್ತ ತನಿಖೆ ನಡೆಸಲಾಗುವುದು ಎಂದು ಆಸ್ಪತ್ರೆ ಸೂಪರಿಡೆಂಟ್ ಹೇಳಿದ್ದಾರೆ.
ಪ್ಲಾಸ್ಟಿಕ್ ಸರ್ಜರಿ ಮೂಲಕ ಮುಖ ಬದಲಾಗ್ತಿದ್ದಂತೆ ಆಸ್ಪತ್ರೆಯಿಂದ ಓಡಿದ ಮಹಿಳೆ…!