Asianet Suvarna News Asianet Suvarna News

2ನೇ ಪತ್ನಿಗೆ ಮನೆಯಲ್ಲೇ ಹೆರಿಗೆಗೆ ಪತಿ ಒತ್ತಾಯ, ಪುಟ್ಟ ಕಂದಮ್ಮ ಜೊತೆ ಕೊನೆಯುಸಿರೆಳೆದ ತಾಯಿ!

ಆಸ್ಪತ್ರೆ ಬೇಡವೇ ಬೇಡ, ಮನೆಯಲ್ಲೇ ಹೆರಿಗೆಗೆ ಪತಿ ಒತ್ತಾಯಿಸಿದ್ದಾನೆ. ನನ್ನ ಪತ್ನಿ ಹೇಗೆ ನೋಡಿಕೊಳ್ಳಬೇಕು ಎಂದು ನನಗೆ ಗೊತ್ತಿದೆ. ಹೀಗೆ ದರ್ಪದ ಮಾತುಗಳಿಂದ ಪುಟ್ಟ ಕಂದಮ್ಮ ಹಾಗೂ ತಾಯಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.  
 

Kerala mother and her New born baby dies after husband refuse to admit hospital ckm
Author
First Published Feb 21, 2024, 7:26 PM IST

ತಿರುವನಂತಪುರಂ(ಫೆ.21) ತುಂಬು ಗರ್ಭಿಣಿ ಪತ್ನಿಗೆ ಯಾವುದೇ ಕಾರಣಕ್ಕೂ ಆಸ್ಪತ್ರೆಗೆ ತೆರಳಬಾರದು, ಮನೆಯಲ್ಲಿ ಹೆರಿಗೆಯಾಗಬೇಕು ಎಂದು ಪತಿಯ ಆಜ್ಞೆಯಾಗಿತ್ತು. ಎರಡನೇ ಪತ್ನಿಯಾಗಿರುವ ಈಕೆಗೆ ಗಂಡನ ಮಾತು ಧಿಕ್ಕರಿಸಿದ ಎಲ್ಲಿ ಮೂರನೇ ಮದುವೆಯಾಗುತ್ತಾನೋ ಅನ್ನೋ ಭಯ. ಹೀಗಾಗಿ ಮನೆಯಲ್ಲೇ ಹೆರಿಗೆಗೆ ಗಟ್ಟಿ ಮನಸ್ಸು ಮಾಡಿದ್ದಾಳೆ. ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ನೆರೆಮನೆ ನಿವಾಸಿಗಳು ಅದೆಷ್ಟೆ ಒತ್ತಾಯ ಮಾಡಿದರೂ ಪತಿ ಮನಸ್ಸು ಬದಲಿಸಲಿಲ್ಲ. ಪರಿಣಾಮ ಹೆರಿಗೆಯಾದ ಬೆನ್ನಲ್ಲೇ ಮುದ್ದು ಕಂದಮ್ಮ ಜೊತೆ ತಾಯಿ ಕೂಡ ಮೃತಪಟ್ಟ ಘಟನೆ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ನಡೆದಿದೆ. 

ಮತೃ ಮಹಿಳೆಯನ್ನು ಪಾಲಕ್ಕಾಡ್ ಮೂಲದ 35 ವರ್ಷದ ಶಮೀರಾ ಎಂದು ಗುರುತಿಸಲಾಗಿದೆ. ಈಕೆ ಆಗಷ್ಟೆ ಜನ್ಮ ನೀಡಿದ ಮಗು ಕೂಡ ಮೃತಪಟ್ಟಿದೆ. ಇತ್ತ ಪತಿ ನಯಾಸ್‌ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಂಪೂರ್ಣ ಮನೆಯನ್ನು ಸೀಲ್ ಮಾಡಲಾಗಿದೆ. ಇದೀಗ ಈ ಪ್ರಕರಣದ ಕುರಿತು ಕೇರಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅನುಪಮಾ ಖ್ಯಾತಿಯ ನಟ ರಿತುರಾಜ್ ನಿಧನ: ಚಿಕಿತ್ಸೆ ವೇಳೆ ಹೃದಯಾಘಾತಕ್ಕೆ ಬಲಿ

ನಯಾಸ್ ಎರಡನೇ ಪತ್ನಿ ಶಮೀರಾ ತುಂಬು ಗರ್ಭಿಣಿಯಾಗಿದ್ದರು. ನಯಾಸ್ ಹಾಗೂ ಶಮೀರಾ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಆಸ್ಪತ್ರೆ ತೆರಳುವುದು, ಮಕ್ಕಳಿಗೆ ಲಸಿಕೆ ಕೊಡಿಸುವುದು ಪತಿ ನಯಾಸ್‌ಗೆ ಸುತರಾಂ ಇಷ್ಟವಿರಲಿಲ್ಲ. ಮೂರನೇ ಮಗುವಿನ ಜನನ ಮನೆಯಲ್ಲೇ ಆಗಬೇಕು. ಯಾವುದೇ ಕಾರಣಕ್ಕೂ ಆಸ್ಪತ್ರೆಗೆ ತೆರಳಿ ಹೆರಿಗೆ ಮಾಡಿಸಬಾರದು ಎಂದು ಪತ್ನಿಗೆ ಆಜ್ಞೆ ಮಾಡಿದ್ದ.

ಎರಡನೇ ಹೆಂಡತಿಯಾಗಿದ್ದ ಶಮೀರಾಗೆ ಮಾತು ಧಿಕ್ಕರಿಸಿದರೆ ಪತಿ ಮೂರನೇ ಮದುವೆಯಾಗುವ ಆತಂಕವಿತ್ತು. ಹೀಗಾಗಿ ಮನೆಯಲ್ಲೆ ಹೆರಿಗೆಯಾಗಲು ನಿರ್ಧರಿಸಿದ್ದಾಳೆ. ಆದರೆ ಸ್ಥಳೀಯ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಸ್ಥಳೀಯರು ನಯಾಸ್ ಮನೆಗೆ ಆಗಮಿಸಿ ಪತ್ನಿಯನ್ನು ಆಸ್ಪತ್ರೆ ದಾಖಲಿಸುವಂತೆ ಸೂಚಿಸಿದ್ದಾರೆ.ನನ್ನ ಪತ್ನಿಯನ್ನು ಹೇಗೆ ನೋಡಿಕೊಳ್ಳಬೇಕು ಅನ್ನೋದು ಗೊತ್ತಿದೆ. ನಿಮ್ಮ ಸಲಹೆ ಅವಶ್ಯಕತೆ ಇಲ್ಲ ಎಂದು ದಬಾಯಿಸಿದ್ದಾನೆ.

Kolar Murder: ಪ್ರೇಮಿಗಳ ದಿನದಂದೇ ಹೆಂಡತಿಯ ಭೀಕರ ಹತ್ಯೆ..! ಅವಳಿಗಾಗಿ ಕೈ ಹಿಡಿದವಳನ್ನೇ ಮುಗಿಸಿಬಿಟ್ಟನಾ ಪಾಪಿ..?

ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡು ಒದ್ದಾಡಿದ್ದಾಳೆ. ನೆರೆಮನೆಯವರು ನೆರೆವಿಗೆ ಧಾವಿಸಿದ್ದಾರೆ. ಆದರೆ ಹೆರಿಗೆ ಜೊತೆ ತೀವ್ರ ರಕ್ತಸ್ರಾವವಾಗಿದೆ. ಇದರಿಂದ ಶಮೀರಾ ಅಸ್ವಸ್ಥಗೊಂಡಿದ್ದಾರೆ. ಇತ್ತ ಮಗವಿನ ಚಲನವಲನ ಕೂಡ ಆತಂಕ ಮೂಡಿಸಿತ್ತು. ಹೀಗಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಆ್ಯಂಬುಲೆನ್ಸ್ ಮೂಲಕ ಆಗಮಿಸಿ ಶಮೀರಾಳನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಅಷ್ಟರಲ್ಲೇ ಕಾಲ ಮಿಂಚಿಹೋಗಿತ್ತು. ಶಮೀರಾ ಹಾಗೂ ಪುಟ್ಟ ಕಂದಮ್ಮ ಮೃತಪಟ್ಟಿದ್ದಾರೆ.
 

Follow Us:
Download App:
  • android
  • ios