ಹಿಂದುತ್ವ ರಾಜಕಾರಣಕ್ಕೆ ಸಿಕ್ಕ ಹೊಸ ನೇತಾರ| ರಾಜ್ ಠಾಕ್ರೆ ಎತ್ತಿ ಹಿಡಿದ ಹಿಂದುತ್ವ ರಾಜಕಾರಣದ ಧ್ವಜ| ಉದ್ಧವ್ ಬಿಟ್ಟು ಹೋದ ಹಿಂದುತ್ವ ಉಡುಪಿನಲ್ಲಿ ಕಂಗೊಳಿಸಿದ ರಾಜ್ ಠಾಕ್ರೆ| ಪಾಕ್-ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಎಂಎನ್‌ಎಸ್ ಮೆಗಾ ರ್ಯಾಲಿ| ಮುಂಬೈನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡ ಎಂಎನ್‌ಎಸ್| ಸಿದ್ಧಿ ವಿನಾಯಕ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ರಾಜ್ ಕುಟುಂಬ|
ಮುಂಬೈ(ಫೆ.09): ರಾಜಕಾರಣವೇ ಹಾಗೆ, ಬೇಗ ವ್ಯಾಕ್ಯೂಮ್ ತುಂಬಿಕೊಳ್ಳುವ ಶಕ್ತಿ ಅದಕ್ಕಿದೆ. ಒಬ್ಬರು ಬಿಟ್ಟು ಹೋದ ಸೈದ್ಧಾಂತಿಕ ಧ್ವಜವನ್ನು ಮತ್ತೊಬ್ಬರು ಎತ್ತಿ ಹಿಡಿಯಲು ಬಹಳ ಸಮಯವೇನು ಬೇಕಾಗುವುದಿಲ್ಲ.
ಇದಕ್ಕೆ ತಾಜಾ ಉದಾಹರಣ ಮಹಾರಾಷ್ಟ್ರದ ರಾಜಕಾರಣ. ಹಿಂದುತ್ವದ ಬಟ್ಟೆ ಕಳಚಿ ಜಾತ್ಯಾತೀತ ಉಡುಪು ತೊಟ್ಟಿರುವ ಶಿವಸೇನೆ ಅಧಿಕಾರವನ್ನೇನೋ ಪಡೆದಿದೆ. ಆದರೆ ಹಿಂದುತ್ವವಾದಿಗಳ ಕೆಂಗೆಣ್ಣಿಗೆ ಗುರಿಯಾಗಿ ಸರಿಯಾಗಿ ನಿದ್ರಿಸುತ್ತಿಲ್ಲ.
ಶಿವಸೇನೆ ಎಸೆದ ಸೈದ್ಧಾಂತಿಕ ಧ್ವಜವನ್ನು ಇದೀಗ ಉದ್ಧವ್ ಠಾಕ್ರೆ ಸಹೋದರ, ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಎತ್ತಿ ಹಿಡಿದಿದ್ದಾರೆ. ಇದಕ್ಕಾಗಿ ಕಾಯುತ್ತಿದ್ದ ಮರಾಠಾ ಹಿಂದುತ್ವ ವಾದಿಗಳು, ರಾಜ್ ಠಾಕ್ರೆಯಲ್ಲಿ ಹಿಂದೂ ನಾಯಕನನ್ನು ಕಂಡುಕೊಂಡಿದ್ದಾರೆ.
ಅಧಿಕಾರಕ್ಕಾಗಿ ಹಿಂದುತ್ವದಿಂದ ದೂರ ಸರಿದ ಉದ್ಧವ್ ಠಾಕ್ರೆ ಸಹೋದರ ರಾಜ್ ಠಾಕ್ರೆಗೆ ರಾಜಕೀಯ ಅವಕಾಶಾವನ್ನು ಒದಗಿಸಿದ್ದಾರೆ. ಇದನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಿರುವ ರಾಜ್, ದಿನದಿಂದ ದಿನಕ್ಕೆ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ.
ಬಿಜೆಪಿಗೆ ಜೈ ಎಂದ ರಾಜ್ ಠಾಕ್ರೆ: ಕೇಸರಿ ಧ್ವಜ ಅನಾವರಣ!
ಇದಕ್ಕೆ ಪುಷ್ಠಿ ಎಂಬಂತೆ ಪಾಕ್ ಹಾಗೂ ಅಕ್ರಮ ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಎಮ್ಎನ್ಎಸ್ ನಾಯಕ ರಾಜ್ ಠಾಕ್ರೆ ಮುಂಬೈನಲ್ಲಿ ಮೆಗಾ ಸಮಾವೇಶ ನಡೆಸಿದ್ದಾರೆ.
ಸುಮಾರು 100,000 ಕ್ಕೂ ಹೆಚ್ಚು ಎಂಎನ್‌ಎಸ್ ಕಾರ್ಯಕರ್ತರು ಮುಂಬೈನ ಪ್ರಮುಖ ಬೀದಿಗಳಲ್ಲಿ ಅಕ್ರಮ ವಲಸಿಗರನ್ನು ಹೊರಹಾಕುವಂತೆ ಘೋಷಣೆ ಕೂಗಿದರು. ಶಿವಾಜಿ ಪಾರ್ಕ್‌ನಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಆಜಾದ್ ಮೈದಾನದಲ್ಲಿ ಮೆರವಣಿಗೆ ಅಂತ್ಯಗೊಂಡಿತು.
ಈ ವೇಳೆ ಮಾತನಾಡಿದ ರಾಜ್ ಠಾಕ್ರೆ ಈ ರ್ಯಾಲಿ ಸಿಎಎ ಅಥವಾ ಎನ್‌ಆರ್‌ಸಿಯನ್ನು ಬೆಂಬಲಿಸಲು ಹಮ್ಮಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರಾದರೂ, ಇವುಗಳನ್ನು ಉಲ್ಲೇಖಿಸಿಯೇ ಭವಿಷ್ಯದಲ್ಲಿ ತಮ್ಮ ನಡೆ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಪ್ರಸಿದ್ಧ ಸಿದ್ಧಿ ವಿನಾಯಕ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ರಾಜ್ ಠಾಕ್ರೆ, ಪತ್ನಿ ಶರ್ಮಿಳಾ ಪುತ್ರ ಎಂಎನ್ಎಸ್ ನಾಯಕ ಅಮಿತ್ ಠಾಕ್ರೆ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು.
