ಬಿಜೆಪಿಗೆ ಜೈ ಎಂದ ರಾಜ್ ಠಾಕ್ರೆ: ಕೇಸರಿ ಧ್ವಜ ಅನಾವರಣ!
ಎಂಎನ್‌ಎಸ್ ಕೇಸರಿ ಧ್ವಜ ಅನಾವರಣ| ಬಿಜೆಪಿಗೆ ಜೈ ಎಂದ ರಾಜ್ ಠಾಕ್ರೆ| ಹಿಂದುತ್ವದತ್ತ ಹೆಜ್ಜೆ?| ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಪಡೆದ ರಾಜ್ ಠಾಕ್ರೆ ಮಗ
ಮುಂಬೈ[ಜ.24]: ಹಿಂದುತ್ವವನ್ನೇ ಮುಖ ಮಾಡಿಕೊಂಡ ಶಿವಸೇನೆ ಅಚ್ಚರಿಯ ರೀತಿಯಲ್ಲಿ ಕಾಂಗ್ರೆಸ್, ಎನ್‌ಸಿಪಿ ಜೊತೆ ಕೈಜೋಡಿಸಿದ ಬೆನ್ನಲ್ಲೇ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಪಕ್ಷದ ನೇತಾರ ರಾಜ್ ಠಾಕ್ರೆ ಅವರು ಸಂಪೂರ್ಣ ಕೇಸರಿ ಇರುವ ಪಕ್ಷದ ಹೊಸ ಧ್ವಜವನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಸಿಎಎ ಹಾಗೂ NRCಗೂ ಪರೋಕ್ಷ ಬೆಂಬಲ ಸೂಚಿಸಿದ್ದಾರೆ.
ರಾಜ್ ಠಾಕ್ರೆ ಈ ನಡೆಯನ್ನು ಇದು ಪಕ್ಷದ ತತ್ವಗಳಲ್ಲಿ ಆಗುತ್ತಿರುವ ಬದಲಾವಣೆ. ಅವರು ಹಿಂದುತ್ವದತ್ತ ಹೆಜ್ಜೆ ಹಾಕುತ್ತಿದ್ದಾರೆ, ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ರಾಮಮಂತ್ರ ಜಪಿಸಿದ ಶಿವಸೇನೆ: ಮಾರ್ಚ್‌ನಲ್ಲಿ ಉದ್ಧವ್ ಆಯೋಧ್ಯೆಗೆ!
ಸಿಎಎ ಪರ ರಾಜ್ ಠಾಕ್ರೆ ಹೇಳಿದ್ದೇನು?
ಇನ್ನು ಇದೇ ವೇಳೆ ಸಿಎಎ ಪರ ಮಾತನಾಡಿದ್ದ ರಾಜ್ ಠಾಕ್ರೆ 'ಮಹಾರಾಷ್ಟ್ರ ನವ ನಿರ್ಮಾಣ ಸೇನೆ ರಾಜ್ಯಾದ್ಯಂತ ಅಕ್ರಮ ವಲಸಿಗರ ವಿರುದ್ಧ ಜಾಗೃತಿ ಅಭಿಯಾನವನ್ನು ನಡೆಸುತ್ತೇನೆ. ಭಾರತದ ಗಡಿಯೊಳಗೆ ನುಗ್ಗಿ ದೇಶದ ಭದ್ರತೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಅಕ್ರಮ ನುಸುಳುಕೋರರನ್ನು ಸಮರ್ಥಿಸಲು ಸಾಧ್ಯವಿಲ್ಲ. ಹೋರಾಟಗಳ ದಿಕ್ಕು ತಪ್ಪಿಸಲಾಗುತ್ತಿದೆ. ಹೀಗಾಗಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯು ಹೋರಾಟ ನಡೆಸಲಿದೆ ಎಂದು ರಾಜ್ ಠಾಕ್ರೆ ತಿಳಿಸಿದ್ದಾರೆ.
ಇದೇ ವೇಳೆ ರಾಜ್ ಠಾಕ್ರೆ, ಮಗ ಆಮಿತ್ ಠಾಕ್ರೆ ಕೂಡಾ ತನ್ನ ತಂದೆಯ ನೇತೃತ್ವದ MNS ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಮಹಾರಾಷ್ಟ್ರ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಮುಸ್ಲಿಮರ ಒತ್ತಾಯದಂತೆ ಶಿವಸೇನೆ ಜತೆ ಕಾಂಗ್ರೆಸ್ ಮೈತ್ರಿ
ಈ ಹಿಂದೆ ಹೇಗಿತ್ತು ಧ್ವಜ?
ಈವರೆಗೆ ಎಂಎನ್‌ಎಸ್ ಕೇಸರಿ, ನೀಲಿ ಹಾಗೂ ಹಸಿರು ಬಣ್ಣದ ಧ್ವಜ ಹೊಂದಿತ್ತು. ಆದರೆ ಗುರುವಾರ ಠಾಕ್ರೆ ಬಿಡುಗಡೆ ಮಾಡಿರುವ ಧ್ವಜ ಸಂಪೂರ್ಣ ಕೇಸರಿಯಾಗಿದ್ದು, ಇದರಲ್ಲಿ ಶಿವಾಜಿ ಮಹಾರಾಜರ ಕಾಲದಲ್ಲಿ ಬಳಕೆಯಲ್ಲಿದ್ದ ರಾಜಮುದ್ರೆಯ ಚಿತ್ರವಿದೆ. ಧ್ವಜ ಅನಾವರಣಕ್ಕೂ ಮುನ್ನ ರಾಜ್ ಅವರು ಶಿವಸೇನಾ ಸಂಸ್ಥಾಪಕ ದಿ. ಬಾಳಾ ಠಾಕ್ರೆ ಅವರ 94ನೇ ಜನ್ಮದಿನದ ನಿಮಿತ್ತ ನಮನ ಸಲ್ಲಿಸಿದರು.
ಸಾಯಿಬಾಬಾ ಜನ್ಮಸ್ಥಾನ: ಹೇಳಿಕೆ ಹಿಂಪಡೆದ ಉದ್ಧವ್
2006ರಲ್ಲಿ ಶಿವಸೇನೆಯಿಂದ ಹೊರಬಂದು ರಾಜ್ ಎಂಎನ್‌ಎಸ್ ಸ್ಥಾಪಿಸಿದ್ದರು.
ಜನವರಿ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ