* ಕಾಂಗ್ರೆಸ್ ಸರ್ಕಾರದ ವಿರುದ್ಧ ಲೇಖನ ಬರೆದಿದ್ದ ಪತ್ರಕರ್ತ ಅರೆಸ್ಟ್‌* ಮ್ಯಾಗಜೀನ್ ಸಂಪಾದಕ ಶರ್ಮಾ ಬಿಲಾಸ್ಪುರ ಜೈಲಿಗೆ ಶಿಫ್ಟ್* ಶರ್ಮಾ ಬಂಧನ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ರಾಯ್ಪುರ(ಮಾ.07): ಛತ್ತೀಸ್‌ಗಢದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿ ರಾಜಕೀಯವಾಗಿ ವ್ಯಂಗ್ಯವಾಡಿದ ಬರೆದ ಆರೋಪದ ಮೇಲೆ ಬಂಧಿಸಲ್ಪಟ್ಟ ರಾಯ್‌ಪುರ ಮೂಲದ ಪತ್ರಕರ್ತ ನೀಲೇಶ್ ಶರ್ಮಾ ಅವರನ್ನು ಶನಿವಾರ ರಾಯ್‌ಪುರದಿಂದ ಬಿಲಾಸ್‌ಪುರ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ರಕರ್ತನ ಬಂಧನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೀಗಿದ್ದರೂ ಶರ್ಮಾ ಅವರ ಫೋನ್‌ನಲ್ಲಿ ಕಂಡುಬಂದ ಅಶ್ಲೀಲ ವಿಚಾರಗಳಿಗೆ ಸಂಬಂಧಿಸಿದಂತೆ ರಾಯ್‌ಪುರ ಪೊಲೀಸರು ಅವರ ವಿರುದ್ಧ ಮತ್ತಷ್ಟು ಕೇಸ್ ದಾಖಲಿಸಲು ನಿರ್ಧರಿಸಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ.

ಆನ್‌ಲೈನ್ ಪೋರ್ಟಲ್ Indiawriters.co.in ಮತ್ತು ಅದರ ಮ್ಯಾಗಜೀನ್ ಸಂಪಾದಕ ಶರ್ಮಾ ಅವರನ್ನು ರಾಯ್‌ಪುರ ಪೊಲೀಸರ ಸೈಬರ್ ಸೆಲ್ ಬುಧವಾರ ಬಂಧಿಸಿದೆ. ಶರ್ಮಾ ‘ಘುರ್ವಾಕೆ ಮಟಿ’ ಎಂಬ ಅಂಕಣದಲ್ಲಿ ಸರಣಿ ಲೇಖನಗಳನ್ನು ಹಾಕಿದ್ದರು. ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ನೀಡಿದ ದೂರಿನ ಪ್ರಕಾರ, ಈ ರಾಜಕೀಯ ವಿಡಂಬನೆಗಳಲ್ಲಿನ ಕಾಲ್ಪನಿಕ ಪಾತ್ರಗಳು ಪ್ರಸ್ತುತ ಸರ್ಕಾರದ ಸಚಿವರು ಮತ್ತು ಶಾಸಕರನ್ನು ಹೋಲುತ್ತವೆ ಎನ್ನಲಾಗಿದೆ.

ಶನಿವಾರ ನೀಡಿದ ಹೇಳಿಕೆಯಲ್ಲಿ ರಾಯ್‌ಪುರ ಪೊಲೀಸರು ಶರ್ಮಾ ಅವರ ಫೋನ್‌ನಲ್ಲಿ ಅಶ್ಲೀಲ ವಿಚಾರಗಳು ಕಂಡುಕೊಂಡಿದ್ದಾರೆ ಎಂದು ಹೇಳಿದ್ದಾರೆ. “ಅವನು ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಮಹಿಳೆಯರೊಂದಿಗೆ ಸಂಪರ್ಕದಲ್ಲಿದ್ದ. ಜನರೊಂದಿಗೆ ಆಕ್ಷೇಪಾರ್ಹ ಸಂಭಾಷಣೆಗಳನ್ನು ಸಹ ನಡೆಸುತ್ತಿರುವುದು ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಲ್ಲದೇ ಆತನ ಮೊಬೈಲ್‌ನಿಂದ ಸರ್ಕಾರಿ ಗೌಪ್ಯ ದಾಖಲೆಗಳು ಹಾಗೂ ಇತರೆ ದಾಖಲೆಗಳು ಪೊಲೀಸರಿಗೆ ಸಿಕ್ಕಿವೆ. “ಸರ್ಕಾರದೊಳಗಿನ ಯಾರೊಬ್ಬರ ಸಹಾಯವಿಲ್ಲದೆ ಈ ದಾಖಲೆ ಗಳಿಸಲು ಸಾಧ್ಯವಿಲ್ಲ. ಅವರೊಂದಿಗೆ ಯಾರು ಕೆಲಸ ಮಾಡುತ್ತಿದ್ದಾರೆಂದು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು.

ಏತನ್ಮಧ್ಯೆ, ರಾಜಕೀಯ ವಿಡಂಬನೆಗಾಗಿ ಶರ್ಮಾ ಅವರನ್ನು ಬಂಧಿಸಿದ ರಾಜ್ಯದ ನಿರ್ಧಾರವನ್ನು ದೇಶಾದ್ಯಂತ ಪತ್ರಕರ್ತರು ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ಅನ್ನು ಗುರಿಯಾಗಿಸಿದೆ. ಪತ್ರಕರ್ತರ ಮೇಲಿನ ಕಿರುಕುಳದ ಕುರಿತು ನಾವು ಸರ್ಕಾರವನ್ನು ಪ್ರಶ್ನಿಸಲಿದ್ದೇವೆ. ಪತ್ರಕರ್ತರ ರಕ್ಷಣೆಗೆ ರಾಜ್ಯದಲ್ಲಿ ಕಾನೂನು ಎಲ್ಲಿದೆ ಎಂದು ಬಿಜೆಪಿ ನಾಯಕಿ ಹಾಗೂ ರಾಜ್ಯ ಉಸ್ತುವಾರಿ ಡಿ.ಪುರಂದೇಶ್ವರಿ ಪ್ರಶ್ನಿಸಿದರು.

ಸ್ಪಾ ಓನರ್‌ಗೆ ಬೆದರಿಸಿ ಹಣ ಸುಲಿದ ಗೃಹರಕ್ಷಕರು, ಪತ್ರಕರ್ತ ಸೆರೆ

ಅಕ್ರಮ ಚಟುವಟಿಕೆ ನಡೆಸುತ್ತಿದ್ದು, ಪ್ರಕರಣ ದಾಖಲಿಸುವುದಾಗಿ ಪೊಲೀಸರ(Police) ಸೋಗಿನಲ್ಲಿ ‘ಸ್ಪಾ’ ಮಾಲಿಕರೊಬ್ಬರಿಗೆ ಬೆದರಿಸಿ ಹಣ ಸುಲಿಗೆ ಮಾಡಿದ್ದ ಪತ್ರಕರ್ತ(Journalist) ಹಾಗೂ ನಾಲ್ವರು ಗೃಹ ರಕ್ಷಕ ಸಿಬ್ಬಂದಿಯನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್‌.ಟಿ.ನಗರದ ಕಾವಲ್‌ಭೈರಸಂದ್ರದ ಸೈಯದ್‌ ಖಲೀಂ, ಗೃಹ ರಕ್ಷಕ ಸಿಬ್ಬಂದಿ ಡಿ.ಜೆ.ಹಳ್ಳಿಯ ಸಂಪಂಗಿರಾಮ್‌, ಆಸೀಫ್‌, ಲಿಂಗರಾಜಪುರದ ಆನಂದರಾಜ್‌ ಹಾಗೂ ವಿನಾಯಕ್‌ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) ಹಣ ಜಪ್ತಿ ಮಾಡಲಾಗಿದೆ.

ರಾಮಮೂರ್ತಿ ನಗರ ಸಮೀಪದ ಜಯಂತಿ ನಗರದ ಮುಖ್ಯರಸ್ತೆಯ ‘ಆಲಯ್ಯಾ ಸೆಲೂನ್‌ ಆ್ಯಂಡ್‌ ಸ್ಪಾ’ ಒಡತಿ ಪ್ರಭಾ ಅವರಿಗೆ ಬೆದರಿಸಿ 1.60 ಲಕ್ಷ ಸುಲಿಗೆ ಮಾಡಿದ್ದರು. ಈ ಬಗ್ಗೆ ಪ್ರಭಾ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Dowry Harassment: ಗರ್ಭಿಣಿ ಪತ್ನಿಯನ್ನು ಸಿಗರೇಟ್‌ನಿಂದ ಸುಡ್ತಿದ್ದ ಕುಂದಾಪುರದ ಗಂಡ

ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿ ಕಚೇರಿಯಲ್ಲಿ ಗೃಹ ರಕ್ಷಕ ಸಂಪಂಗಿರಾಮ್‌, ಹೆಣ್ಣೂರು ಠಾಣೆಯಲ್ಲಿ ಆಸೀಫ್‌ ಹಾಗೂ ಆನಂದ್‌ ರಾಜ್‌ ಮತ್ತು ವಿನಾಯಕ್‌ ಅವರು ಹಲಸೂರು ಸಮೀಪದ ಗೃಹ ರಕ್ಷಕ ದಳ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹಲವು ದಿನಗಳಿಂದ ಸಂಪಂಗಿರಾಮ್‌ಗೆ ‘ಕಸ್ಟಮ್ಸ್‌ ಮತ್ತು ಎಕ್ಸೈಸ್‌ ವಾಯ್ಸ್‌’ ಎಂಬ ಹೆಸರಿನ ಪತ್ರಿಕೆ ವರದಿಗಾರ ಖಲೀಂ ಪರಿಚಯ ಇದ್ದ. ಹಣದಾಸೆಗೆ ಮಸಾಲ್‌ ಪಾರ್ಲರ್‌ಗೆ ಪೊಲೀಸರ ಹೆಸರಿನಲ್ಲಿ ಬೆದರಿಸಿ ಸುಲಿಗೆಗೆ ಸಂಪಂಗಿರಾಮ್‌ ಯೋಜಿಸಿದ್ದ, ಇದಕ್ಕೆ ಇನ್ನುಳಿದ ಆರೋಪಿಗಳು ಸಾಥ್‌ ಕೊಟ್ಟಿದ್ದಾರೆ.

ಅಂತೆಯೇ ಜಯಂತಿನಗರದ ಆಲಯ್ಯಾ ಸ್ಪಾ ಮೇಲೆ ದಾಳಿ ನಡೆಸಿದ ಆರೋಪಿಗಳು, ತಮ್ಮ ಗುರುತಿನ ಚೀಟಿ ತೋರಿಸಿ ಪೊಲೀಸರೆಂದು ಪರಿಚಯಿಸಿಕೊಂಡಿದ್ದಾರೆ. ‘ನೀವು ಸ್ಪಾ ಹೆಸರಿನಲ್ಲಿ ಕಾನೂನುಬಾಹಿರವಾಗಿ ಮಸಾಜ್‌ ಪಾರ್ಲರ್‌ ನಡೆಸುತ್ತಿರುವ ಮಾಹಿತಿ ಇದೆ. ಹಣ(Money) ಕೊಡದೆ ಹೋದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ’ ಎಂದು ಬೆದರಿಸಿದ್ದಾರೆ. ಈ ಮಾತಿಗೆ ಹೆದರಿದ ಪ್ರಭಾ ಅವರಿಂದ .60 ಸಾವಿರ ನಗದು ಹಣ ಹಾಗೂ ಗೂಗಲ್‌ ಮತ್ತು ಪೋನ್‌ ಪೇ ಮೂಲ .1 ಲಕ್ಷವನ್ನು ಆರೋಪಿಗಳು ಪಡೆದಿದ್ದರು. ಇದಾದ ಬಳಿಕ ಮತ್ತೆ .30 ಸಾವಿರಕ್ಕೆ ಪ್ರಭಾ ಅವರಿಗೆ ಆರೋಪಿಗಳು ಬ್ಲ್ಯಾಕ್‌ಮೇಲ್‌(Blackmail) ಮಾಡಿದ್ದರು. ಈ ಕಾಟದಿಂದ ರೋಸಿ ಹೋದ ಅವರು, ಕೊನೆಗೆ ರಾಮಮೂರ್ತಿ ನಗರ ಠಾಣೆಗೆ ಬಂದು ದೂರು ನೀಡಿದರು. ಅಂತೆಯೇ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.