Railway News: ನವೀಕೃತ ರೈಲ್ವೇ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ
ಇನ್ನು ಮುಂದೆ ರೈಲು ಪ್ರಯಾಣ ದುಬಾರಿಯಾಗುವ ಸಾಧ್ಯತೆ ಇದೆ. ನವೀಕೃತಗೊಂಡ ರೈಲು ನಿಲ್ದಾಣಗಳಲ್ಲಿ ಇಳಿಯುವ ಮತ್ತು ಹತ್ತುವ ಪ್ರಯಾಣಿಕರಿಗೆ ಸ್ಟೇಶನ್ ಅಭಿವೃದ್ಧಿ ಶುಲ್ಕ (ಎಸ್‌ಡಿಎಫ್) ವಿಧಿಸಲು ಭಾರತೀಯ ರೈಲ್ವೇ ಯೋಜನೆ ರೂಪಿಸಿದೆ. ಪ್ರಯಾಣದ ಶ್ರೇಣಿ ಆಧರಿಸಿ ಈ ಶುಲ್ಕ ಭಿನ್ನವಾಗಿರಲಿದೆ.
ನವದೆಹಲಿ (ಜ. 09): ಇನ್ನು ಮುಂದೆ ರೈಲು ಪ್ರಯಾಣ ದುಬಾರಿಯಾಗುವ ಸಾಧ್ಯತೆ ಇದೆ. ನವೀಕೃತಗೊಂಡ ರೈಲು ನಿಲ್ದಾಣಗಳಲ್ಲಿ (Redeveloped Stations) ಇಳಿಯುವ ಮತ್ತು ಹತ್ತುವ ಪ್ರಯಾಣಿಕರಿಗೆ ಸ್ಟೇಶನ್ ಅಭಿವೃದ್ಧಿ ಶುಲ್ಕ (ಎಸ್‌ಡಿಎಫ್) ವಿಧಿಸಲು ಭಾರತೀಯ ರೈಲ್ವೇ ಯೋಜನೆ (Indian Railway Project) ರೂಪಿಸಿದೆ. ಪ್ರಯಾಣದ ಶ್ರೇಣಿ ಆಧರಿಸಿ ಈ ಶುಲ್ಕ ಭಿನ್ನವಾಗಿರಲಿದೆ. ಈ ಹೆಚ್ಚುವರಿ ದರವನ್ನು ಟಿಕೆಟ್ ಬುಕಿಂಗ್ (Ticket Booking) ವೇಳೆಯೇ ಸೇರಿಸಲಾಗುತ್ತದೆ. ಆದರೆ ಉಪ ನಗರ ರೈಲು ಸೇವೆಯಲ್ಲಿ ಯಾವುದೇ ಎಸ್‌ಡಿಎಫ್ (SDF) ವಿಧಿಸಲಾಗುವುದಿಲ್ಲ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.
ಹೊಸ ಶುಲ್ಕವನ್ನು 3 ಬಗೆಯಾಗಿ ವಿಭಾಗಿಸಲಾಗಿದೆ. ಎ.ಸಿ. ಕ್ಲಾಸ್‌ಗಳಲ್ಲಿ ಪ್ರಯಾಣಿಸುವವರಿಗೆ 50 ರು., ಸ್ಲೀಪರ್‌ನಲ್ಲಿ ಪ್ರಯಾಣಿಸುವವರಿಗೆ 25 ರು., ಕಾಯ್ದಿರಿಸದ ಟಿಕೆಟ್ ಪಡೆದು ಪ್ರಯಾಣಿಸುವವರಿಗೆ 10 ರು. ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಇಂತಹ ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಶುಲ್ಕವನ್ನು 10 ರು. ಹೆಚ್ಚಿಸಲಾಗುವುದು ಎಂದು ರೈಲ್ವೇ ಇಲಾಖೆ ಹೇಳಿದೆ. ನವೀಕೃತಗೊಂಡ ನಿಲ್ದಾಣಗಲ್ಲಿ ಕೇವಲ ಇಳಿಯುವ ಪ್ರಯಾಣಿಕರಿಗೆ ಈ ಶುಲ್ಕದ ಶೇ.50ರಷ್ಟನ್ನು ವಿಧಿಸಲಾಗುತ್ತದೆ. ಈ ನಿಲ್ದಾಣಗಳಲ್ಲಿ ಹತ್ತುವ ಮತ್ತು ಇಳಿಯುವ ಪ್ರಯಾಣಿಕರಿಗೆ 1.5 ಪಟ್ಟು ಶುಲ್ಕ ವಿಧಿಸಲಾಗುತ್ತದೆ. ಎಲ್ಲಾ ನಿಲ್ದಾಣಗಳಲ್ಲೂ ಈ ಶುಲ್ಕ ಏಕರೂಪವಾಗಿರುತ್ತದೆ.
ಮಿಷನ್ ಜೀವನ್ ರಕ್ಷಾ ಅಡಿಯಲ್ಲಿ 2021ರಲ್ಲಿ 601 ಮಂದಿಯ ರಕ್ಷಣೆ ಮಾಡಿದ ರೈಲ್ವೇ ರಕ್ಷಣಾ ಪಡೆ!
ದೆಹಲಿ-ವಾರಣಾಸಿ, ಮುಂಬೈ-ನಾಗ್ಪುರ ನಡುವೆ ಹೈಸ್ಪೀಡ್ ರೈಲು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಮಹಾತ್ವಾಕಾಂಕ್ಷೆಯ ಯೋಜನೆಯಾಗಿರುವ ಬುಲೆಟ್ ಟ್ರೇನ್ ಪ್ರಾಜೆಕ್ಟ್ ಗಳನ್ನು ವಿಸ್ತರಣೆ ಮಾಡುವ ಗುರಿಯಲ್ಲಿದೆ. ಈಗಾಗಲೇ ಸರ್ಕಾರದ ಬಹುದೊಡ್ಡ ಯೋಜನೆಯಾಗಿರುವ ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ಟ್ರೇನ್ ಯೋಜನೆ ತೀರಾ ನಿಧಾನಗತಿಯಲ್ಲಿ ಸಾಗುತ್ತಿರುವ ನಡುವೆಯೇ ಮತ್ತೆರಡು ಬುಲೆಟ್ ಟ್ರೇನ್ ಪ್ರಾಜೆಕ್ಟ್ ಗಳಿಗೆ ಸರ್ಕಾರ ಕೈ ಹಾಕಿದೆ. ಮುಂದಿನ ಬಜೆಟ್ ನಲ್ಲಿ ಎರಡು ಹೊಸ ಯೋಜನೆ ಘೋಷಣೆಯಾಗಲಿದ್ದು, ದೆದೆಹಲಿ-ವಾರಣಾಸಿ ಹಾಗೂ ಮುಂಬೈ-ನಾಗ್ಪುರ ನಡುವೆ ಬುಲೆಟ್ ಟ್ರೇನ್ ಕಾರಿಡಾರ್ ಕಾಮಗಾರಿ ಆರಂಭವಾಗಲಿದೆ.
ದೇಶದ ರಾಜಧಾನಿ ನವದೆಹಲಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರವಾಗಿರುವ ವಾರಣಾಸಿಯವರೆಗೂ ಬುಲೆಟ್ ಟ್ರೇನ್ ಪ್ರಾಜೆಕ್ಟ್ ಗೆ ಈಗಾಗಲೇ ರೈಲ್ವೇ ಇಲಾಖೆ ಡಿಪಿಆರ್ ಸಿದ್ಧ ಮಾಡಿದ್ದು, ಕಳೆದ ತಿಂಗಳು ಇದನ್ನು ಸರ್ಕಾರಕ್ಕೆ ಸಲ್ಲಿಸಿದೆ. ಮೂಲಗಳ ಪ್ರಕಾರ ಮುಂದಿನ ಬಜೆಟ್ ನಲ್ಲಿ ಈ ಯೋಜನೆಗೆ ಅನುಮೋದನೆ ಸಿಗುವ ಸಾಧ್ಯತೆ ಹೆಚ್ಚಿದೆ. ಅದರೊಂದಿಗೆ ಮುಂಬೈ-ನಾಗ್ಪುರ ನಡುವಿನ ಬುಲೆಟ್ ಟ್ರೇನ್ ಯೋಜನೆಯನ್ನೂ ಘೋಷಣೆ ಮಾಡುವ ಸಾಧ್ಯತೆ ಇದೆ. ಆದರೆ, ಮಹಾರಾಷ್ಟ್ರ ಸರ್ಕಾರ ಇದಕ್ಕೆ ಎಷ್ಟು ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಲಿದೆ ಎನ್ನುವುದರಲ್ಲಿ ಸರ್ಕಾರ ಸ್ಪಷ್ಟತೆ ಬಯಸಿದೆ.
South Western Railway: ‘ಗಾಡ್ ಫಾದರ್’ ಲೋಕೋ 12001 ರೈಲು ಮರಳಿ ಸೇವೆಗೆ..!
ರಾಷ್ಟ್ರೀಯ ಹೈ ಸ್ಪೀಡ್ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಎನ್ ಎಚ್ಆರ್ ಸಿಎಲ್) ಈಗಾಗಲೇ ದೆಹಲಿ-ವಾರಣಾಸಿ ಬುಲೆಟ್ ಟ್ರೇನ್ ಕಾರಿಡಾರ್ ಗೆ ವಿವರವಾದ ಪ್ರಾಜೆಕ್ಟ್ ರಿಪೋರ್ಟ್ (ಡಿಪಿಆರ್) ಅನ್ನು ಕಳೆದ ನವೆಂಬರ್ ನಲ್ಲಿ ಸಲ್ಲಿಕೆ ಮಾಡಿದೆ. ಇನ್ನು ಮುಂಬೈ-ನಾಗ್ಪುರ ನಡುವಿನ ಡಿಪಿಆರ್ ಕೂಡ ಅಂತಿಮ ಹಂತದಲ್ಲಿದೆ ಎಂದು ಎನ್ ಎಚ್ಆರ್ ಸಿಎಲ್ ವಕ್ತಾರರೊಬ್ಬರು ತಿಳಿಸಿದ್ದಾರೆ. ಮುಂದಿನ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ನಲ್ಲಿ ರೈಲ್ವೇ ಇಲಾಖೆಗೆ ಇದನ್ನು ಸಲ್ಲಿಕೆ ಮಾಡಲಿದೆ. ಅಅದರೊಂದಿಗೆ ಇನ್ನೂ ಐದು ಬುಲೆಟ್ ಟ್ರೇನ್ ಗಳ ಡಿಪಿಆರ್ ಅನ್ನು ಎನ್ ಎಚ್ಆರ್ ಸಿಎಲ್ ಸಿದ್ಧ ಮಾಡುತ್ತದ್ದು 2023ರ ಹಣಕಾಸು ವರ್ಷದಲ್ಲಿ ಇದನ್ನು ಪೂರ್ಣ ಮಾಡಿ ಸರ್ಕಾರಕ್ಕೆ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.