South Western Railway: ‘ಗಾಡ್‌ ಫಾದರ್‌’ ಲೋಕೋ 12001 ರೈಲು ಮರಳಿ ಸೇವೆಗೆ..!

*  ಭಾರತದ ಮೊದಲ ಅಧಿಕ ಅಶ್ವಶಕ್ತಿಯ ಡೀಸೆಲ್‌ ‘ಲೋಕೋಮೋಟಿವ್‌ 12001’ ಎಂಜಿನ್‌
*  1999ರಲ್ಲಿ ಅಮೆರಿಕದಿಂದ ಭಾರತಕ್ಕೆ ಬಂದಿದ್ದ ಎಂಜಿನ್‌ 
*  ಅತ್ಯಂತ ವಿಶ್ವಾಸಾರ್ಹ ಎಂಜಿನ್‌ ಆಗಿದ್ದು, ಹೆಚ್ಚಿನ ಸಾಮರ್ಥ್ಯ ಹೊಂದಿವೆ 
 

Godfather Loco 12001 Train Back to Service in South Western Railway grg

ಹುಬ್ಬಳ್ಳಿ(ಡಿ.29):  ‘ಗಾಡ್‌ ಫಾದರ್‌’(God Father) ಎಂದೇ ಕರೆಸಿಕೊಳ್ಳುವ ಭಾರತೀಯ ರೈಲ್ವೆಯ(Indian Railways) ಮೊದಲ ಅಧಿಕ ಅಶ್ವಶಕ್ತಿಯ (ಎಚ್‌ಎಚ್‌ಪಿ) ಡೀಸೆಲ್‌ ‘ಲೋಕೋಮೋಟಿವ್‌ 12001’ ಎಂಜಿನ್‌ನ್ನು ಇಲ್ಲಿನ ಡೀಸೆಲ್‌ ಲೋಕೋಶೆಡ್‌ನಲ್ಲಿ ಆವರ್ತಕ ನಿರ್ವಹಣೆಗೆ ಒಳಪಡಿಸಿ ಮರುಸೇವೆಗೆ ಸಜ್ಜಾಗಿಸಲಾಗಿದೆ.

ನೈಋುತ್ಯ ರೈಲ್ವೆಯಲ್ಲಿ(South Western Railway) ಸರಕು ಸಾಗಣೆಗೆ ಬಳಸಲಾಗುವ ಈ ಎಂಜಿನ್‌ನ್ನು 18 ವರ್ಷಗಳಿಗೆ ಒಮ್ಮೆ ಆವರ್ತಕ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಅದರಂತೆ ‘ಲೋಕೋಮೋಟಿವ್‌ 12001’(Locomotive 12001) ಎಂಜಿನ್‌ನ ಮೂಲಮನೆಯಾದ (ಹೋಂ ಶೆಡ್‌) ನಗರದ ಎಚ್‌ಎಚ್‌ಪಿ ಡೀಸೆಲ್‌ ಲೋಕೋಶೆಡ್‌ಗೆ ತರಿಸಿಕೊಂಡು ದುರಸ್ತಿ ಮಾಡಲಾಗಿದೆ. ಹೊಸ ಬಣ್ಣ ಬಳಿಯಲಾಗಿದ್ದು, ಹೊಸ ಎಂಜಿನ್‌ ಕಾರ್ಯಕ್ಷಮತೆಯಂತೆ ಕಾರ್ಯ ನಿರ್ವಹಿಸುವಂತೆ ಮಾಡಿ ಡಿ.27ರಂದು ಮರುಸೇವೆಗೆ ನಿಯೋಜಿಸಲಾಗಿದೆ.

Karnataka Train Service : ಹೊಸ ರೈಲು ಮಾರ್ಗ ಯೋಜನೆಗೆ ವಿರೋಧ

ಲೋಕೋಶೆಡ್‌ ವರಿಷ್ಠ ವಿಭಾಗೀಯ ಯಾಂತ್ರಿಕ ಎಂಜಿನಿಯರ್‌ ಶ್ರೀಭೇಷ್‌ ದತ್‌ ಮಾತನಾಡಿ, ಅಧಿಕ ಅಶ್ವಶಕ್ತಿಯ ಲೋಕೋಮೋಟಿವ್‌ ನಿರ್ವಹಣೆಗಾಗಿ 1999ರಲ್ಲೇ ಹುಬ್ಬಳ್ಳಿಯಲ್ಲಿ(Hubballi) ಎಚ್‌ಎಚ್‌ಪಿ ಡೀಸೆಲ್‌ ಲೋಕೋಶೆಡ್‌ ಸ್ಥಾಪಿಸಲಾಗಿತ್ತು. ಎಲ್ಲ ಎಂಜಿನ್‌ಗಳಿಗೂ ಅದರದ್ದೇ ಆದ ಮೂಲ ಶೆಡ್‌ ಅಂದರೆ ಪರಿಶೀಲನೆ, ದುರಸ್ತಿ ಪಡಿಸುವ ವರ್ಕ್ಶಾಪ್‌ ಇರುತ್ತದೆ. ಕಳೆದ 18 ವರ್ಷದಲ್ಲಿ ಈ ಎಂಜಿನ್‌ ಯಾವುದೇ ದೊಡ್ಡ ಪ್ರಮಾಣದ ವೈಫಲ್ಯಕ್ಕೆ ಒಳಗಾಗಿಲ್ಲ. ಸೂಕ್ತ ನಿರ್ವಹಣೆಗಾಗಿ ಡೀಸೆಲ್‌ ಶೆಡ್‌ಗೆ ತಂದು ನಿರ್ವಹಣೆ ಮಾಡಿದ್ದೇವೆ ಎಂದರು.

ಇದು ಅತ್ಯಂತ ವಿಶ್ವಾಸಾರ್ಹ ಎಂಜಿನ್‌ ಆಗಿದ್ದು, ಹೆಚ್ಚಿನ ಸಾಮರ್ಥ್ಯ ಹೊಂದಿವೆ. ಕಬ್ಬಿಣದ ಅದಿರು, ಸಿಮೆಂಟ್‌, ರಸಗೊಬ್ಬರ ಇತ್ಯಾದಿ ಸರಕು ಸಾಗಣೆಗೆ ಈ ಎಂಜಿನ್‌ ಬಳಕೆಯಾಗುತ್ತದೆ. ಹುಬ್ಬಳ್ಳಿ ವಿಭಾಗದ ಆದಾಯ ಹೆಚ್ಚಿಸುವಲ್ಲಿ ಈ ಎಂಜಿನ್‌ ಪಾತ್ರವೂ ಮಹತ್ವದ್ದು. ವಿಭಾಗದ ಬಹುತೇಕ ಎಂಜಿನ್‌ಗಳ ಅಗತ್ಯ ನಿರ್ವಹಣೆಯನ್ನು ಹುಬ್ಬಳ್ಳಿಯ ಡೀಸೆಲ್‌ ಲೋಕೋಶೆಡ್‌ ಪೂರೈಸುತ್ತಿದೆ ಎಂದು ಹೇಳಿದರು.

ಗಾಡ್‌ಫಾದರ್‌ ‘ಲೋಕೋ12001’

4ಸಾವಿರ ಎಚ್‌ಎಚ್‌ಪಿ ಸಾಮರ್ಥ್ಯದ ಈ ಎಂಜಿನ್‌ 1999ರಲ್ಲಿ ಅಮೆರಿಕದಿಂದ ಭಾರತಕ್ಕೆ(India) ಬಂದಿತ್ತು. ಆಗ ಬಂದ 13 ಲೋಕೋಮೋಟಿವ್‌ಗಳ ಪೈಕಿ ‘ಲೋಕೋ12001’ ಮೊಟ್ಟಮೊದಲ ಅಧಿಕ ಅಶ್ವಶಕ್ತಿಯ ಡೀಸೆಲ್‌ ಇಂಜಿನ್‌ ಇದು. ಅಲ್ಲದೆ, ಭಾರತೀಯ ರೈಲ್ವೆಗಾಗಿ ತಯಾರಿಸಲಾದ ಮೊದಲ ಪ್ರೊಟೋಟೈಪ್‌ ಎಚ್‌ಎಚ್‌ಪಿ ಡೀಸೆಲ್‌ ಲೋಕೋ ಎನ್ನುವ ಹೆಗ್ಗಳಿಕೆಯೂ ಈ ಎಂಜಿನ್‌ಗಿದೆ. ಈ ಲೋಕೋ ಎಂಜಿನ್‌ ಆಗಮನದ ಬಳಿಕವೇ ಭಾರತೀಯ ರೈಲ್ವೆಯಲ್ಲಿ ಅಧಿಕ ಅಶ್ವಶಕ್ತಿಯ ಡೀಸೆಲ್‌ ಲೋಕೋಮೋಟಿವ್‌ ಎಂಜಿನ್‌ಗಳ ಹೊಸಯುಗ ಆರಂಭವಾಯಿತು. ಅದಕ್ಕಾಗಿಯೆ ಇದನ್ನು ರೈಲ್ವೆ ವಲಯ ‘ಗಾಡ್‌ಫಾದರ್‌’ ಹೆಸರಿನಿಂದ ಕರೆಯುತ್ತದೆ.

ಹುಬ್ಬಳ್ಳಿಯ ಎಚ್‌ಎಚ್‌ಪಿ ಡೀಸೆಲ್‌ ಲೋಕೋಶೆಡ್‌ ‘ಲೋಕೋ12001’ ಎಂಜಿನ್‌ನ ಆವರ್ತಕ ಪರಿಶೀಲನೆ ಮುಗಿದಿದ್ದನ್ನು ಗಮನಿಸಿ ಶೆಡ್‌ಗೆ ತರಿಸಿ ಕೂಲಂಕಶವಾಗಿ ಪರಿಶೀಲಿಸಿ ನಿರ್ವಹಣೆ ಮಾಡಲಾಗಿದೆ ಅಂತ ನೈಋುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ. 

ಇದೇ ಮೊದಲ ಬಾರಿಗೆ ಮೈಸೂರು- ಹುಬ್ಬಳ್ಳಿ ನಡುವೆ ವಿದ್ಯುತ್‌ ರೈಲು ಸಂಚಾರ

ಹುಬ್ಬಳ್ಳಿ: ಇಲ್ಲಿನ ನೈಋುತ್ಯ ರೈಲ್ವೆ(South Western Railway) ಶ್ರೀ ಸಿದ್ಧಾರೂಢ ಸ್ವಾಮೀಜಿ (ಎಸ್‌ಎಸ್‌ಎಸ್‌) ನಿಲ್ದಾಣದಿಂದ ಭಾನುವಾರ ಮೊದಲ ಬಾರಿ ಎರಡು ಇ-ಲೋಕೋಮೋಟಿವ್‌ (ವಿದ್ಯುತ್‌ ಚಾಲಿತ) ರೈಲುಗಳು(Train) ಡಿ.26 ರಂದು ಯಶಸ್ವಿ ಸಂಚಾರ ನಡೆಸಿದ್ದವು. ಮೈಸೂರು- ಹುಬ್ಬಳ್ಳಿ(Mysuru-Hubballi) ನಡುವಿನ ಹಂಪಿ ಎಕ್ಸ್‌ಪ್ರೆಸ್‌ (16592) ರೈಲು ಎಸ್‌ಎಸ್‌ಎಸ್‌ ನಿಲ್ದಾಣಕ್ಕೆ ಆಗಮಿಸಿದ ಮೊದಲ ವಿದ್ಯುತ್‌ ಲೋಕೋಮೋಟಿವ್‌(Electric Locomotive) ರೈಲು ಎನಿಸಿತು.

Children's Help Center: ಹುಬ್ಳಿ ರೈಲ್ವೆ ನಿಲ್ದಾಣದಲ್ಲಿ 484 ಮಕ್ಕಳ ರಕ್ಷಿಸಿದ ಸಹಾಯವಾಣಿ ಕೇಂದ್ರ

ಶನಿವಾರ ಸಂಜೆ ಹಂಪಿ 6.35ಕ್ಕೆ ಮೈಸೂರಿನಿಂದ (ಆರ್‌ಪಿಎಂ) ಡಬ್ಲೂಎಪಿ-7 30680 ಎಂಜಿನ್‌ ಮೂಲಕ ಹೊರಟಿದ್ದ ಇ-ಲೋಕೋಮೋಟೆವ್‌ ಹಂಪಿ ಎಕ್ಸ್‌ಪ್ರೆಸ್‌(Hampi Express) ಮೈಸೂರು- ಬೆಂಗಳೂರು- ಗುಂತಕಲ್‌- ಬಳ್ಳಾರಿ- ಹೊಸಪೇಟೆ- ಗದಗ ಮಾರ್ಗವಾಗಿ ಹುಬ್ಬಳ್ಳಿಗೆ ಆಗಮಿಸಿತು. ಬೆಳಗ್ಗೆ 10.30ಕ್ಕೆ ಎಸ್‌ಎಸ್‌ಎಸ್‌ ರೈಲ್ವೆ ನಿಲ್ದಾಣ ಪ್ರವೇಶಿತು. ಬಳಿಕ ಸಂಜೆ 6.20ಕ್ಕೆ ಪುನಃ ಮೈಸೂರಿಗೆ ತೆರಳಿದೆ.

ಇಲ್ಲಿವರೆಗೆ ಹೊಸಪೇಟೆ(Hosapete) ವರೆಗೆ ವಿದ್ಯುತ್‌ ಮಾರ್ಗವಿದ್ದ ಕಾರಣ ಅಲ್ಲಿ ನಿಲುಗಡೆ ಮಾಡಿ ಇ-ಲೋಕೋಮೋಟಿವ್‌ ಎಂಜಿನ್‌ ಬದಲಿಸಿ ಡೀಸೆಲ್‌ ಎಂಜಿನ್‌ ಜೋಡಿಸಲಾಗುತ್ತಿತ್ತು. ಇದೀಗ ಹೊಸಪೇಟೆಯಿಂದ ಹುಬ್ಬಳ್ಳಿ ವರೆಗೂ ವಿದ್ಯುತ್‌ ಮಾರ್ಗ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೊದಲ ಬಾರಿ ವಿದ್ಯುತ್‌ ಚಾಲಿತ ರೈಲು ಸಂಚಾರ ನಡೆಸಿದೆ.
 

Latest Videos
Follow Us:
Download App:
  • android
  • ios