ರೈಲಿನಂತೆ ಕಾಣುವ ಇದು ರೈಲಲ್ಲಾ ಮತ್ತೇನಿರಬಹುದು ವೀಡಿಯೋ ನೋಡಿ

ಕೇರಳದಲ್ಲಿ ರೈಲ್ವೆಯ ನಿವೃತ್ತ ಉದ್ಯೋಗಿಯೊಬ್ಬರು ತಮ್ಮ ಮನೆಯ ಕಾಂಪೌಂಡ್‌ನ್ನು ರೈಲಿನ ಥೀಮ್‌ನಲ್ಲಿ ನಿರ್ಮಿಸಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

Railway retired employee built railway coach themed compound in Kerala akb

ಕೇರಳ: ಕೇರಳದಲ್ಲಿ ರೈಲ್ವೆಯ ನಿವೃತ್ತ ಉದ್ಯೋಗಿಯೊಬ್ಬರು ತಮ್ಮ ಮನೆಯ ಕಾಂಪೌಂಡ್‌ನ್ನು ರೈಲಿನ ಥೀಮ್‌ನಲ್ಲಿ ನಿರ್ಮಿಸಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಮನೆಯ ಕಾಂಪೌಂಡ್‌ ಗೋಟೆ ಅಕ್ಷರಶಃ ರೈಲಿನಂತೆಯೇ ಕಾಣಿಸುತ್ತಿದೆ. ಹತ್ತಿರ ಬಂದು ನೋಡಿದ ನಂತರವಷ್ಟೇ ಇದು ರೈಲಲ್ಲ ಕಾಂಪೌಂಡ್‌ನ ಗೋಡೆ ಎಂಬುದು ತಿಳಿಯುತ್ತದೆ. ಈ ಕಾಂಪೌಂಡ್ ನಿರ್ಮಾಣದಲ್ಲೂ ಹೀಗೆ ಕ್ರಿಯೇಟಿವಿಟಿ ತೋರಿದ್ದು, ರೈಲ್ವೆಯ ನಿವೃತ್ತ ನೌಕರ ಎಂಬುದು ತಿಳಿದು ಬಂದಿದೆ. ಕೇರಳದ ಕೋಜಿಕೋಡ್‌ನಲ್ಲಿ ಈ ವಿಭಿನ್ನವಾದ ಕಾಂಪೌಂಡ್ ಇದೆ. 

ಇದರ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು,  ಅನೇಕರು ಈ ವಿಭಿನ್ನ ಶೈಲಿಯ ವಾಸ್ತುಶಿಲ್ಪದಿಂದ ನಿರ್ಮಾಣವಾದ ಕಾಂಪೌಂಡ್‌ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ  ಕಾಣುವಂತೆ ಈ ಟ್ರೈನ್ ಕಾಂಪೌಂಡ್‌ನಲ್ಲಿ ರೈಲಿನ ಎಂಜಿನ್, ಎಸಿ ಕೋಚ್‌ ಸಾಮಾನ್ಯ ಕೋಚ್‌ಗಳು ಇವೆ,  ಕಾಂಪೌಂಡ್ ಒಳಗೆ ಕುಳಿತ ಒಬ್ಬರು ರೈಲಿನಲ್ಲಿ ಕುಳಿತು ಕಿಟಕಿಯಿಂದ ಕೈ ಹೊರಗೆ ಹಾಕಿ ಟಾಟಾ ಮಾಡುವುದನ್ನು ಕೂಡ ವೀಡಿಯೋದಲ್ಲಿ ಕಾಣಬಹುದಾಗಿದೆ. 

ಹಳಿ ತಪ್ಪಿದ ಸಬರ್‌ಮತಿ ಎಕ್ಸ್‌ಪ್ರೆಸ್: ನಿರಂತರ ರೈಲ್ವೆ ಅವಘಡಗಳ ಹಿಂದೆ ವಿಧ್ವಂಸಕ ಕೃತ್ಯದ ಶಂಕೆ

ಅಲ್ಲದೇ ಈ ಕಾಂಪೌಂಡ್ ಮೇಲೆ 2019 ಎಂದು ಬರೆದಿದ್ದು, ಆ ವರ್ಷದಲ್ಲಿ ರೈಲಿನಂತಿರುವ ಈ ಕಾಂಪೌಂಡ್ ನಿರ್ಮಾಣವಾಗಿರುವ ಸಾಧ್ಯತೆ ಇದೆ. ಜೊತೆಗೆ ರೈಲಿನ ಕಿಟಕಿಗಳಂತೆ ಮಧ್ಯೆ ಮಧ್ಯೆ ರಾಡ್‌ಗಳನ್ನು ಅಳವಡಿಸಿದ ಕಿಟಕಿಗಳು ಕಾಂಪೌಂಡ್‌ನಲ್ಲಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಒಟ್ಟಿನಲ್ಲಿ ರೈಲ್ವೆ ನಿವೃತ್ತ ಅಧಿಕಾರಿಯೊಬ್ಬರ ಆಸಕ್ತಿಯಿಂದಾಗಿ ಈ ಸುಂದರ ರೈಲ್ವೆ ಕಾಂಪೌಂಡ್ ನಿರ್ಮಾಣವಾಗಿದೆ.

 

 

Latest Videos
Follow Us:
Download App:
  • android
  • ios