ರೈಲು ಚಲಿಸುತ್ತಿದ್ದಂತೆ ಹತ್ತಲು ಪ್ರಯತ್ನಿಸಿದ ಹಿರಿಯ ವ್ಯಕ್ತಿ ಪ್ಲಾಟ್‌ಫಾರ್ಮ್ ಅಡಿಗೆ ಜಾರಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ವ್ಯಕ್ತಿಯ ಜೀವ ಉಳಿಸಿದ್ದಾರೆ. ಪೊಲೀಸ್ ಸಾಹಸಮಯ ಕಾರ್ಯಾಚರಣೆ ವಿಡಿಯೋ ವೈರಲ್ ಆಗಿದೆ. 

ಪ್ರಯಾಗರಾಜ್(ಏ.16) ರೈಲು ಹತ್ತುವಾಗ ಇಳಿಯುವಾಗ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ. ಈಗಾಗಲೇ ಹಲವು ದುರ್ಘಟನೆಗಳು ಸಂಭವಿಸಿದೆ. ಇದೀಗ ಪ್ರಯಾಗರಾಜ್ ರೈಲು ನಿಲ್ದಾಣದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಚಲಿಸುತ್ತಿರುವ ರೈಲು ಹತ್ತಲು ಪ್ರಯತ್ನಿಸಿದ್ದಾರೆ. ಆದರೆ ಕಾಲು ಜಾರಿದ ಪರಿಣಾಮ ನೇರವಾಗಿ ಪ್ಲಾಟ್‌ಫಾರ್ಮ್ ಕೆಳಕ್ಕೆ ಜಾರಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಹಿರಿಯ ವ್ಯಕ್ತಿಯನ್ನು ಹಿಡಿದೆಳದು ಮೆಲಕ್ಕೆ ಎತ್ತಿ ಹಾಕಿದ್ದಾರೆ. ಇದರಿಂದ ಹಿರಿಯ ವ್ಯಕ್ತಿಯ ಪ್ರಾಣ ಉಳಿದಿದೆ. ಈ ವಿಡಿಯೋ ವೈರಲ್ ಆಗಿದೆ.

63 ವರ್ಷದ ಸಜ್ಜನ್ ಸಿಂಗ್ ಗುವ್ಹಾಟಿಯಿಂದ ಬಿಕಾನೆರ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಪ್ರಯಾಗರಾಜ್ ರೈಲು ನಿಲ್ದಾಣ ತಲುಪಿದಾಗ ರೈಲು ನಿಂತಿದೆ. ಊಟ ತರಲು ರೈಲಿನಿಂದ ಇಳಿದ ಸಜ್ಜನ್ ಸಿಂಗ್ ಹೊಟೆಲ್‌ಗೆ ತೆರಳಿದ್ದಾರೆ. ಊಟ ಪಾರ್ಸೆಲ್ ಮಾಡಿ ಬರುವಷ್ಟರಲ್ಲೇ ರೈಲು ಚಲಿಸಲು ಆರಂಭಿಸಿದೆ. ನಿಧಾನವಾಗಿ ಚಲಿಸಲು ಆರಂಭಿಸಿದ ರೈಲನ್ನು ಸಜ್ಜನ್ ಸಿಂಗ್ ಹತ್ತುವ ಪ್ರಯತ್ನ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಹಳಿ ದಾಟುವಾಗ ಜಾರಿ ಬಿದ್ದ ವ್ಯಕ್ತಿಯ ಜೀವ ಕಾಪಾಡಿದ ಪೊಲೀಸ್, ವಿಡಿಯೋ ವೈರಲ್!

ವಯಸ್ಸಿನ ಕಾರಣ ಸಜ್ಜನ್ ಸಿಂಗ್ ತಕ್ಷಣಕ್ಕೆ ರೈಲು ಹತ್ತಲು ಸಾಧ್ಯವಾಗಿಲ್ಲ. ಕಾಲು ಜಾರಿದೆ. ಹೀಗಾಗಿ ಅರ್ಧ ದೇಹ ಪ್ಲಾಟ್‌ಫಾರ್ಮ್ ಅಡಿಗೆ ಜಾರಲು ಆರಂಭಿಸಿದೆ. ಇತ್ತ ರೈಲು ವೇಗ ಪಡೆದುಕೊಳ್ಳಲು ಆರಂಭಿಸಿದೆ. ಹಿರಿಯ ವ್ಯಕ್ತಿಯನ್ನು ಗಮನಿಸಿದ ಪೊಲೀಸ್ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಸಜ್ಜನ್ ಸಿಂಗ್ ಹಿಡಿದು ಎಳೆದು ಪ್ಲಾಟ್‌ಪಾರ್ಮ್ ಮೇಲಕ್ಕೆ ಹಾಕಿದ್ದಾರೆ. ಇದರಿಂದ ಸಜ್ಜನ್ ಸಿಂಗ್ ಕೈ ಹಾಗೂ ದೇಹದ ಇತರೆಡೆ ಕೆಲ ಗಾಯಗಳಾಗಿದೆ. ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Scroll to load tweet…

ರೈಲ್ವೇ ಪ್ರೊಟೆಕ್ಷನ್ ಪೋರ್ಸ್ ಪೊಲೀಸ್ ಸಂಜಯ್ ಕುಮಾರ್ ರಾವತ್ ಕ್ಷಿಪ್ರ ಕಾರ್ಯಾಚರಣೆಯಿಂದ ಸಜ್ಜನ್ ಸಿಂಗ್ ಪ್ರಾಣ ಉಳಿಳಿದೆ. ಇದೀಗ ಸಂಜಯ್ ಕುಮಾರ್ ರಾವತ್ ಸಾಹಸಕ್ಕೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಪ್ಲಾಟ್‌ಫಾರ್ಮ್ ಕಳೆಕ್ಕೆ ಜಾರುತ್ತಿರುವ ವ್ಯಕ್ತಿಗಳನ್ನು ಮೇಲಕ್ಕೆ ಎತ್ತಿ ಹಾಕುವುದು ಸುಲಭದ ಮಾತಲ್ಲ. ಕೆಲವೇ ಸೆಕೆಂಡ್‌ಗಳಲ್ಲಿ ಎತ್ತಬೇಕು. ಅವರ ಭಾರ, ರೈಲಿನ ವೇಗಗಳಿಂದ ಸಾಧ್ಯವಾಗದಿದ್ದರೆ ರಕ್ಷಿಸಲು ಹೋದವರು ಕೂಡ ರೈಲಿನಡಿಗೆ ಸಿಲುಕುವ ಅಪಾಯಿದೆ. ಆದರೆ ಸಂಜಯ್ ಕುಮಾರ್ ರಾವತ್ ಸಾಹಸ ಮಾಡಿ ಸಜ್ಜನ್ ಸಿಂಗ್ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆಯ ರಕ್ಷಿಸಿದ ರೈಲ್ವೆ ಸಿಬ್ಬಂದಿ : ವಿಡಿಯೋ