Asianet Suvarna News Asianet Suvarna News

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆಯ ರಕ್ಷಿಸಿದ ರೈಲ್ವೆ ಸಿಬ್ಬಂದಿ : ವಿಡಿಯೋ

  • ಮಹಿಳೆಯ ಜೀವ ಉಳಿಸಿದ ರೈಲ್ವೆ ಸಿಬ್ಬಂದಿ
  • ರೈಲು ಇಳಿಯಲು ಹೋಗಿ ಕೆಳಗೆ ಬಿದ್ದ ಮಹಿಳೆ
  • ಒಡಿಶಾದ ಭುವನೇಶ್ವರ ರೈಲು ನಿಲ್ದಾಣದಲ್ಲಿ ಘಟನೆ
     
Alert RPF Jawan Saves Womans Life As She Slips Falls From Moving Train in Bhubaneswar akb
Author
Bangalore, First Published May 12, 2022, 5:38 PM IST

ಭುವನೇಶ್ವರ: ರೈಲ್ವೇ ಸಂರಕ್ಷಣಾ ಪಡೆ (RPF) ಸಿಬ್ಬಂದಿಯ ತ್ವರಿತ ಚಿಂತನೆ ಮತ್ತು ಕ್ಷಿಪ್ರ ಕಾರ್ಯದಿಂದಾಗಿ ಬುಧವಾರ ಭುವನೇಶ್ವರ ರೈಲು ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಜೀವ ಉಳಿದಿದೆ. ಮಹಿಳೆ ಚಲಿಸುವ ರೈಲಿನಿಂದ ಇಳಿಯಲು ಪ್ರಯತ್ನಿಸಿದಾಗ ಈ ಅನಾಹುತ ಸಂಭವಿಸಿದೆ. ಚಲಿಸುವ ರೈಲಿನಿಂದ ಇಳಿಯಲು ಹೋದ ಮಹಿಳೆ ಜಾರಿ ಕೆಳಗೆ ಬಿದ್ದಿದ್ದು ಫ್ಲಾಟ್‌ಪಾರ್ಮ್ ಹಾಗೂ ರೈಲಿನ ಮಧ್ಯೆ ಸಿಲುಕಿಕೊಂಡಿದ್ದಾಳೆ. ಕೂಡಲೇ ಜಾಗೃತರಾದ ರೈಲ್ವೆ ಪೊಲೀಸ್ ಒಬ್ಬರು ಆಕೆಯನ್ನು ಹಿಡಿದು ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. 

ಮಹಿಳೆಯನ್ನು ರಕ್ಷಿಸಿದ  ಆರ್‌ಪಿಎಫ್ ಜವಾನನ್ನು ಎಸ್ ಮುಂಡಾ ಎಂದು ಗುರುತಿಸಲಾಗಿದೆ. ಆಕೆ ಬಿದ್ದಿದ್ದನ್ನು ಗಮನಿಸಿ ಕೂಡಲೇ ಆಕೆಯ ಕಡೆಗೆ ಧಾವಿಸಿದ ರೈಲ್ವೆ ಜವಾನ ಆಕೆಯನ್ನು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರದಲ್ಲಿ ಸಿಲುಕಿಕೊಳ್ಳದಂತೆ ರಕ್ಷಿಸಿದರು.ರೈಲು ಬೆಳಗ್ಗೆ ಸುಮಾರು 10.05 ಗಂಟೆಗೆ ಭುವನೇಶ್ವರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂ. 3 ಅನ್ನು ತಲುಪಿತು ಮತ್ತು ಐದು ನಿಮಿಷಗಳ ನಿಲುಗಡೆಯ ನಂತರ ಪ್ಲಾಟ್‌ಫಾರ್ಮ್‌ನಿಂದ ಚಲಿಸಲು ಪ್ರಾರಂಭಿಸಿತು ರೈಲು ಚಲಿಸಲು ಪ್ರಾರಂಭಿಸುತ್ತಿದ್ದಂತೆ ಮಹಿಳಾ ಪ್ರಯಾಣಿಕರೊಬ್ಬರು ಇಳಿಯಲು ಪ್ರಯತ್ನಿಸಿದರು ಎಂದು ಮುಂಡಾ ಹೇಳಿದರು. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 

ಭುವನೇಶ್ವರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂ.3ರಲ್ಲಿ ಪಲಾಸಾ-ಕಟಕ್ ಪ್ಯಾಸೆಂಜರ್ ರೈಲಿನಿಂದ ಇಳಿಯುವಾಗ ಜಾರಿ ಬಿದ್ದ ಮಹಿಳಾ ಪ್ರಯಾಣಿಕರ ಪ್ರಾಣವನ್ನು ಆರ್‌ಪಿಎಫ್ ಹೆಡ್ ಕಾನ್ಸ್‌ಟೇಬಲ್ ಎಸ್.ಮುಂಡಾ ರಕ್ಷಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳಾ ಪ್ರಯಾಣಿಕಳು ಜಾರಿಬಿದ್ದು ರೈಲು ಮತ್ತು ಪ್ಲಾಟ್‌ಫಾರ್ಮ್‌ ನಡುವಿನ ಅಂತರದಲ್ಲಿ ಸಿಲುಕಿಕೊಂಡಿರುವುದನ್ನು ನಾನು ನೋಡಿದೆ. ಅದೇ ಕ್ಷಣದಲ್ಲಿ, ನಾನು ಹಾಗೂ ಇನ್ನೊಬ್ಬ ಮಹಿಳಾ ಸಹ ಪ್ರಯಾಣಿಕರು ಆಕೆಯನ್ನು ಪ್ಲಾಟ್‌ಫಾರ್ಮ್‌ಗೆ ಎಳೆದು ಸಾವಿನ ದವಡೆಯಿಂದ ರಕ್ಷಿಸಿದ್ದೇವೆ ಎಂದು ಅವರು ಹೇಳಿದರು.

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಕೆಳಗೆ ಬಿದ್ದ ಯುವಕ: ಭಯಾನಕ ವಿಡಿಯೋ

ಪೊಲೀಸ್, ರೈಲ್ವೆ ಮತ್ತು ಕರಾವಳಿ ಭದ್ರತೆಯ ಹೆಚ್ಚುವರಿ ಡಿಜಿ ಸುಧಾಂಶು ಸಾರಂಗಿ (Sudhanshu Sarangi) ಕೂಡ ಘಟನೆಯ ಸಿಸಿಟಿವಿ ವಿಡಿಯೋವನ್ನು ಹಂಚಿಕೊಂಡಿದ್ದು ರೈಲ್ವೆ ಪೊಲೀಸ್‌ ಕಾರ್ಯವನ್ನು ಶ್ಲಾಘಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೂಡ ಆರ್‌ಪಿಎಫ್ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ ಮತ್ತು ಮಹಿಳೆಯ ಜೀವವನ್ನು ಉಳಿಸಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಆತನ ಧೈರ್ಯ ಮತ್ತು ಸಮಯಪ್ರಜ್ಞೆಗೆ ಬಹುಮಾನ ನೀಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ರೈಲಿನ ಎಮರ್ಜನ್ಸಿ ಚೈನ್ ಎಳೆದ ಪ್ರಯಾಣಿಕ: ಜೀವ ಪಣಕ್ಕಿಟ್ಟು ಟ್ರೈನ್ ರಿಸ್ಟಾರ್ಟ್‌ ಮಾಡಿದ ಲೋಕೋ ಪೈಲಟ್  


ವಾರದ ಹಿಂದೆ ಹುಬ್ಬಳ್ಳಿಯಲ್ಲಿ ವ್ಯಕ್ತಿಯೋರ್ವ ಚಲಿಸುತ್ತಿದ್ದ ರೈಲಿಗೆ (Train) ಅಡ್ಡ ನಿಂತು ಆತ್ಮಹತ್ಯೆಗೆ (Suicide) ಯತ್ನಿಸಿದ್ದ. ಪರಿಣಾಮ ರೈಲಿನಡಿ ಸಿಲುಕಿದ ವ್ಯಕ್ತಿಯ ಎರಡೂ ಕಾಲುಗಳು ತುಂಡಾದ ಘಟನೆ ಹುಬ್ಬಳ್ಳಿಯ (Hubballi) ಕಿಮ್ಸ್ ಹಿಂಭಾಗ ಪ್ರವೇಶ ದ್ವಾರದ ರೈಲ್ವೆ ಮಾರ್ಗದಲ್ಲಿ ನಡೆದಿತ್ತು ಶಾಲಿಮಾರ್- ವಾಸ್ಕೋಡಿಗಾಮಾ ರೈಲಿಗೆ ಹೆಗ್ಗೇರಿ ನಿವಾಸಿಯೊರ್ವ ಸಿಲುಕಿದ್ದು, ರೈಲು ಹುಬ್ಬಳ್ಳಿ ನಿಲ್ದಾಣದಿಂದ‌ ಹೊರಟ ನಾಲ್ಕೈದು ನಿಮಿಷದಲ್ಲಿ ಈ ಘಟನೆ ನಡೆದಿತ್ತು.

Follow Us:
Download App:
  • android
  • ios