ಮಧ್ಯಪ್ರದೇಶದ ರೈಲು ನಿಲ್ದಾಣದಲ್ಲಿ ವೃದ್ಧನೋರ್ವನಿಗೆ ಕಾನ್ಸ್‌ಸ್ಟೇಬಲ್ ಓರ್ವ ಅಮಾನವೀಯವಾಗಿ ಥಳಿಸಿದ ಘಟನೆ ನಡೆದಿದೆ. ಜಬಲ್‌ಪುರದ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಭೋಪಾಲ್‌:ಮಧ್ಯಪ್ರದೇಶದ ರೈಲು ನಿಲ್ದಾಣದಲ್ಲಿ ವೃದ್ಧನೋರ್ವನಿಗೆ ಕಾನ್ಸ್‌ಸ್ಟೇಬಲ್ ಓರ್ವ ಅಮಾನವೀಯವಾಗಿ ಥಳಿಸಿದ ಘಟನೆ ನಡೆದಿದೆ. ಜಬಲ್‌ಪುರದ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ರೈಲು ನಿಲ್ದಾಣದಲ್ಲೇ ಇದ್ದ ಬೇರೆ ಪ್ರಯಾಣಿಕರು ಈ ದೃಶ್ಯವನ್ನು ತಮ್ಮ ಕ್ಯಾಮರಾದಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಹಲ್ಲೆಯ ವಿಡಿಯೋ ಈಗ ವೈರಲ್ ಆಗಿದ್ದು, ರೈಲ್ವೆ ಕಾನ್ಸ್‌ಟೇಬಲ್‌ನ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಜನ ಕ್ರಮಕ್ಕೆ ಆಗ್ರಹಿಸಿದ್ದಾರೆ. 

ಪೊಲೀಸ್ ಸಮವಸ್ತ್ರದೊಂದಿಗೆ ಬೂಟು ಧರಿಸಿರುವ ಪೊಲೀಸ್ ಪೇದೆಯೊರ್ವ ವೃದ್ಧ ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ಮುಖ ಮೂತಿ ನೋಡದೇ ಬೂಟುಗಾಲಿನಲ್ಲೇ ವೃದ್ಧನಿಗೆ ಒದ್ದು ಹಲ್ಲೆ ಮಾಡಿದ್ದಾನೆ. ಅಲ್ಲದೇ ಆತನನ್ನು ಕೈಯಲ್ಲಿ ಹಿಡಿದುಕೊಂಡು ದರ ದರನೇ ಎಳೆದುಕೊಂಡು ಬಂದ ಪೊಲೀಸ್ ಪೇದೆ ವೃದ್ಧನನ್ನು ಪ್ಲಾಟ್‌ಫಾರ್ಮ್‌ನಿಂದ ಕೆಳಗೆ ರೈಲು ಬರುವ ಹಳಿಗೆ ತಳ್ಳಲು ಯತ್ನಿಸುತ್ತಾನೆ. ವೃದ್ಧ ನಿತ್ರಾಣನಾಗಿದ್ದು ಪೇದೆ ಆತನ ಎರಡು ಕಾಲುಗಳನ್ನು ಹಿಡಿದು ಫ್ಲಾಟ್‌ಫಾರ್ಮ್‌ನಲ್ಲಿ ನಿಂತುಕೊಂಡು ಹಳಿಯ ಮೇಲೆ ಆತನನ್ನು ನೇತಾಡಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Scroll to load tweet…

ಹಲ್ಲೆಯ ವೇಳೆ ರೈಲು ನಿಲ್ದಾಣದಲ್ಲಿರುವ ಇತರ ಪ್ರಯಾಣಿಕರು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದಾರೆ. ಯಾವ ಕಾರಣಕ್ಕೆ ಪೇದೆ ಈ ರೀತಿ ಅಮಾನುಷವಾಗಿ ಪೇದೆ ಹಲ್ಲೆ ನಡಸಿದ್ದಾನೆ ಎಂಬುದು ತಿಳಿದು ಬಂದಿಲ್ಲ. ಸಿದ್ಧಾರ್ಥ್ ಜೈನ್ ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಹಿರಿಯ ನಾಗರಿಕರೊಬ್ಬರಿಗೆ ಪೊಲೀಸ್ ಪೇದೆ ಥಳಿಸುತ್ತಿದ್ದಾನೆ ಎಂದು ಬರೆದು @drmjabalpur, @crpfindia, @RailMinIndia ಅವರುಗಳಿಗೆ ಈ ವಿಡಿಯೋವನ್ನು ಟ್ಯಾಗ್ ಮಾಡಿ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. 

ಪುಡಿ ರೌಡಿಗಳಿಂದ ಹಲ್ಲೆ

ಕಳೆದ ತಿಂಗಳು ಸಕ್ಕರೆ ನಾಡು ಮಂಡ್ಯದಲ್ಲಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಿದ್ದ ಪುಂಡರನ್ನ ಪ್ರಶ್ನಿಸಿದ ಕಾರಣಕ್ಕೆ ವೃದ್ಧನ ಮೇಲೆ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ (Banglore Mysore highway) 60 ವರ್ಷದ ವೃದ್ಧನ ಮೇಲೆ ಪುಡಿ ರೌಡಿಗಳು ಹಲ್ಲೆ ನಡೆಸಿದ್ದಾರೆ. ತೂಬಿನಕೆರೆ (Tubinakere) ಗ್ರಾಮದ ಶಂಕರೇಗೌಡ (Shankare gowda) ಎಂಬುವರ ಮೇಲೆ ಹಲ್ಲೆ ನಡೆಸಿದ್ದರು. ಜಮೀನಿಗೆ ತೆರಳುವ ವೇಳೆ ಯುವಕರು ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಿದ್ದಿದ್ದನ್ನು ಕಂಡ ರೈತ ಶಂಕರೇಗೌಡ ಅವರನ್ನು ಪ್ರಶ್ನಿಸಿದ್ದಾರೆ. ಸರಿಯಾಗಿ ಚಾಲನೆ ಮಾಡಿ ಯಾರಿಗಾದರೂ ತೊಂದರೆಯಾದೀತು ಎಂದು ಬುದ್ದಿವಾದ ಹೇಳಿದ್ದಾರೆ. ಇಷ್ಟಕ್ಕೆ ಶಂಕರೇಗೌಡನ‌ ಜೊತೆ ವಾಗ್ವಾದಕ್ಕಿಳಿದ ಇಬ್ಬರು ಯುವಕರು ವೃದ್ಧನೊಂದಿಗೆ ಅತಿರೇಕದಿಂದ ವರ್ತಿಸಿ ತಮ್ಮ ಬೈಕ್‌ನಲ್ಲಿದ್ದ ಲಾಂಗ್‌ ತಂದು ಹಲ್ಲೆ ನಡೆಸಿದ್ದಾರೆ. 

ಮೊಬೈಲ್‌ನಿಂದಾಗಿಯೇ ಹಿರಿಯನ್ನು ಇಗ್ನೋರ್ ಮಾಡ್ತಿದ್ದಾರೆ ಮಕ್ಕಳು, ನಿಮಗೂ ಹೀಗನ್ಸುತ್ತಾ?

ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವ ಯುವಕರು ಸಾರ್ವಜನಿಕರು ಆಗಮಿಸುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆ. ಸರಿಯಾಗಿ ಮೀಸೆ ಚಿಗುರದ ಪುಡಿರೌಡಿಗಳ ಕೃತ್ಯಕ್ಕೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದು ಪುಂಡರನ್ನ ಮಟ್ಟ ಹಾಕುವಂತೆ ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆಯೂ ಹಲವು ಅಪರಾಧ ಪ್ರಕರಣಗಳಲ್ಲಿ ಈ ಯುವಕರು ಭಾಗಿಯಾಗಿರುವ ಬಗ್ಗೆ ಮಾಹಿತಿಗಳಿದ್ದು, ಇಂತಹವರಿಗೆ ಬುದ್ದಿ ಕಲಿಸದ ಪೊಲೀಸ್ ಇಲಾಖೆ ವಿರುದ್ಧವೇ ಸಾರ್ವಜನಿಕರು (Public) ಅಸಮಾಧಾನ ಹೊರ ಹಾಕಿದ್ದಾರೆ. ಪುಡಿರೌಡಿಗಳನ್ನು ಮಟ್ಟಹಾಕಿ ಜನರ ನೆಮ್ಮದಿ ಜೀವನಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ವೃದ್ಧಾಪ್ಯದಲ್ಲಿ ಮದ್ಯಪಾನ ಮಾಡಿದ್ರೆ ಹಲ್ಲೆಲ್ಲಾ ಉದುರಿ ಹೋಗುತ್ತೆ!