ಸತ್ಯವೇ ಗುರು ಎಂದ ರಾಹುಲ್: ನಿಮಗ್ಯಾರೂ ಗುರು ಇಲ್ಲ, ಹಾಗಾಗೇ ದಡ್ಡರಂತೆ ವರ್ತಿಸ್ತೀರಿ!
* ಗುರು ಪೂರ್ಣಿಮಾ ದಿನ ರಾಹುಲ್ ಟ್ವೀಟ್
* ಸತ್ಯವೇ ಗುರು ಎಂದ ರಾಹುಲ್
* ನಿಮಗ್ಯಾರೂ ಗುರು ಇಲ್ಲ, ಹಾಗಾಗೇ ದಡ್ಡರಂತೆ ವರ್ತಿಸ್ತೀರಿ!
ನವದೆಹಲಿ(ಜು.24): ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿರುತ್ತಾರೆ. ಹೀಗಾಗಿ ಯಾವತ್ತೂ ಟ್ವೀಟ್ ಮಾಡುತ್ತಿರುತ್ತಾರೆ. ಆದರೆ ತಮ್ಮ ಟ್ವೀಟ್‌ಗಳಿಂದ ಆಗಾಗ್ಗೆ ಟ್ರೋಲ್ ಆಗುತ್ತಾರೆ. ಇಂದು ಎಲ್ಲೆಡೆ ಗುರು ಪೂರ್ಣಿಮಾ ಆಚರಿಸಲಾಗುತ್ತಿದೆ. ಹೀಗಿರುವಾಗ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಸತ್ಯವೇ ಗುರು. ಹ್ಯಾಪಿ ಗುರು ಪೂರ್ಣಿಮಾ ಎಂದಿದ್ದಾರೆ. ಅವರ ಈ ಟ್ವೀಟ್‌ಗೆ ಕೊಟ್ಟ ಪ್ರತಿಕ್ರಿಯೆಗಳು ಅದ್ಭುತವಾಗಿವೆ.
ಒಬ್ಬ ಬಳಕೆದಾರರು ಬರೆಯುತ್ತಾ ಸರ್‌ಜೀ ಸತ್ಯವೇ ಖುದ್ದು ಗೊಂದಲಕ್ಕೊಳಗಾಗಿ ನಿಮ್ಮನ್ನು ಗುರುಗಳೆಂದು ಭಾವಿಸಿದೆ ಎಂದಿದ್ದಾರೆ.
ಮತ್ತಬ್ಬ ಬಳಕೆದಾರ ಬರೆದು ಇವರ ಗುರು ಈ ಸತ್ಯ ಯಾರಪ್ಪಾ? ಎಂದು ಪ್ರಶ್ನಿಸಿದ್ದಾರೆ.
ನಿಮಗೆ ಗುರುಗಳಿಲ್ಲ, ಆದ್ದರಿಂದ ನೀವು ದಡ್ಡರಂತೆ ವರ್ತಿಸ್ತೀರಿ ಎಂದೂ ಒಬ್ಬ ಬಳಕೆದಾರ ಬರೆದಿದ್ದಾರೆ.
ಗುರು ಅತ್ಯವೆಂದಾಗಿದ್ದರೆ, ನೀವು ಯಾರನ್ನು ಗುರು ಎಂದು ಒಪ್ಪಿಕೊಳ್ತೀರಿ? ಎಂದಿದ್ದಾರೆ.