ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೋಡಲು ಇರಾಕಿನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್‌ ರೀತಿ ಕಾಣುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ವ್ಯಂಗ್ಯವಾಡಿದ್ದಾರೆ.

ಅಹಮದಾಬಾದ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೋಡಲು ಇರಾಕಿನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್‌ ರೀತಿ ಕಾಣುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ವ್ಯಂಗ್ಯವಾಡಿದ್ದಾರೆ. ಭಾರತ್‌ ಜೋಡೊ ಯಾತ್ರೆಯಲ್ಲಿ ತೊಡಗಿರುವ ರಾಹುಲ್‌ ಅನೇಕ ದಿನಗಳಿಂದ ತಮ್ಮ ತಲೆಕೂದಲು ಹಾಗೂ ಗಡ್ಡವನ್ನು ತೆಗೆದಿಲ್ಲ. ಈ ಹಿನ್ನೆಲೆಯಲ್ಲಿ ಶರ್ಮಾ ಈ ಹೇಳಿಕೆ ನೀಡಿದ್ದಾರೆ.

‘ರಾಹುಲ್‌ ತಮ್ಮ ಕೇಶ ವಿನ್ಯಾಸವನ್ನು (Hair style) ಸರ್ದಾರ್‌ ಪಟೇಲ್‌ (Sardar Patel), ಜವಾಹರಲಾಲ್‌ ನೆಹರೂ (Jawaharlal Nehru), ಮಹಾತ್ಮಾ ಗಾಂಧಿ (Mahatma Gandhi) ರೀತಿ ಮಾಡಿಕೊಂಡರೆ ಉತ್ತಮ. ಆದರೆ ನಿಮ್ಮ ಮುಖ ಏಕೆ ಸದ್ದಾಂ ಹುಸೇನ್‌ ರೀತಿ ಬದಲಾಗುತ್ತಿದೆ? ಏಕೆಂದರೆ ಕಾಂಗ್ರೆಸ್‌ ಸಂಸ್ಕೃತಿ ಭಾರತೀಯರಿಗೆ ಹತ್ತಿರವಾಗಿಲ್ಲ. ಎಂದಿಗೂ ಭಾರತೀಯರನ್ನು ಅರ್ಥ ಮಾಡಿಕೊಳ್ಳದವರ ಕೈಯಲ್ಲಿ ಕಾಂಗ್ರೆಸ್‌ ಇದೆ ಎಂದು ಚಾಟಿ ಬೀಸಿದ್ದಾರೆ. ಶರ್ಮಾ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್‌ ಹಿರಿಯ ನಾಯಕ ಮನೀಷ್‌ ತಿವಾರಿ ‘ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿ ಟ್ರೋಲ್‌ ಮಾಡುವವರ ಹಾಗೆ ಶರ್ಮಾ ವರ್ತಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ರಾಹುಲ್‌ ಯಾತ್ರೆ 

ಇತ್ತ ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್‌ ಜೋಡೊ ಯಾತ್ರೆ ಬುಧವಾರ ಮಧ್ಯಪ್ರವೇಶದಲ್ಲಿ ಆರಂಭವಾಗಿದ್ದು, ಇಂದು ಸಹೋದರಿ ಪ್ರಿಯಾಂಕಾ ಗಾಂಧಿ (Priyanka Gandhi) ರಾಹುಲ್ ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ನೆರೆಯ ಮಹರಾಷ್ಟ್ರದಿಂದ ಬುರ್ಹಾನ್‌ಪುರ (Burhanpur) ಜಿಲ್ಲೆಗೆ ರಾಹುಲ್‌ ಪ್ರವೇಶಿಸಿದ್ದು ನಡಿಗೆ ಆರಂಭಿಸಿದ್ದಾರೆ. ಈ ವೇಳೆ ಮಾತನಾಡಿದ ರಾಹುಲ್‌, ‘ನನ್ನ ಪಾದಯಾತ್ರೆ ಸಮಾಜದಲ್ಲಿ ಹರಡುತ್ತಿರುವ ದ್ವೇಷ, ಹಿಂಸೆ ಮತ್ತು ಭಯದ ವಿರುದ್ಧವಾಗಿದೆ ಎಂದರು. ಈ ಯಾತ್ರೆ 12 ದಿನಗಳ ಕಾಲ ಮಧ್ಯಪ್ರವೇಶದಲ್ಲಿ ಸಂಚರಿಸಲಿದೆ.

ನೀವು ಹಿಂದಿಯಲ್ಲೇ ಮಾತನಾಡಿ ಎಂದು ವೇದಿಕೆಯಿಂದ ರಾಹುಲ್ ಗಾಂಧಿ ಭಾಷಣ ಅನುವಾದಕ ಎಸ್ಕೇಪ್!

ಭಾರತ್ ಜೋಡೋ ಜೊತೆ ಕಾಣಿಸಿಕೊಂಡ ಬೆನ್ನಲೇ ಮೈತ್ರಿಯಲ್ಲಿ ಬಿರುಕು, ವೀರ್ ಸಾವರ್ಕರ್ ಮಾತಿಗೆ ಕೆಂಡ