ರೈತರು ಭಾರತದ ಶಕ್ತಿ. ನಾವು ಅವರನ್ನು ಅನುಸರಿಸಿದರೆ ಮತ್ತು ಅವರ ದೃಷ್ಟಿಕೋನವನ್ನು ಅರ್ಥೈಸಿಕೊಂಡರೆ ದೇಶದ ಹಲವಾರು ಸಮಸ್ಯೆಗಳು ಪರಿಹಾರಗೊಳ್ಳುತ್ತವೆ ಎಂದು ಭಾನುವಾರ ರಾಹುಲ್‌ ಗಾಂಧಿ ಹೇಳಿದ್ದಾರೆ.

ನವದೆಹಲಿ (ಜುಲೈ 17, 2023): ಇತ್ತೀಚೆಗೆ ಹರ್ಯಾಣದ ಸೋನಿಪತ್‌ ಜಿಲ್ಲೆಯ ಮದಿನಾ ಗ್ರಾಮದ ರೈತರನ್ನು ಭೇಟಿ ಮಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಇದೀಗ ತಾವು ರೈತರ ಜತೆ ಸಂವಾದ ನಡೆಸಿ, ಅವರೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಅಲ್ಲದೇ ಟ್ವೀಟ್‌ನಲ್ಲಿ ‘ರೈತರು ಭಾರತದ ಶಕ್ತಿ. ಅವರು ಪ್ರಾಮಾಣಿಕ ಮತ್ತು ಸಂವೇದನೆ ಹೊಂದಿದವರು. ಅವರು ತಮ್ಮ ಕಠಿಣ ಪರಿಶ್ರಮವನ್ನು ಅರಿತಿದ್ದಾರೆ. ಅಲ್ಲದೇ ತಪ್ಪು ಕಾನೂನುಗಳ ವಿರುದ್ಧ ಹೋರಾಡುತ್ತಾರೆ. ನಾವು ಅವರನ್ನು ಅನುಸರಿಸಿದರೆ ಮತ್ತು ಅವರ ದೃಷ್ಟಿಕೋನವನ್ನು ಅರ್ಥೈಸಿಕೊಂಡರೆ ದೇಶದ ಹಲವಾರು ಸಮಸ್ಯೆಗಳು ಪರಿಹಾರಗೊಳ್ಳುತ್ತವೆ’ ಎಂದು ಭಾನುವಾರ ಹೇಳಿದ್ದಾರೆ.

ಇದನ್ನು ಓದಿ: ಮಳೆ ನಡುವೆಯೂ ಭತ್ತ ನಾಟಿ ಮಾಡಿ, ಟ್ರ್ಯಾಕ್ಟರ್‌ ಓಡಿಸಿದ ರಾಹುಲ್‌ ಗಾಂಧಿ

Scroll to load tweet…

12 ನಿಮಿಷಗಳ ಯೂಟ್ಯೂಬ್‌ ವಿಡಿಯೋದಲ್ಲಿ ರಾಹುಲ್‌, ರೈತರೊಂದಿಗೆ ಸಂವಾದ ನಡೆಸಿದ್ದು, ಟ್ರ್ಯಾಕ್ಟರ್‌ ಓಡಿಸಿ ಹೊಲ ಉಳುಮೆ ಮಾಡುವುದರಲ್ಲಿ ತೊಡಗಿದ್ದು ಅಲ್ಲದೇ ರೈತರೊಂದಿಗೆ ತಾವೂ ಭತ್ತದ ನಾಟಿ ಮಾಡಿರುವುದು ಕಂಡು ಬಂದಿದೆ.

ಕೆಲ ದಿನಗಳ ಹಿಂದೆ ಟ್ರಕ್‌ ಡ್ರೈವರ್‌ಗಳು ಮತ್ತು ಮೆಕ್ಯಾನಿಕ್‌ಗಳ ಜೊತೆ ಸಂವಾದ ನಡೆಸಿ, ಅವರುಗಳ ಸಮಸ್ಯೆ ಬಗ್ಗೆ ಮಾತನಾಡಿದ್ದ ರಾಹುಲ್‌ ಗಾಂಧಿ ಜುಲೈ 8 ರಂದು ರೈತರನ್ನು ಭೇಟಿಯಾಗಿದ್ದರು.

ಇದನ್ನೂ ಓದಿ: ದಿಲ್ಲಿ ಕರೋಲ್‌ಭಾಗ್‌ ಮಾರುಕಟ್ಟೆಯಲ್ಲಿ ಬೈಕ್‌ ರಿಪೇರಿ ಮಾಡಿದ ರಾಹುಲ್‌ ಗಾಂಧಿ

ದೆಹಲಿಯಿಂದ ಶಿಮ್ಲಾಗೆ ಹೋಗುವ ಮಾರ್ಗ ಮಧ್ಯದಲ್ಲಿ ಹರ್ಯಾಣದ ಸೋನೆಪತ್‌ನ ಮದೀನಾ ಗ್ರಾಮದಲ್ಲಿ ರೈತರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ, ಈ ವೇಳೆ ಅವರು ಭತ್ತ ನಾಟಿ ಮಾಡಲು ಸಹಾಯ ಮಾಡಿದ್ದಾರೆ. ತುಂತುರು ಮಳೆಯ ನಡುವೆಯೂ ಕಾಂಗ್ರೆಸ್ ಮಾಜಿ ಸಂಸದರು ಟ್ರ್ಯಾಕ್ಟರ್ ಓಡಿಸಿ ರೈತರೊಂದಿಗೆ ಸಂವಾದ ನಡೆಸಿದ್ದಾರೆ.

ಬೈಕ್‌ ರಿಪೇರಿ ಮಾಡಿದ್ದ ರಾಹುಲ್‌ ಗಾಂಧಿ
ಭಾರತ್ ಜೋಡೋ ಯಾತ್ರೆ ಮಾಡಿದಾಗಿನಿಂದ ಸಾರ್ವಜನಿಕರ ಜತೆಗೆ ಸಂಪರ್ಕ ಮುಂದುವರಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ಬೈಕ್ ಮತ್ತು ಸೈಕಲ್ ಮೆಕ್ಯಾನಿಕ್‌ಗಳನ್ನು ಭೇಟಿ ಮಾಡಿದರು. ಕಾಂಗ್ರೆಸ್ ಮುಖಂಡ ಅಂಗಡಿಯೊಂದರಲ್ಲಿ ಮೆಕ್ಯಾನಿಕ್‌ಗಳೊಂದಿಗೆ ನೆಲದ ಮೇಲೆ ಕುಳಿತು ತನ್ನ ಕೈಗಳನ್ನು ಮಸಿ ಮಾಡಿಕೊಂಡು ಬೈಕ್ ಅನ್ನು ಸರಿಪಡಿಸಲು ಸಹ ಹಿಂಜರಿಯಲಿಲ್ಲ. 

ಇದನ್ನೂ ಓದಿ: ಅಮೆರಿಕದಲ್ಲೂ ರಾಹುಲ್‌ ಟ್ರಕ್‌ ರೈಡ್‌: ಭಾರತೀಯ ಮೂಲದ ಚಾಲಕನ ಲಾರಿಯಲ್ಲಿ ಸಿಧು ಮೂಸೇವಾಲಾ ಹಾಡು ಕೇಳಿ ಎಂಜಾಯ್‌!

ದ್ವಿಚಕ್ರ ವಾಹನವನ್ನು ಸರಿಪಡಿಸಲು ಸ್ಕ್ರೂಡ್ರೈವರ್ ಕೈಗೆತ್ತಿಕೊಂಡ ಅವರು ವ್ಯಾಪಾರಿಗಳು ಮತ್ತು ಬೈಕ್ ಮೆಕಾನಿಕ್‌ಗಳೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಹೌದು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಂಗಳವಾರ ಸಂಜೆ ದೆಹಲಿಯ ಕರೋಲ್‌ಭಾಗ್‌ನಲ್ಲಿರುವ ಪ್ರಸಿದ್ಧ ಸೈಕಲ್‌ ಮಾರುಕಟ್ಟೆಗೆ ಭೇಟಿ ನೀಡಿದರು. ಈ ವೇಳೆ ಅಲ್ಲಿಯ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿದರು. ಬಳಿಕ ಅಲ್ಲೇ ಇದ್ದ ಬೈಕ್‌ ರಿಪೇರಿ ಶಾಪ್‌ಗೆ ತೆರಳಿ ತಾವೂ ಒಂದಿಷ್ಟು ಬೈಕ್‌ ರಿಪೇರಿ ಮಾಡಿ, ಅಲ್ಲಿನ ಕೆಲಸಗಾರರೊಂದಿಗೆ ಸಂವಾದ ನಡೆಸಿದರು. ಕೆಲ ದಿನಗಳ ಹಿಂದೆ ರಾಹುಲ್‌ ಗಾಂಧಿ ಚಂಡೀಗಢದಲ್ಲಿ ಮತ್ತು ಅಮೆರಿಕ ಭೇಟಿಯ ವೇಳೆ ಟ್ರಕ್‌ನಲ್ಲಿ ಸಂಚಾರ ಮಾಡುವ ಮೂಲಕ ಜನಸಾಮಾನ್ಯ ಕಷ್ಟಸುಖ ಅರಿಯುವ ಯತ್ನ ಮಾಡಿದ್ದರು.

ಇದನ್ನೂ ಓದಿ: ಟ್ರಕ್‌ನಲ್ಲಿ ರಾಹುಲ್‌ ಗಾಂಧಿ ಪ್ರಯಾಣ: ಕಾಂಗ್ರೆಸ್‌ ಸರ್ಕಾರ ಬಂದ್ರೆ ಲಾರಿ ಚಾಲಕರ ಸಮಸ್ಯೆ ಬಗೆಹರಿಸುವ ಭರವಸೆ