ಕಾಂಗ್ರೆಸ್ಸಿನಲ್ಲಿರುವ ಹಲವಾರು ಮಹಿಳೆಯರಿಗೆ ಅತ್ಯುತ್ತಮ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ. ಹಲವು ವಿಧದಲ್ಲಿ ಮಹಿಳೆಯರು ಪುರುಷರಿಗಿಂತ ಉತ್ಕೃಷ್ಟ. ಪುರುಷರಿಗಿಂತ ಅವರಿಗೆ ತಾಳ್ಮೆ ಹೆಚ್ಚು. ಅಲ್ಲದೆ ದೂರದೃಷ್ಟಿಯನ್ನು ಹೊಂದಿರುತ್ತಾರೆ. ಜತೆಗೆ ಸಂವೇದನೆ ಹಾಗೂ ದಯೆಯೂ ಹೆಚ್ಚಿರುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಕೊಚ್ಚಿ (ಡಿಸೆಂಬರ್ 2, 2023): ಕಾಂಗ್ರೆಸ್‌ ಪಕ್ಷ ತನ್ನ ಸಂಘಟನೆಯಲ್ಲಿ ಮಹಿಳೆಯರಿಗೆ ಉತ್ತೇಜನ ನೀಡಬೇಕು ಎಂದು ಕರೆ ನೀಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮುಂದಿನ 10 ವರ್ಷಗಳಲ್ಲಿ ಮುಖ್ಯಮಂತ್ರಿ ಹುದ್ದೆಗಳಲ್ಲಿ ಶೇ. 50ರಷ್ಟು ಮಹಿಳೆಯರೇ ಇರಬೇಕು ಎಂಬ ಗುರಿ ನಿಗದಿ ಮಾಡಿದ್ದಾರೆ.

ಕೇರಳ ಮಹಿಳಾ ಕಾಂಗ್ರೆಸ್‌ ಸಮ್ಮೇಳನ ‘ಉತ್ಸಾಹ’ದಲ್ಲಿ ಶುಕ್ರವಾರ ಮಾತನಾಡಿದ ಅವರು, ಸದ್ಯ ನಮ್ಮ ಪಕ್ಷದಿಂದ ಒಬ್ಬರೇ ಒಬ್ಬರು ಮಹಿಳಾ ಮುಖ್ಯಮಂತ್ರಿ ಇಲ್ಲ. ಆದರೆ, ಕಾಂಗ್ರೆಸ್ಸಿನಲ್ಲಿರುವ ಹಲವಾರು ಮಹಿಳೆಯರಿಗೆ ಅತ್ಯುತ್ತಮ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ. ಹಲವು ವಿಧದಲ್ಲಿ ಮಹಿಳೆಯರು ಪುರುಷರಿಗಿಂತ ಉತ್ಕೃಷ್ಟ. ಪುರುಷರಿಗಿಂತ ಅವರಿಗೆ ತಾಳ್ಮೆ ಹೆಚ್ಚು. ಅಲ್ಲದೆ ದೂರದೃಷ್ಟಿಯನ್ನು ಹೊಂದಿರುತ್ತಾರೆ. ಜತೆಗೆ ಸಂವೇದನೆ ಹಾಗೂ ದಯೆಯೂ ಹೆಚ್ಚಿರುತ್ತದೆ ಎಂದರು.

ಇದನ್ನು ಓದಿ: ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ: ಖರ್ಗೆ ಹೇಳಿಕೆ ವೈರಲ್‌; ಬಿಜೆಪಿ ಲೇವಡಿ

ಸಮಾಜದಲ್ಲಿ ಜಾತಿ, ಭಾಷೆ, ಧರ್ಮ ಇತ್ಯಾದಿಗಳ ರೇಖೆಗಳಲ್ಲಿ ವಿವಿಧ ರೀತಿಯ ತಾರತಮ್ಯಗಳಿವೆ. ಆದರೆ ಹೆಚ್ಚು ತಾರತಮ್ಯಕ್ಕೆ ಒಳಗಾದವರು ಮಹಿಳೆಯರು. ಮೂಲಭೂತವಾಗಿ, ಕಾಂಗ್ರೆಸ್ ಮಹಿಳೆಯರನ್ನು ಅಧಿಕಾರಕ್ಕೆ ತರಲು ಬಯಸುತ್ತದೆ. ನಾವು ಮಹಿಳಾ ಸಿಎಂ ಆಗಬೇಕೆಂದು ಬಯಸುತ್ತೇವೆ. ಭವಿಷ್ಯದಲ್ಲಿ, ನಾವು ವಾರ್ಡ್ ಮಟ್ಟದಲ್ಲಿ ಸಾವಿರಾರು ಮಹಿಳಾ ಕಾರ್ಯಕರ್ತೆಯರನ್ನು ಹೊಂದಬೇಕು ಎಂದು ರಾಹುಲ್‌ ಗಾಂಧಿ ಹೇಳಿದರು.

ಈ ಮಧ್ಯೆ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ (MGNREGA) ಯೋಜನೆಯನ್ನು ಉಲ್ಲೇಖಿಸಿದ ರಾಹುಲ್‌ ಗಾಂಧಿ, ಕಾಂಗ್ರೆಸ್ ಸರ್ಕಾರಗಳು ಜಾರಿಗೆ ತಂದ ಅನೇಕ ಪ್ರಮುಖ ಯೋಜನೆಗಳು ಮಹಿಳೆಯರನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ ಎಂದೂ ಹೇಳಿದರು. ಇದೇ ವೇಳೆ, ಆರ್‌ಎಸ್‌ಎಸ್ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯನ್ನು ರಾಹುಲ್ ಟೀಕಿಸಿದರು. ಆರ್‌ಎಸ್‌ಎಸ್‌ ಸಿದ್ಧಾಂತದಲ್ಲಿ ಮಹಿಳೆಯರಿಗೆ ಜಾಗವಿಲ್ಲ. ಅದೊಂದು ಪುರುಷರ ಸಂಘಟನೆ ಎಂದು ಮೂದಲಿಸಿದರು.

ಮತ್ತೆ ಗೆದ್ದು ಹ್ಯಾಟ್ರಿಕ್ ಹೀರೋ ಆಗ್ತಾರಾ ಮೋದಿ..? ಮೋದಿಗಿಂತಾ ರಾಹುಲ್ ಮೇಲೇ ಮುಸ್ಲಿಮರ ಒಲವು!

ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನಿಜವಾದ ಹೋರಾಟವೆಂದರೆ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಬಗ್ಗೆ. ನಾನು ಆರ್‌ಎಸ್‌ಎಸ್ ಅನ್ನು ಟೀಕಿಸಿದಾಗ, ಆರ್‌ಎಸ್‌ಎಸ್ ಅಡಿಯಲ್ಲಿ ಮಹಿಳಾ ಸಂಘಟನೆಗಳಿವೆ ಎಂದು ಅದರ ನಾಯಕತ್ವ ವಾದಿಸಿತು. ಆದರೆ ಪ್ರಶ್ನೆಯೆಂದರೆ ಆರ್‌ಎಸ್‌ಎಸ್‌ನಲ್ಲಿ ಅಧಿಕಾರವನ್ನು ಹಂಚಿಕೊಳ್ಳಲು ಮಹಿಳೆಯರಿಗೆ ಅವಕಾಶವಿದ್ಯಾ? ಅದು ಸಂಪೂರ್ಣವಾಗಿ ಪುರುಷ ಸಂಘಟನೆ ಎಂದು ಆರೋಪಿಸಿದರು.