ತನ್ನ ಫೋನ್ ಪೆಗಾಸಸ್ ಬಳಸಿ ಟ್ಯಾಪ್ ಮಾಡಲಾಗಿದೆ ಎಂದಿದ್ದ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಆರೋಪಿಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು ತನಿಖೆಗೆ ಫೋನ್ ಸಲ್ಲಿಸಿ, ಸತ್ಯಾಂಶ ಹೊರಬರಲಿ ಎಂದ ಬಿಜೆಪಿ

ನವದೆಹಲಿ(ಜು.36): ಪೆಗಾಸಸ್ ಸ್ಪೈವೇರ್ ಪ್ರಕರಣ ಸಂಸತ್ತಿನಲ್ಲಿ ಭಾರಿ ಪ್ರತಿಧ್ವನಿಸಿದೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದೆ. ಪೆಗಾಸಸ್ ಬಳಸಿ ಕೇಂದ್ರ ಸರ್ಕಾರ ಫೋನ್ ಕದ್ದಾಲಿಕೆ ಮಾಡಿದೆ ಎಂದು ಆರೋಪಿಸಿದೆ. ತನ್ನ ಫೋನ್ ಪೆಗಾಸಸ್ ಮೂಲಕ ಟ್ಯಾಪ್ ಮಾಡಲಾಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ.

ರಾಜ್ಯಸಭೆಯಲ್ಲಿ ಪೆಗಾಸಸ್‌ ರಾದ್ಧಾಂತ : ವ್ಯಗ್ರರಾದ ಪ್ರತಿಪಕ್ಷ ಸದಸ್ಯರು

ನಿಮ್ಮ ಫೋನ್ ಪೆಗಾಸಸ್ ಬಳಸಿ ಟ್ಯಾಪ್ ಮಾಡಲಿದೆ ಅನ್ನೋ ಅನುಮಾನವಿದ್ದರೆ, ತನಿಖೆಗೆ ಫೋನ್ ಸಲ್ಲಿಕೆ ಮಾಡಿ. ಸತ್ಯಾಂಶ ಹೊರಬರಲಿ ಎಂದು ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ. ರಾಹುಲ್ ಗಾಂಧಿ ತಮ್ಮ ಫೋನ್ ತನಿಖಾ ಸಂಸ್ಥೆಗೆ ಸಲ್ಲಿಸಲಿ. ಭಾರತೀಯ ದಂಡ ಸಂಹಿತಿ(IPC)ಪ್ರಕಾರ ತನಿಖೆ ನಡೆಯಲಿದೆ ಎಂದು ಬಿಜೆಪಿ ವಕ್ತಾರಾ ರಾಜ್ಯವರ್ಧನ್ ರಾಥೋಡ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪೆಗಾಸಸ್ ಬಳಸಿ ಭಾರತ ಹಾಗೂ ಭಾರತದ ಪ್ರಮುಖ ಸಂಸ್ಥೆಗಳ ಮೇಲೆ ಫೋನ್ ಕದ್ದಾಲಿಕೆ ಮಾಡಿದೆ. ನನ್ನ ಫೋನ್ ಕೂಡ ಕದ್ದಾಲಿಕೆ ಮಾಡಲಾಗಿದೆ. ಹೀಗಾಗಿ ಅಮಿತ್ ಶಾ ತಕ್ಷಣ ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಪೆಗಾಸಸ್ ಬಳಿಕ ಛತ್ತೀಸ್‌ಗಢ ಫೋನ್ ಟ್ಯಾಪಿಂಗ್ ಸದ್ದು, ಗಾಂಧಿ ಕುಟುಂಬಕ್ಕೆ ಸವಾಲು!

ಇಸ್ರೇಲ್‌ನ ಪೆಗಾಸಸ್ ಸ್ಪೇವೇರ್ ಪ್ರಮುಖವಾಗಿ ಭಯೋತ್ಪಾದಕರ ವಿರುದ್ಧ ಬಳಸಲು ಉಪಯೋಗಿಸಲಾಗುತ್ತದೆ. ಆದರೆ ಮೋದಿ ಹಾಗೂ ಅಮಿತ್ ಶಾ ಈ ಆಯುಧವನ್ನು ಭಾರತದ ಮೇಲೆ ಪ್ರಯೋಗಿಸಲಾಗಿದೆ. ಇದನ್ನು ರಾಜಕೀಯವಾಗಿ ಬಳಸಿದ್ದಾರೆ ಎಂದು ರಾಹುಲ್ ಆರೋಪಿಸಿದ್ದರು.