* ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮೂಲಕ ದೇಶ, ವಿದೇಶದ ಅನೇಕ ಪ್ರಮುಖರ ಮೇಲೆ ಬೇಹುಗಾರಿಕೆ * ಪೆಗಾಸಸ್ ಬೆನ್ನಲ್ಲೇ ಸದ್ದು ಮಾಡುತ್ತಿದೆ ಛತ್ತೀಸ್‌ಗಢದ ಫೋನ್‌ ಟ್ಯಾಪಿಂಗ್ ಪ್ರಕರಣ* ಗಾಂಧೀ ಕುಟುಂಬಕ್ಕೆ ಸವಾಲೆಸೆದ ಅಲೋಕ್ ಭಟ್

ನವದೆಹಲಿ(ಜು.20): ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮೂಲಕ ದೇಶ, ವಿದೇಶದ ಅನೇಕ ಪ್ರಮುಖರ ಮೇಲೆ ಬೇಹುಗಾರಿಕೆ ನಡೆಸುತ್ತಿರುವ ವಿಷಯ ಕಾವು ಪಡೆದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಭಾರೀ ಟೀಕೆ ವ್ಯಕ್ತಪಡಿಸಿದೆ. ಈ ಮಧ್ಯೆ ಟ್ವಿಟರ್‌ನಲ್ಲಿ ಅಧಿಕಾರ ಬದಲಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಛತ್ತೀಸ್‌ಗಢದಲ್ಲಿ ನಡೆದ, ಅಕ್ರಮ ಫೋನ್ ಟ್ಯಾಪಿಂಗ್ ಪ್ರಕರಣದ ವಿಚಾರ ಸದ್ದು ಮಾಡುತ್ತಿದೆ. ಅಲೋಕ್ ಭಟ್ ಎಂಬವರು 2019 ರಲ್ಲಿ ವಿವಾದ ಸೃಷ್ಟಿಸಿದ್ದ ಛತ್ತೀಸ್‌ಗಢದ ಫೋನ್ ಟ್ಯಾಪಿಂಗ್ ಪ್ರಕರಣದ ಬಗ್ಗೆ ಟ್ವೀಟ್ ಮಾಡಿ ಸೋನಿಯಾ ಮತ್ತು ರಾಹುಲ್ ಗಾಂಧಿಗೆ ಸವಾಲೆಸೆದಿದ್ದಾರೆ.

ರಾಹುಲ್‌ ಟ್ಯಾಗ್ 

ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ, ಸಾಮಾಜಿಕ ಕಾರ್ಯಕರ್ತ ಅಲೋಕ್ ಭಟ್ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಆರೋಪಿ ಅಧಿಕಾರಿಗಳ ಫೋನ್‌ಗಳನ್ನು ಟ್ಯಾಪ್ ಮಾಡದಂತೆ ಛತ್ತೀಸ್‌ಗಢ ಕಾಂಗ್ರೆಸ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು ಎಂದಿದ್ದಾರೆ. ಈ ಬಗ್ಗೆ ಬರೆದಿರುವ ಅವರು ಹಿರಿಯ ಐಪಿಎಸ್ ಅಧಿಕಾರಿ ಮುಖೇಶ್ ಗುಪ್ತಾ ಮತ್ತು ಅವರ ಕುಟುಂಬದವರ ಫೋನ್‌ಗಳನ್ನು ಟ್ಯಾಪ್‌ ಮಾಡಿದ ಆರೋಪದ ಮೇಲೆ ಛತ್ತಿಸ್‌ಗಢ ಸರ್ಕಾರದ ನಡೆ ಖಂಡಿಸಿದ್ದ ಕೋರ್ಟ್‌ "ಯಾವುದೇ ಗೌಪ್ಯತೆ ಉಳಿದಿಲ್ಲ ಎಂದು ಹೇಳಿತ್ತು ಎಂದು ರಾಹುಲ್ ಗಾಂಧಿಯನ್ನು ಟ್ಯಾಗ್ ಮಾಡಿದ್ದಾರೆ. ಅದರೆ, ಫೋನ್ ಟ್ಯಾಪಿಂಗ್ ಅನ್ನು ನಡೆಸಲು ಖುದ್ದು ರಾಹುಲ್ ಗಾಂಧಿ ಆದೇಶಿಸಿದ್ದರು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೇ ಅವರು ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಅವರನ್ನೂ ಟ್ಯಾಗ್ ಮಾಡಿದ್ದಾರೆ.

Scroll to load tweet…

ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ

ಛತ್ತೀಸ್‌ಗಢದಲ್ಲಿ ಅಧಿಕಾರ ಬದಲಾವಣೆಯ ನಂತರ, ನಾಗರಿಕ ಸರಬರಾಜು ನಿಗಮದಲ್ಲಿ ನಡೆದ ಕೋಟ್ಯಂತರ ಹಗರಣದ ಬಗ್ಗೆ ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರ ಆದೇಶಿಸಿತ್ತು. EOW ಅದನ್ನು ತನಿಖೆ ಮಾಡುತ್ತಿತ್ತು. ನಂತರ ಐಪಿಎಸ್ ಮುಖೇಶ್ ಗುಪ್ತಾ ಅಂದರೆ ಅಂದಿನ ಡಿಜಿ ಇಒಡಬ್ಲ್ಯೂ ಆರೋಪಿಗಳ ಫೋನ್‌ಗಳನ್ನು ಟ್ಯಾಪ್ ಮಾಡುತ್ತಿದ್ದರೆಂಬ ಆರೋಪ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಅವರ ವಿರುದ್ಧ ತನಿಖೆ ಆರಂಭಿಸಲಾಯಿತು. ಸಿಎಸ್ ಮತ್ತು ಎಸಿಎಸ್ ಆದೇಶದ ಮೇರೆಗೆ ಫೋನ್ ಟ್ಯಾಪಿಂಗ್ ನಡೆದಿದೆ ಎಂದು ಗುಪ್ತಾ ವಾದಿಸಿದ್ದರು, ಆದ್ದರಿಂದ ಅವರನ್ನು ತಪ್ಪಾಗಿ ಗ್ರಹಿಸಲು ಸಾಧ್ಯವಿಲ್ಲ. ಗುಪ್ತಾ ಅವರು ಪ್ರಮುಖ ಹುದ್ದೆ ಅಲಂಕರಿಸುವಾಗ ಅಕ್ರಮವಾಗಿ ಸಾಮಾನ್ಯ ಜನರ ಫೋನ್ ಟ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಲಾಯಿತು. ಅವರ ವೈಯಕ್ತಿಕ ಹಿತಾಸಕ್ತಿಗಾಗಿ ಮೊಬೈಲ್‌ನಲ್ಲಿ ನಡೆಯುತ್ತಿರುವ ವಿಷಯಗಳನ್ನು ಕೇಳಿದ್ದರೆನ್ನಲಾಗಿದೆ.