ನನ್ನ ಮಾತು ಕೇಳಿದ್ರೆ ಮದ್ವೆಯಾಗುತಿತ್ತು, ಕಾಲ ಇನ್ನೂ ಮಿಂಚಿಲ್ಲ; ಲಾಲು ಮಾತಿಗೆ ನಾಚಿ ನೀರಾದ ರಾಹುಲ್!
ವಿಪಕ್ಷಗಳ ಮೈತ್ರಿ ಸಭೆಯಲ್ಲಿ ಗಂಭೀರ ವಿಷಯಗಳು ಚರ್ಚೆಯಾಗಿದೆ. ಇದರ ನಡುವೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾವದ್ ಹಾಸ್ಯ ಚಟಾಕಿ ಸಿಡಿಸಿದ್ದಾರೆ. ನನ್ನ ಮಾತು ರಾಹುಲ್ ಕೇಳಲಿಲ್ಲ.ಮಾತು ಕೇಳಿದ್ದರೆ ರಾಹುಲ್ ಗಾಂಧಿ ಮೊದಲೇ ಮದ್ವೆಯಾಗುತಿತ್ತು. ಆದರೆ ಇನ್ನೂ ಕಾಲ ಮಂಚಿಲ್ಲ ಎಂದು ಲಾಲು ಯಾದವ್ ಹೇಳಿದ್ದಾರೆ.
ಪಾಟ್ನಾ(ಜೂ.23) ಲೋಕಸಭಾ ಚುನಾವಣೆಗೆ ಮೋದಿ ಮಣಿಸಲು ವಿಪಕ್ಷಗಳು ರಣತಂತ್ರ ಶುರುಮಾಡಿದೆ, ಹೋರಾಟ ಆರಂಭಿಸಿದೆ. ಇಂದು ಬಿಹಾರದ ಪಾಟ್ನಾದಲ್ಲಿ ವಿಪಕ್ಷಗಳ ಸಭೆ ನಡೆಸಲಾಗಿದೆ. ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಎನ್‌ಸಿಪಿ ಸೇರಿದಂತೆ 16 ಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಂಡಿತ್ತು. 2024ರ ಚುನಾವಣೆಯಲ್ಲಿ ಒಗ್ಗಾಟ್ಟಾಗಿ ಮುನ್ನಡೆಯಲು ಚರ್ಚೆ ನಡೆಸಲಾಗಿದೆ. ಬಿಜೆಪಿ ಮಣಿಸಲು ಒಗ್ಗಟ್ಟು ಅತೀ ಅಗತ್ಯ ಅನ್ನೋ ನಿರ್ಧಾರಕ್ಕೂ ಬರಲಾಗಿದೆ. ಈ ಗಂಭೀರ ಚರ್ಚೆಗಳ ನಡುವೆ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಮಾತು ನೆರೆದಿದ್ದ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತ್ತು. ಇತ್ತ ರಾಹುಲ್ ಗಾಂಧಿ ನಾಚಿ ನೀರಾಗಿದ್ದರು. ನನ್ನ ಮಾತನ್ನು ರಾಹುಲ್ ಗಾಂಧಿ ಈ ಹಿಂದೆ ಕೇಳಲಿಲ್ಲ. ಕೇಳಿದ್ದರೆ ಮೊದಲೇ ಮದುವೆಯಾಗುತ್ತಿತ್ತು ಎಂದಿದ್ದಾರೆ.
ವಿಪಕ್ಷಗಳ ಮೈತ್ರಿ ಸಭೆಯಲ್ಲಿ ಲಾಲು ಪ್ರಸಾದ್ ಯಾದವ್ ಹಲವು ವಿಚಾರಗಳನ್ನು ಮುಂದಿಟ್ಟು ಚರ್ಚೆ ನಡೆಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಪಾಲಿಸಬೇಕಾದ ನೀತಿಗಳು, ನಿಯಮಗಳು, ಒಗ್ಗಟ್ಟು, ಸಯಂಮದ ಕುರಿತು ಪಾಠ ಮಾಡಿದ್ದಾರೆ. ಗಂಭೀರ ಚರ್ಚೆ ನಡುವೆ ಲಾಲು ಪ್ರಸಾದ್ ಯಾದವ್, ರಾಹುಲ್ ಗಾಂಧಿ ಮದುವೆ ಕುರಿತು ಮಾತನಾಡಿದ್ದಾರೆ.
ವಿಪಕ್ಷ ಸಭೆ ಬೆನ್ನಲ್ಲೇ ಮೈತ್ರಿಯಿಂದ ಒಂದು ಕಾಲು ಹೊರಗಿಟ್ಟ ಆಮ್ ಆದ್ಮಿ!
ಈ ಹಿಂದೆ ರಾಹುಲ್ ಗಾಂಧಿ ನನ್ನ ಮಾತು ಕೇಳುತ್ತಿರಲಿಲ್ಲ. ನನ್ನ ಮಾತು ಕೇಳಿದ್ದರೆ ಇಷ್ಟೊತ್ತಿಗೆ ರಾಹುಲ್ ಗಾಂಧಿಗೆ ಮದುವೆಯಾಗಿರುತ್ತಿತ್ತು. ಆದರೆ ಇನ್ನೂ ಕಾಲ ಮಂಚಿಲ್ಲ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ. ನನ್ನ ಮಾತು ಕೇಳಿ, ಶೀಘ್ರದಲ್ಲೇ ಮದುವೆಯಾಗಿ ಎಂದು ರಾಹುಲ್ ಗಾಂಧಿಗೆ ಸೂಚಿಸಿದ್ದಾರೆ. ಇದೇ ವೇಳೆ ನಿಮ್ಮ ತಾಯಿ ಹಲವು ಬಾರಿ ಈ ಕುರಿತು ಹೇಳಿದ್ದಾರೆ. ಮದುವೆ ಕುರಿತು ಮನಸ್ಸು ಮಾಡಿ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಲಾಲು ಪ್ರಸಾದ್ ಯಾದವ್ ಮಾತಿಗೆ ಖುದ್ದು ರಾಹುಲ್ ಗಾಂಧಿ ನಕ್ಕಿದ್ದಾರೆ. ಮದುವೆ ಮಾತಿನಿಂದ ವಿಪಕ್ಷಗಳ ನಾಯಕರು ನಗೆಗಡಲಲ್ಲಿ ತೇಲಾಡಿದ್ದಾರೆ. ಲಾಲು ಯಾದವ್ ಮಾತಿಗೆ ಧನಿಗೂಡಿಸಿದ್ದಾರೆ. ಇದೇ ವೇಳೆ ಹಲವರು ಇದೇ ಸಲಹೆಯನ್ನು ನೀಡಿದ್ದಾರೆ.
ಪಾಟ್ನಾದಲ್ಲಿ ಆಯೋಜಿಸಿದ್ದ ವಿಪಕ್ಷಗಳ ಸಭೆ ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಈ ಸಭೆ ನಡೆದಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಬಿಜಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.ಮೊದಲ ವಿಪಕ್ಷ ಸಭೆ ಯಶಸ್ವಿಯಾಗಿದ್ದು, ಇದೀಗ ಹಿಮಾಚಲ ಪ್ರದೇಶದಲ್ಲಿ 2ನೇ ವಿಪಕ್ಷ ಸಭೆ ನಡೆಸಲು ನಿರ್ಧರಿಸಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ: ರಾಜಕೀಯ ಗುಟ್ಟು ಬಹಿರಂಗ
ಈ ಸಭೆಯನ್ನು ಬಿಜೆಪಿ ಟೀಕಿಸಿದೆ. ವಿಪಕ್ಷಗಳು ಒಗ್ಗಟ್ಟಾಗಿ ಹೋಗುವುದು ಅಷ್ಟಕಷ್ಟೆ, ಇದು ಕೇವಲ ಫೋಟೋಗಾಗಿ ನಡೆದ ಸಭೆ. 2024ರಲ್ಲಿ ನರೇಂದ್ರ ಮೋದಿ ಪ್ರಧಾನಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಇತ್ತ ಬಿಜೆಪಿ ಕೂಡ ವಿಪಕ್ಷ ಸಭೆಯನ್ನು ಅಣಕಿಸಿದೆ. 2024ರಲ್ಲಿ ಪ್ರಧಾನಿ ಸ್ಥಾನ ಖಾಲಿ ಇಲ್ಲ ಎಂದಿದೆ.