ಸುಪ್ರೀಂ ಕೋರ್ಟ್ ಮುಂದೆ ನಡೆಸಿದ ಹೈಡ್ರಾಮಾದಲ್ಲಿ ರಾಹುಲ್ ಗಾಂಧಿ ಉದ್ದೇಶವನ್ನೇ ಮರೆತ್ರಾ? ಗ್ಯಾನೇಶ್ ಕುಮಾರ್ ವಿರುದ್ದ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ 14 ದೋಷಳನ್ನು ಕೋರ್ಟ್ ಪಟ್ಟಿ ಮಾಡಿದೆ. ಜೊತೆಗೆ 220 ರೂ ಶುಲ್ಕ ಕೂಡ ಕಟ್ಟಿಲ್ಲ.

ನವದೆಹಲಿ (ಅ.13) ಚುನಾವಣಾ ಅಕ್ರಮ ನಡೆಸಿದ್ದಾರೆ ಎಂದು ಆಯುಕ್ತ ಗ್ಯಾನೇಶ್ ಕುಮಾರ್ ವಜಾಗೊಳಿಸಲು ರಾಹುಲ್ ಗಾಂಧಿ ಹಾಗೂ ಪ್ರತಿಪಕ್ಷಗಳು ಭಾರಿ ಹೋರಾಟ ನಡೆಸುತ್ತಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಭೇಟಿಯಾಗಿ ಮನವಿ ಸಲ್ಲಿಸಲು ಅವಕಾಶ ಸಿಕ್ಕಿಲ್ಲ. ಸಿಜೆಐ ಸೂಚನೆಯಿಂದ ಮುಖಭಂಗ ಅನುಭವಿಸಿದ ರಾಹುಲ್ ಗಾಂಧಿ ಕೊನೆಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಭಾರಿ ಹೈಡ್ರಾಮ ನಡೆಸಿದ್ದರು. ಜಾಥಾ ಮೂಲಕ ತೆರಳಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಗ್ಯಾನೇಶ್ ಕುಮಾರ್ ವಜಾಗೆ ಆಗ್ರಹಿಸಿ ಅರ್ಜಿ ಸಲ್ಲಿಸಿದ್ದರು. ಆದರೆ ರಾಹುಲ್ ಗಾಂಧಿ ಹಾಗೂ ಪ್ರತಿಪಕ್ಷ ನಾಯಕರು ಸಲ್ಲಿಸಿದ ಅರ್ಜಿಯಲ್ಲಿ 14 ದೋಷಗಳಿವೆ ಎಂದು ಕೋರ್ಟ್ ರಿಜಿಸ್ಟ್ರಿ ಹೇಳಿದೆ. ಇಷ್ಟೇ ಅಲ್ಲ ಅರ್ಜಿ ಸಲ್ಲಿಸುವಾಗ ಕಟ್ಟಬೇಕಿದ್ದ ಶುಲ್ಕದಲ್ಲಿ 220 ರೂಪಾಯಿ ಕಡಿಮೆ ಇದೆ ಎಂದು ರಿಜಿಸ್ಟ್ರಿ ಹೇಳಿದೆ.

ದೋಷ ಸರಿಪಡಿಸದಿದ್ದರೆ ವಿಚಾರಣೆಗೆ ಪಟ್ಟಿ ಮಾಡಲು ಸಾಧ್ಯವಿಲ್ಲ

ರಾಹುಲ್ ಗಾಂಧಿ ಹಾಗೂ ಪ್ರತಿಪಕ್ಷ ನಾಯಕರು ಸಹಿ ಮಾಡಿ ಗ್ಯಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಸಂದಯ್ ರಾವುತ್ ಸೇರಿದಂತೆ ಹಲವು ಪ್ರಮುಖ ನಾಯಕರು ಜೊತೆಯಾಗಿ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು. ಚುನಾವಣಾ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್, ಇತರ ಇಬ್ಬರು ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಹೆಸರನ್ನು ಪ್ರತಿವಾದಿಗಳಾಗಿ ಉಲ್ಲೇಖಿಸಲಾಗಿದೆ. ಆದರೆ ಈ ಅರ್ಜಿಯಲ್ಲಿ 14 ದೋಷಗಳಿದೆ ಎಂದು ಸುಪ್ರೀಂ ಕೋರ್ಟ ರಿಜಿಸ್ಟ್ರಿ ಪಟ್ಟಿ ಮಾಡಿದೆ.

ಸುಪ್ರೀಂ ರಿಜಿಸ್ಟ್ರಿ ಗುರುತಿಸಿದ 14 ದೋಷಗಳು

ಈ ಅರ್ಜಿ ಸಲ್ಲಿಸಿದ 9 ಪಿಟೀಶನರ್ ಅವರ ಅಥರೈಸೇಶನ್ ಈ ಅರ್ಜಿಯಲ್ಲಿ ಇಲ್ಲ.ಮಲ್ಲಿಕಾರ್ಜುನ ಖರ್ಗೆ ಅವರ ಗುರುತಿನ ಚೀಟಿ ಕಾಪಿ ಅಸ್ಪಷ್ಟವಾಗಿದೆ. ಎರಡು ದಾಖಲೆಗಳಿಗೆ ಕಲರ್ ಪ್ರಿಂಟ್ ಕಾಪಿ ಲಗತ್ತಿಸಿಲ್ಲ. ಪುಟಗಳ ಸಂಖ್ಯಾ ಕ್ರಮದಲ್ಲಿ ವ್ಯತ್ಯಾಸ ಸೇರಿದಂತೆ 14 ದೋಷಗಳು ಈ ಅರ್ಜಿಯಲ್ಲಿದೆ ಎಂದು ರಿಜಿಸ್ಟ್ರಿ ಪಟ್ಟಿ ಮಾಡಿದೆ. ಇದೇ ವೇಳೆ ಅರ್ಜಿ ಶುಲ್ಕ 220 ರೂಪಾಯಿ ಕಡಿಮೆ ಇದೆ ಎಂದು ರಿಜಿಸ್ಟ್ರಿ ಪಟ್ಟಿ ಮಾಡಿದೆ.

ಲೋಪ ಸರಿಪಡಿಸಿದ್ದರೆ ಅರ್ಜಿ ವ್ಯರ್ಥ

ರಾಹುಲ್ ಗಾಂಧಿ ಹಾಗೂ ಪ್ರತಿಪಕ್ಷ ನಾಯಕರು ಜಾಥಾ ಮೂಲಕ ಸಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಂಗದ ಮೆಟ್ಟಿಲಲ್ಲೂ ಇದೇ ಮೊದಲ ಬಾರಿಗೆ ರಾಜಕೀಯ ಹೈಡ್ರಾಮ ನಡೆದಿತ್ತು. ಆದರೆ ಸಲ್ಲಿಸಿದ ಅರ್ಜಿಯಲ್ಲಿ ಹಲವು ದೋಷಗಳಿವೆ. ಈ ದೋಷ ಸರಿಪಡಿಸದಿದ್ದರೆ ವಿಚಾರಣೆಗೆ ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಹೇಳಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಬರೆದ ಪತ್ರದ ಬಳಿಕ ಎಚ್ಚೆತ್ತ ರಾಹುಲ್ ಗಾಂಧಿ ತನ್ನ ವರಸೆ ಬದಲಿಸಿದ್ದರು. ಭೇಟಿ ಸಾಧ್ಯವಿಲ್ಲ ಎಂದು ಸುಪ್ರೀಂ ನ್ಯಾಯಮೂರ್ತಿ ಹೇಳಿದ ಬೆನ್ನಲ್ಲೇ ರಾಹುಲ್ ಗಾಂಧಿ ಪ್ಲಾನ್ ಬದಲಿಸಿದ್ದರು. ಸುಪ್ರೀಂ ಕೋರ್ಟ್‌ಗೆ ಜಾಥಾ ಮೂಲಕ ಸಾಗಿ ಅರ್ಜಿ ಸಲ್ಲಿಸಲು ಪ್ಲಾನ್ ಮಾಡಿದ್ದರು. ಆದರೆ ಸಲ್ಲಿಸಿದ ಅರ್ಜಿಯಲ್ಲೇ ಹಲವು ದೋಷಗಳು ಪತ್ತೆಯಾಗಿದೆ.