Asianet Suvarna News Asianet Suvarna News

ಸತೀಶ್ ಶರ್ಮಾ ಅಂತಿಮ ಯಾತ್ರೆಗೆ ಹೆಗಲು ಕೊಟ್ಟರಾಹುಲ್‌ ಗಾಂಧಿ

ಹಿರಿಯ ಮುಖಂಡರೋರ್ವರ ಅಂತಿಮ ಯಾತ್ರೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡು ಶವಕ್ಕೆ  ಹೆಗಲು ಕೊಟ್ಟರು.   ಗಾಂಧಿ ಕಟುಂಬಕ್ಕೆ ನಿಷ್ಠರಾಗಿದ್ದ ಸತೀಶ್‌ ಶರ್ಮಾ (73) ಅವರು ಗೋವಾದಲ್ಲಿ ಬುಧವಾರ ನಿಧನರಾಗಿದ್ದರು.

Rahul Gandhi pallbearer at funeral of  Congressman Satish Sharma snr
Author
Bengaluru, First Published Feb 20, 2021, 10:26 AM IST

ನವದೆಹಲಿ (ಫೆ.20): ಕಾಂಗ್ರೆಸ್‌ ಹಿರಿಯ ಮುಖಂಡ ಸತೀಶ್‌ ಶರ್ಮಾ ಅವರ ಅಂತ್ಯ ಸಂಸ್ಕಾರವನ್ನು ದೆಹಲಿಯಲ್ಲಿ ಶುಕ್ರವಾರ ನೆರವೇರಿಸಲಾಯಿತು. 

ಈ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶವಕ್ಕೆ ಹೆಗಲು ಕೊಡುವ ಮೂಲಕ ಅಂತ್ಯಕ್ರಿಯೆಗೆ ನೆರವಾದರು. ಗಾಂಧಿ ಕಟುಂಬಕ್ಕೆ ನಿಷ್ಠರಾಗಿದ್ದ ಸತೀಶ್‌ ಶರ್ಮಾ (73) ಅವರು ಗೋವಾದಲ್ಲಿ ಬುಧವಾರ ನಿಧನರಾಗಿದ್ದರು.

ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಓಕೆ ಎಂದ ರಾಹುಲ್: ಇನ್ಮುಂದೆ ಟಗರು ಆಟ ಶುರು .

 ರಾಹುಲ್‌ ಗಾಂಧಿ ಅವರಿಗೆ ರಾಜಕೀಯದ ಆರಂಭಿಕ ದಿನಗಳಲ್ಲಿ ಗುರುವಿನ ಸ್ಥಾನದಲ್ಲಿದ್ದು ಮಾರ್ಗದರ್ಶನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್‌ ತಮ್ಮ ರಾಜಕೀಯ ಗುರುವಿನ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

ಈ ವೇಳೆ ಕಾಂಗ್ರೆಸ್‌ನ ಹಲವು ಮುಖಂಡರು ಭಾಗಿಯಾಗಿದ್ದರು.

Follow Us:
Download App:
  • android
  • ios