ಪರಮ ವಂಚಕ ರಾಹುಲ್ ಗಾಂಧಿ ಭಾರತ ಜೋಡೋ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಸರ್ಕಾರ ಮತ್ತು ಪಕ್ಷವು ಪ್ರತಿ ದಿನ, ಪ್ರತಿ ಜಾತಿ, ಧರ್ಮ, ಭಾಷೆಯ ಮಧ್ಯೆ ಒಡಕು ತರಲು ಯತ್ನಿಸುತ್ತಿದೆ‌’ ಎಂದು ಹರಿಹಾಯ್ದಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌

ನವದೆಹಲಿ(ಫೆ.23): 1 ಕೋಟಿ ರು. ಮೀರಿದ ಆದಾಯವುಳ್ಳ ದೇವಾಲಯಗಳಿಂದ, ಆದಾಯದ ಶೇ.10ರಷ್ಟು ಹಣವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಿರುವ ಕರ್ನಾಟಕ ಸರ್ಕಾರದ ತೀರ್ಮಾನವನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ತೀವ್ರವಾಗಿ ವಿರೋಧಿಸಿದ್ದಾರೆ. ‘ಹಿಂದೂ ದೇಗುಲಗಳ ಹಣ ನುಂಗಲು ಗಾಂಧಿ ಕುಟುಂಬ ಸಜ್ಜಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಗುರುವಾರ ಟ್ವೀಟ್‌ ಮಾಡಿರುವ ರಾಜೀವ್‌, ‘ಪರಮ ವಂಚಕ ರಾಹುಲ್ ಗಾಂಧಿ ಭಾರತ ಜೋಡೋ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಸರ್ಕಾರ ಮತ್ತು ಪಕ್ಷವು ಪ್ರತಿ ದಿನ, ಪ್ರತಿ ಜಾತಿ, ಧರ್ಮ, ಭಾಷೆಯ ಮಧ್ಯೆ ಒಡಕು ತರಲು ಯತ್ನಿಸುತ್ತಿದೆ‌’ ಎಂದು ಹರಿಹಾಯ್ದಿದ್ದಾರೆ.

ನನ್ನ ಮೊದಲ ಲೋಕಸಭಾ ಚುನಾವಣೆಗೆ ಎದುರು ನೋಡುತ್ತಿದ್ದೇನೆ: ರಾಜೀವ್ ಚಂದ್ರಶೇಖರ್

‘ಹಿಂದೂ ದೇವಾಲಯಗಳ ಮೇಲಿನ ಈ ತೆರಿಗೆಯು (ಮಸೀದಿ ಹಾಗೂ ಹಿಂದೂಯೇತರ ಪೂಜಾ ಸ್ಥಳ ಹೊರತುಪಡಿಸಿ) ಮೊಘಲ್ ಯುಗದ ಮಧ್ಯಕಾಲೀನ ಜೀಜ್ಯಾ ತೆರಿಗೆಯು ರಾಹುಲ್ ಗಾಂಧಿಯವರ ಕಾಂಗ್ರೆಸ್‌ನ ಆವೃತ್ತಿಯಾಗಿದೆ‌. ಈ ತೆರಿಗೆಯನ್ನು ಹಿಂದೂಗಳಿಂದ ಮಾತ್ರ ಸಂಗ್ರಹಿಸಲಾಗುತ್ತಿತ್ತು. ಈಗ ಗುತ್ತಿಗೆದಾರರಿಂದ ಲೂಟಿ ಹೊಡೆದಿದ್ದು ಸಾಕಾಗದೇ, ಕಾಂಗ್ರೆಸ್‌ನ ಪರಮೋಚ್ಚ ಕುಟುಂಬವು ಹಿಂದೂ ದೇವಾಲಯಗಳ ಹಿಂದೂ ಭಕ್ತರ ಹಣವನ್ನು ನುಂಗಲು ಸಿದ್ಧವಾಗಿದೆ’ ಎಂದು ಸಚಿವರು ಕಿಡಿಕಾರಿದ್ದಾರೆ.