ನವದೆಹಲಿ (ಡಿ.  03)  ಕೊರೊನಾ ಲಸಿಕೆ  ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆಗಳ ಸರಮಾಲೆ ಇಟ್ಟಿದ್ದಾರೆ. ಲಸಿಕೆ ಯಾರ್ಯಾರಿಗೆ ಸಿಗುತ್ತೆ ಎಂಬುದನ್ನು ಮೊದಲು ಸ್ಪಷ್ಟಮಾಡಿ ಎಂದು ಸವಾಲು ಹಾಕಿದ್ದಾರೆ. 

ಕೊರೊನಾ ಲಸಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಮತ್ತೆ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಕೊರೊನಾ ಲಸಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಹೇಳಿಕೆಗಳು ಗೊಂದಲ ತರುತ್ತಿದೆ. ಬಿಹಾರ ಚುನಾವಣೆ ವೇಳೆ ಎಲ್ಲರಿಗೂ ಲಸಿಕೆ ಕೊಡುತ್ತೇವೆ ಎಂದಿದ್ದವರು ಈಗ ರಾಗ ಬದಲಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

'ಕೊರೋನಾ ಲಸಿಕೆ ಬಗ್ಗೆ ಮೋದಿಗೆ ಇರುವ ಜ್ಞಾನ ಅಪಾರ'

ಎರಡು ದಿನಗಳ ಹಿಂದೆ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮಾತನಾಡಿ, ಎಲ್ಲರಿಗೂ ಕೊರೊನಾ ಲಸಿಕೆ ನೀಡುವ ಕುರಿತು ಕೇಂದ್ರ ಸರ್ಕಾರ ಯೋಚಿಸಿಲ್ಲ ಎಂದಿದ್ದು ಹಲವು ಪ್ರಶ್ನೆಗಳನ್ನು ಎತ್ತುವಂತೆ ಮಾಡಿತ್ತು.

ಕೊರೋನಾ ವೈರಸ್ ಗೆ ಲಸಿಕೆ ತಯಾರಿಕೆ ವಿವಿಧ ಹಂತಗಳಲ್ಲಿ ಇದೆ. ಅತ್ತ ಬ್ರಿಟನ್ ತಾಣು ಲಸಿಕೆ ಕಂಡುಹಿಡಿದಿದ್ದು ಶೇ.  95  ರಷ್ಟು ಪರಿಣಾಂಕಾರಿಯಾಗಿದೆ ಎಂದು ಘೋಷಣೆ ಮಾಡಿಕೊಂಡಿದೆ.  ಪುಣೆ , ಹೈದರಾಬಾದ್, ಅಹಮದಾಬಾದ್ ನಲ್ಲಿಯೂ ಲಸಿಕೆ ಮೂರನೇ ಹಂತದ ಟ್ರಯಲ್ ನಲ್ಲಿದೆ.