ಪುಣೆ(ನ.  29)  ಪ್ರತಿಯೊಬ್ಬ ಭಾರತೀಯನಿಗೂ ಕೊರೋನಾ ಲಸಿಕೆ ಸಿಗಬೇಕು ಎಂದು ಪ್ರಧಾನಿ ಮೋದಿ ಕಟ್ಟಪ್ಪಣೆ ಮಾಡಿದ್ದು ತಾವೇ ಮುಂದೆ ನಿಂತು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. 

ಲಸಿಕೆ ಟ್ರಯಲ್ ನಡೆಯುತ್ತಿರುವ ಪುಣೆಯ ಸೆರುಮ್  ಸಂಸ್ಥೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.  ಲಸಿಕೆ ತಯಾರಿಕೆ ಮತ್ತು ಲಸಿಕೆ ಬಗ್ಗೆ ಪ್ರಧಾನಿ ಮೋದಿಗೆ ಇರುವ ಜ್ಞಾನಕ್ಕೆ ಸಂಸ್ಥೆಯ ಕಾರ್ಯಕಾರಿ ಅಧಿಕಾರಿ ಅದಾರ್  ಪೂನಾವಾಲ್ಲಾ ತಲೆದೂಗಿದ್ದಾರೆ.

ಆಕ್ಸ್ ಫರ್ಡ್ ಯುನಿವರ್ಸಿಟಿಯ ಅಸ್ಟ್ರಾ ಜನಕಾ ಲಸಿಕೆಯನ್ನು ಸಂಸ್ಥೆ ಮೂರನೇ  ಹಂತದ ಟ್ರಯಲ್ ಗೆ ಒಳಪಡಿಸಿದೆ. ಪ್ರಧಾನಿಯೊಂದಿಗೆ ವಿವರಣಾತ್ಮಕ ಸಂವಾದ ಈ ವಿಚಾರದಲ್ಲಿ ನಡೆಯಿತು ಎಂದು ವಿವರಣೆ ನೀಡಿದ್ದಾರೆ.

ಪಿಪಿಇ ಕಿಟ್ ಧರಿಸಿ ಮೋದಿ ಪರಿಶೀಲನೆ

ಪುಣೆ ಮತ್ತು ಮಂಡ್ರಿಯಲ್ಲಿ ಕೊರೋನಾ ಲಸಿಕೆ ಸಿದ್ಧಪಡಿಸುವುದಕ್ಕಾಗಿಯೇ ಅತಿದೊಡ್ಡ ಸಂಖ್ಯೆಯಲ್ಲಿ ಸಿಬ್ಬಂದಿ ಪಡೆ ಸಿದ್ಧಮಾಡಿಕೊಂಡಿದ್ದೇವೆ.  ಪ್ರಧಾನಿ ಮೋದಿ ಸಹ ಇದನ್ನು ಗಮನಿಸಿದ್ದಾರೆ. ನಾವು ಲಸಿಕೆ ಸಾಧಕ ಮತ್ತು ಬಾಧಕಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಪೂನಾವಾಲ್ಲಾ ತಿಳಿಸಿದ್ದಾರೆ.

ಮುಂದಿನ ಎರಡು ವಾರದಲ್ಲಿ ಸ್ಪಷ್ಟ ಚಿತ್ರಣವೊಂದು ನಮಗೆ ಸಿಗಲಿದೆ. ಲಸಿಕೆಯನ್ನು ತುರ್ತು ಅಗತ್ಯಕ್ಕೆ ಬಳಸಿಕೊಳ್ಳಲು ಮೊದಲ ಆದ್ಯತೆ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಡ್ರಗ್ಸ್ ಕಮಟ್ರೋಲರ್ ಗೆ ಸಕಲ ಮಾಹಿತಿ ಸಲ್ಲಿಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. 

ಪುಣೆ ಮಾತ್ರವಲ್ಲದೆ ಹೈದರಾಬಾದ್ ಮತ್ತು ಅಹಮದಾಬಾದ್ ನಲ್ಲಿಯೂ ಲಸಿಕೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.