ಮನಮೋಹನ್ ಸಿಂಗ್‌ಗೆ ಭಾವುಕ ವಿದಾಯ ಹೇಳಿದ ರಾಹುಲ್ ಗಾಂಧಿ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ರಾಹುಲ್ ಗಾಂಧಿ ಪಾರ್ಥಿವ ಶರೀರಕ್ಕೆ ಹೆಗಲು ನೀಡಿದರು. ನಿಗಮ್ ಭೋದ್ ಘಾಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.
ನವದೆಹಲಿ: ಮಾಜಿ ಪ್ರಧಾನ ಮಂತ್ರಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಕೆಂಪುಪೋಟೆ ಹಿಂಭಾಗದಲ್ಲಿರುವ ನಿಗಮ್ ಭೋದ್ ಘಾಟ್‌ನಲ್ಲಿ ಇಂದು ನೆರವೇರಿತು. ಕಾಂಗ್ರೆಸ್ ಸಂಸದ, ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ, ಭಾರತದ ಜಾಗತಿಕ ಶಿಲ್ಪಿ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಹೆಗಲು ನೀಡಿ ಭಾವುಕರಾದರು. ಇಂದು ಬೆಳಗ್ಗೆ ಸಿಂಗ್ ಅವರ ನಿವಾಸದಿಂದ ಪಾರ್ಥಿವ ಶರೀರವನ್ನು ಕಾಂಗ್ರೆಸ್ ಕಚೇರಿಗೆ ತರಲಾಗಿತ್ತು. ನಂತರ ಅಲ್ಲಿಂದ ಸುಮಾರು 11 ಕಿಮೀ ದೂರವರೆಗೆ ಸೇನಾ ವಾಹನದಲ್ಲಿ ಸಿಂಗ್ ಅವರ ಅಂತಿಮ ಯಾತ್ರೆ ನಡೆಸಲಾಯ್ತು. ಸಿಂಗ್ ಮೃತದೇಹದ ವಾಹನದ ಮುಂಭಾಗದಲ್ಲಿಯೇ ರಾಹುಲ್ ಗಾಂಧಿ ಕುಳಿತಿದ್ದ ದೃಶ್ಯಗಳು ಕಂಡು ಬಂದವು.
ನಿಗಮ್ ಭೋದ್ ಘಾಟ್‌ನಲ್ಲಿ ಮೂರು ಸೇನೆಗಳಿಂದ ಮನಮೋಹನ್ ಸಿಂಗ್ ಅವರಿಗೆ ಅಂತಿಮ ನಮನ ಸಲ್ಲಿಸಿದೆ. ನಂತರ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಗಳು, ಕೇಂದ್ರ ಸಚಿವರು, ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷದ ರಾಜಕೀಯ ಮುಖಂಡರು ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.
ಇದನ್ನೂ ಓದಿ: ಒಮ್ಮೆಯೂ ಗೆಲ್ಲದೇ ಮನಮೋಹನ್ ಸಿಂಗ್ ಕಿಂಗ್ ಆಗಿದ್ದು ಹೇಗೆ?
ಗುರುವಾರ ರಾತ್ರಿ 9.51ಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದ್ದರು. ಈ ವೇಳೆ ಬೆಳಗಾವಿಯಲ್ಲಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮಧ್ಯರಾತ್ರಿಯೇ ದೆಹಲಿಗೆ ದೌಡಾಯಿಸಿದ್ದರು. ಡಿಸೆಂಬರ್ 27ರಂದು ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿ, ಅದೇ ವೇದಿಕೆ ಮೇಲೆ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯ್ತು.
ನಿಗಮ್ ಭೋದ್ ಘಾಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸಿಖ್ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ಸಲ್ಲಿಸಲಾಯ್ತು.
ಇದನ್ನೂ ಓದಿ: ಭಾರತದ ಜಾಗತಿಕ ಪಿತಾಮಹ ಮನಮೋಹನ್ ಸಿಂಗ್ ಇನ್ನು ನೆನಪು ಮಾತ್ರ; ನಿಗಮ್ ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ