ಭಾರತದ ಜಾಗತಿಕ ಪಿತಾಮಹ ಮನಮೋಹನ್ ಸಿಂಗ್ ಇನ್ನು ನೆನಪು ಮಾತ್ರ; ನಿಗಮ್ ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ
ಜಾಗತಿಕ ಭಾರತದ ಶಿಲ್ಪಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಪುತ್ರಿಯ ಆಗಮನಕ್ಕಾಗಿ ಅಂತ್ಯಕ್ರಿಯೆಯನ್ನು ಶನಿವಾರಕ್ಕೆ ಮುಂದೂಡಲಾಗಿತ್ತು.

ನವದೆಹಲಿ: ಜಾಗತಿಕ ಭಾರತದ ಶಿಲ್ಪಿ, ಉದಾರ ಆರ್ಥಿಕತೆಯ ಪಿತಾಮಯ, ಸರ್ವಶ್ರೇಷ್ಠ ಹಣಕಾಸು ಸಚಿವ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸಿಖ್ ಸಂಪ್ರದಾಯದಂತೆ ನೆರವೇರಿಸಲಾಯ್ತು. ಡಿಸೆಂಬರ್ 26ರಂದು ರಾತ್ರಿ 8.06ಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 9.51ಕ್ಕೆ ಮನಮೋಹನ್ ಸಿಂಗ್ ನಿಧನರಾಗಿರುವ ಮಾಹಿತಿಯನ್ನು ವೈದ್ಯಾಧಿಕಾರಿಗಳು ಖಚಿತಪಡಿಸಿದರು. ಗುರುವಾರ ಉಸಿರಾಟದ ಸಮಸ್ಯೆಯಿಂದಾಗಿ ಮನಮೋಹನ್ ಸಿಂಗ್ ಪ್ರಜ್ಞೆ ಕಳೆದುಕೊಂಡಿದ್ದರು.
ಸಾರ್ವಜನಿಕರ ದರ್ಶನಕ್ಕಾಗಿ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಇಂದು ಬೆಳಗ್ಗೆ ಸಿಂಗ್ ಅವರ ನಿವಾಸದಿದಂದ ಪಾರ್ಥಿವ ಶರೀರ ಎಐಸಿಸಿ ಕಚೇರಿಗೆ ತೆಗೆದುಕೊಂಡು ಬರಲಾಗಿತ್ತು. ಎಐಸಿಸಿ ಕಚೇರಿಯಿಂದ ನಿಗಮ್ ಬೋಧ್ ಘಾಟ್‌ವರೆಗೆ ಸೇನಾ ವಾಹನದಲ್ಲಿ ತೆಗೆದುಕೊಂಡು ಬರಲಾಗಿತ್ತು. ರಸ್ತೆಯುದ್ದಕ್ಕೂ ಸೇರಿದ್ದ ಜನರು, ಅಮರ್ ರಹೇ ಎಂದು ಘೋಷಣೆ ಕೂಗಿದ್ದರು.
ನಿಗಮ್ ಬೋಧ್ ಘಾಟ್‌ನಲ್ಲಿ ಮೂರು ಸೇನೆಗಳ ಮುಖ್ಯಸ್ಥರು, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಮಾಜಿ ಪ್ರಧಾನಿಗಳು ಪುಷ್ಪ ನಮನ ಸಲ್ಲಿಸಿದರು.
ಅಂತ್ಯಕ್ರಿಯೆ ವಿಳಂಬವಾಗಿದ್ದೇಕೆ?
ಡಾ| ಮನಮೋಹನ್ ಸಿಂಗ್ ಅವರ ಪುತ್ರಿ ಅಮೆರಿಕದಲ್ಲಿದ್ದಾರೆ. ಅವರ ಆಗಮನ ವಿಳಂಬವಾದ ಹಿನ್ನೆಲೆಯಲ್ಲಿ ಶುಕ್ರವಾರವೇ ನಡೆಯಬೇಕಿದ್ದ ಕ್ರಿಯೆಯನ್ನು ಶನಿವಾರಕ್ಕೆ ನಿಗದಿಪಡಿಸಲಾಗಿತ್ತು.
ಇದನ್ನೂ ಓದಿ: ಒಮ್ಮೆಯೂ ಗೆಲ್ಲದೇ ಮನಮೋಹನ್ ಸಿಂಗ್ ಕಿಂಗ್ ಆಗಿದ್ದು ಹೇಗೆ?
अलविदा डॉ. मनमोहन सिंह जी https://t.co/bhfHQYXFtX
— Congress (@INCIndia) December 28, 2024
भारत मां के लाल मनमोहन सिंह जी अमर रहें pic.twitter.com/yZQnDY29lS
— Congress (@INCIndia) December 28, 2024
#WATCH | Delhi: CPP Chairperson Sonia Gandhi pays her last respects to former Prime Minister #DrManmohanSingh at Nigam Bodh Ghat, where his last rites will be performed. pic.twitter.com/lYkFIg9Yht
— ANI (@ANI) December 28, 2024