ನವದೆಹಲಿ(ಜ. 01)  ಇಟಲಿ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಇಲ್ಲಿಯೂ ರೈತರ ಪ್ರತಿಭಟನೆ ವಿಚಾರವನ್ನು ಮಾತನಾಡಿದ್ದಾರೆ.

ನಮಗಾಗಿ ತ್ಯಾಗ ಮಾಡಿದವರನ್ನು ನೆನೆಯಬೇಕು.. ಅಸಮಾನತೆಯ ಶಕ್ತಿಗಳ ವಿರುದ್ಧ ಘನತೆ ಮತ್ತು ಗೌರವಗಳೊಂದಿಗೆ ಹೋರಾಡುತ್ತಿರುವ ರೈತರು ಮತ್ತು ಕಾರ್ಮಿಕರೊಂದಿಗೆ ನನ್ನ ಹೃದಯ ಸದಾ ಮಿಡಿಯುತ್ತ ಇರುತ್ತದೆ ಎಂದಿದ್ದಾರೆ.

ಇಟಲಿಯಲ್ಲೇ ಕುಳಿತು ದೇಶ  ಉಳಿಸಿ ಎಂದ ರಾಹುಲ್!

ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ   ರೈತರು ನಡೆಸುತ್ತಿರುವ ಪ್ರತಿಭಟನೆಗೆ ನನ್ನ ಬೆಂಬಲ ಸದಾ ಇದ್ದೇ ಇರುತ್ತದೆ ಎಂದಿದ್ದಾರೆ. ರೈತರ  ಪ್ರತಿಭಟನೆಗೆ ಸಹಕಾರ ಎನ್ನುತ್ತ  ವಿದೇಶಕ್ಕೆ  ಹಾರಿದ್ದ ರಾಹುಲ್ ಗಾಂಧಿ ವಿರುದ್ಧ ಕಮೆಂಟ್ ಗಳು ಹರಿದು ಬಂದಿದ್ದವು.

ಕೃಷಿ ಮಸೂದೆಗಳನ್ನು ವಿರೋಧಿಸಿ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕರೊಂದಿಗೆ ರಾಷ್ಟ್ರಪತಿಗಳನ್ನು  ಭೇಟಿ  ಮಾಡಿದ್ದರು.  ಇನ್ನೊಂದು ಕಡೆ ಪಂಜಾಬ್ ಕಾಂಗ್ರೆಸ್ ಮುಖಂಡರು ಪ್ರತಿಭಟನೆಗೆ ಬೆಂಬಲ ಕೊಟ್ಟಿದ್ದು ರೈತರೊಂದಿಗೆ ಕೈಜೋಡಿಸಿದ್ದಾರೆ.