Asianet Suvarna News Asianet Suvarna News

ಕಾಂಗ್ರೆಸ್ ಸೇರಿಕೊಳ್ತಾರಾ ಪ್ರಶಾಂತ್ ಕಿಶೋರ್?ಹಿರಿಯ ನಾಯಕರ ಜೊತೆ ರಾಹುಲ್ ಚರ್ಚೆ!

  • ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ರಾಜಕೀಯಕ್ಕೆ ಎಂಟ್ರಿಗೆ ಸರ್ಕಸ್
  • ಹಿರಿಯ ಕಾಂಗ್ರೆಸ್ ನಾಯಕರ ಜೊತೆ ರಾಹುಲ್ ಗಾಂಧಿ ಚರ್ಚೆ
  • ಕಾಂಗ್ರೆಸ್ ಸೇರಿಕೊಳ್ಳುತ್ತಾರಾ ಪಿಕೆ? 
Rahul gandhi consult senior leaders about proposal of electoral strategist Prashant Kishor joining party ckm
Author
Bengaluru, First Published Jul 29, 2021, 8:13 PM IST

ನವದೆಹಲಿ(ಜು.29):  ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷ ಸೇರಿಕೊಳ್ಳುತ್ತಾರಾ? ಈ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಜುಲೈ 13 ರಂದು ಪ್ರಶಾಂತ್ ಕಿಶೋರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದರು. ಬಳಿಕ ತಣ್ಣಾಗಿದ್ದ ಈ ಚರ್ಚೆ ಇದೀಗ ಮತ್ತೆ ಶುರುವಾಗಿದೆ. ಇದೀಗ ರಾಹುಲ್ ಗಾಂಧಿ, ಹಿರಿಯ ನಾಯಕರ ಜೊತೆ ಪ್ರಶಾಂತ್ ಕಿಶೋರ್ ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿದೆ.

ಪವಾರ್‌ಗೆ ರಾಷ್ಟ್ರಪತಿ ಹುದ್ದೆ: ಕಾಂಗ್ರೆಸ್‌ ಬಳಿ ಪ್ರಶಾಂತ್‌ ಕಿಶೋರ್‌ ಲಾಬಿ?

ಪ್ರಶಾಂತ್ ಕಿಶೋರ್ ಪಕ್ಷಕ್ಕೆ ಸೇರಿಕೊಂಡರೆ ಮುಂಬರವ ಲೋಕಸಭೆ ಹಾಗೂ ವಿಧನಾಸಭೆ ಚುನಾವಣೆಗಳಲ್ಲಿ ಪಕ್ಷಕ್ಕೆ ನೆರವಾಗಲಿದೆ ಎನ್ನುವುದು ರಾಹುಲ್ ಗಾಂಧಿ ವಾದ. ಈ ಕುರಿತು ಹಿರಿಯರ ಜೊತೆ ಅಭಿಪ್ರಾಯ ಕೇಳಿದ್ದಾರೆ. ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕಾಗುವ ಲಾಭ ಹಾಗೂ ನಷ್ಟದ ಕುರಿತು ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದಾರೆ.

ಜುಲೈ 22 ರಂದು ರಾಹುಲ್ ಗಾಂಧಿ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಎ.ಕೆ.ಆಂಟನಿ, ಮಲ್ಲಿಕಾರ್ಜುನ್ ಖರ್ಗೆ, ಕಮಲ್ ನಾಥ್, ಅಂಬಿಕಾ ಸೋನಿ, ಹರೀಶ್ ರಾವತ್, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ರಾಹುಲ್ ಗಾಂಧಿ, ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಕುರಿತು ಚರ್ಚಿಸಿದ್ದಾರೆ.

ಪಿ.ಕೆ. ಈಸ್ ಬ್ಯಾಕ್..!? ಡೆಲ್ಲಿ ರಾಜಕೀಯ ಕಟ್ಟೆಗೆ ಪ್ರಶಾಂತ್ ಕಿಶೋರ್

ಈ ಸಭೆಯ ಬಹುತೇಕ ಸದಸ್ಯರು ಪ್ರಶಾಂತಿ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಪಕ್ಷವನ್ನು ಬಲಪಡಿಸಲಿದೆ ಎಂದಿದ್ದಾರೆ. ಚುಣಾವಣಾ ರಣಂತ್ರ, ಅಭ್ಯರ್ಥಿಗಳ ಆಯ್ಕೆ, ಪ್ರಚಾರಗಳಿಗೆ ಪ್ರಶಾಂತಿ ಕಿಶೋರ್ ನೆರವು ಅಗತ್ಯವಾಗಿದೆ. ಇಷ್ಟೇ ಅಲ್ಲ, ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಸಾಧನೆ, ಪ್ರಣಾಳಿಕೆ, ಹೇಳಿಕೆಗಳನ್ನು ಜನರಿಗೆ ತಲುಪಿಸಲು ಪ್ರಶಾಂತ್ ಕಿಶೋರ್ ನಿಪುಣರಾಗಿದ್ದಾರೆ. ಹೀಗಾಗಿ ತಕ್ಷಣವೇ ಸೇರಿಸಿಕೊಳ್ಳಿ ಎಂಬ ಅಭಿಪ್ರಾಯವನ್ನು ಹಿರಿಯರು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿದೆ.

Follow Us:
Download App:
  • android
  • ios