ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ, ಪಕ್ಷದ ಒಳಗಿನವರು ಮತ್ತು I.N.D.I.A ಬ್ಲಾಕ್‌ನೊಳಗಿನ ಮೈತ್ರಿ ಪಾಲುದಾರರು ರಾಹುಲ್ ಗಾಂಧಿಯವರ ಆಗ್ನೇಯ ಏಷ್ಯಾ ಪ್ರವಾಸದ ಸಮಯವನ್ನು ಪ್ರಶ್ನಿಸಿದ್ದಾರೆ ಎಂಬ ವರದಿಗಳಿವೆ.
ನವದೆಹಲಿ (ಡಿಸೆಂಬರ್ 9, 2023): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಒಂದು ವಾರದ ವಿದೇಶ ಪ್ರವಾಸ ಕಾರಣಾಂತರಗಳಿಂದ ರದ್ದಾಗಿದೆ. ಪಂಚ ರಾಜ್ಯ ಚುನಾವಣೆ ಬಳಿಕ ಡಿಸೆಂಬರ್ 8 ರಿಂದ ಡಿಸೆಂಬರ್ 15ರವರೆಗೆ 7 ದಿನಗಳ ಕಾಲ ಆಗ್ನೇಯ ಏಷ್ಯಾ ರಾಷ್ಟ್ರಗಳಾದ ಸಿಂಗಾಪುರ, ಮಲೇಷ್ಯಾ, ಬ್ರೂನಿ, ಇಂಡೋನೇಷ್ಯಾ ಮತ್ತು ವಿಯೆಟ್ನಾಂ ದೇಶಗಳಿಗೆ ರಾಹುಲ್ ಗಾಂಧಿ ಭೇಟಿ ನೀಡಬೇಕಿತ್ತು.
ಅಲ್ಲಿ ಅನಿವಾಸಿ ಭಾರತೀಯರ ಜೊತೆ ಸಭೆ ಮಾತುಕತೆ ನಡೆಸಬೇಕಿತ್ತು. ಆದರೆ ಈಗ ರಾಹುಲ್ ಗಾಂಧಿ ಕಾರಣಾಂತರಗಳಿಂದ ಪ್ರವಾಸ ರದ್ದು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಇದನ್ನು ಓದಿ: ತೆಲಂಗಾಣ ಮುಖ್ಯಮಂತ್ರಿಯಾಗಿ ಇಂದು ರೇವಂತ್ ರೆಡ್ಡಿ ಪ್ರಮಾಣ: ಸೋನಿಯಾ, ರಾಹುಲ್, ಖರ್ಗೆ ಭಾಗಿ!
3 ರಾಜ್ಯಗಳ ವಿಧಾನಸಭಾ ಚುನಾವಣೆಗಳಾದ ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯ ಪ್ರದೇಶದಲ್ಲಿ ಇತ್ತೀಚೆಗೆ ಬಿಜೆಪಿಗೆ ಕಾಂಗ್ರೆಸ್ ಸೋತ ನಂತರ ಪ್ರವಾಸ ರದ್ದಾಗಿದೆ. ಎರಡು ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದ್ದು, ಮೂರೂ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ, ಪಕ್ಷದ ಒಳಗಿನವರು ಮತ್ತು I.N.D.I.A ಬ್ಲಾಕ್‌ನೊಳಗಿನ ಮೈತ್ರಿ ಪಾಲುದಾರರು ರಾಹುಲ್ ಗಾಂಧಿಯವರ ಆಗ್ನೇಯ ಏಷ್ಯಾ ಪ್ರವಾಸದ ಸಮಯವನ್ನು ಪ್ರಶ್ನಿಸಿದ್ದಾರೆ ಎಂಬ ವರದಿಗಳಿವೆ.
ಇದನ್ನೂ ಓದಿ: ಪ್ರಣಬ್‌ರನ್ನು ಪ್ರಧಾನಿ ಮಾಡುವುದು ಸೋನಿಯಾಗೆ ಇಷ್ಟವಿರಲಿಲ್ಲ, ಆತ್ಮಕಥೆಯಲ್ಲಿ ಸತ್ಯ ಬಯಲು
ಚುನಾವಣಾ ಫಲಿತಾಂಶ ಪ್ರಕಟವಾದ ಮರುದಿನ ಡಿಸೆಂಬರ್ 4 ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆಗೆ ರಾಹುಲ್ ಸಹಾಯ ಮಾಡುವುದನ್ನು ನೋಡಬೇಕು ಎಂಬುದು ಪಕ್ಷದೊಳಗಿನ ಅಭಿಪ್ರಾಯವಾಗಿತ್ತು. ತೆಲಂಗಾಣ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಹುಲ್ ಗಾಂಧಿ ಗುರುವಾರ ಹೈದರಾಬಾದ್‌ಗೆ ಬಂದಿದ್ದರು.
ಇದನ್ನೂ ಓದಿ: 10 ವರ್ಷದಲ್ಲಿ ಶೇ. 50 ಮಹಿಳಾ ಸಿಎಂ: ಕಾಂಗ್ರೆಸ್‌ಗೆ ರಾಹುಲ್ ಗಾಂಧಿ ಟಾರ್ಗೆಟ್
