Asianet Suvarna News Asianet Suvarna News

ತೆಲಂಗಾಣ ಮುಖ್ಯಮಂತ್ರಿಯಾಗಿ ಇಂದು ರೇವಂತ್‌ ರೆಡ್ಡಿ ಪ್ರಮಾಣ: ಸೋನಿಯಾ, ರಾಹುಲ್‌, ಖರ್ಗೆ ಭಾಗಿ!

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಹಲವು ಕಾಂಗ್ರೆಸ್‌ ನಾಯಕರು ಭಾಗಿಯಾಗಲಿದ್ದಾರೆ.

revanth reddy to take oath as telangana chief minister who all are invited ash
Author
First Published Dec 7, 2023, 9:50 AM IST

ನವದೆಹಲಿ (ಡಿಸೆಂಬರ್ 7, 2023): ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ನಾಯಕ ರೇವಂತ್‌ ರೆಡ್ಡಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ತೆಲಂಗಾಣ ರಚನೆಯಾದ ಬಳಿಕ ಮೊದಲ ಬಾರಿಗೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಭರ್ಜರಿಯಾಗಿ ಕಾರ್ಯಕ್ರಮ ಆಯೋಜನೆಗೆ ನಿರ್ಧರಿಸಲಾಗಿದೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಹಲವು ಕಾಂಗ್ರೆಸ್‌ ನಾಯಕರು ಭಾಗಿಯಾಗಲಿದ್ದಾರೆ.

ಇದನ್ನು ಓದಿ: ತೆಲಂಗಾಣದಲ್ಲಿ ಕಾಂಗ್ರೆಸ್‌ ಭರ್ಜರಿ ಚುನಾವಣಾ ಭರವಸೆ: ಗ್ಯಾರಂಟಿ ಜಾರಿಗೆ ಹಣದ ಬರ?

ಈ ನಡುವೆ ರೇವಂತ್‌ ರೆಡ್ಡಿ ಬುಧವಾರ ನವದೆಹಲಿಯಲ್ಲಿ ಖರ್ಗೆ, ಸೋನಿಯಾ, ರಾಹುಲ್‌ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಜೊತೆಗೆ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮಲ್ಕಜ್‌ಗಿರಿ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಕೂಡಾ ಸಲ್ಲಿಸಿದರು.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 119 ಸ್ಥಾನಗಳ ಪೈಕಿ ಕಾಂಗ್ರೆಸ್‌ 64 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದಿತ್ತು. ಸಂಸದರೂ ಆಗಿರುವ ರೇವಂತ್‌ ರೆಡ್ಡಿ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿಯೂ ಪಕ್ಷವನ್ನು ಮುನ್ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಇವರು, ಕೇಂದ್ರದ ಮಾಜಿ ಸಚಿವ ಜೈಪಾಲ್‌ ರೆಡ್ಡಿ ಅವರ ಅಳಿಯ.

ಇದನ್ನು ಓದಿ: ತೆಲಂಗಾಣದಲ್ಲಿ ಬದಲಾಗ್ತಿದೆ ಸರ್ಕಾರ: ರೇವಂತ್ ರೆಡ್ಡಿ, ಕೆಟಿಆರ್‌ಗೆ ಯುಕೆ ಡೆಪ್ಯುಟಿ ಹೈ ಕಮಿಷನರ್ ಪೋಸ್ಟ್‌ ವೈರಲ್‌!

ತೃತೀಯ ರಂಗ ರಾಷ್ಟ್ರ ನಾಯಕನಾಗಲು ಹೊರಟ ಕೆಸಿಆರ್‌ಗೆ ತವರಲ್ಲೇ ಮುಖಭಂಗ: ಕನಸಿನ ಕಾರಿಗೆ ಬ್ರೇಕ್‌ ಹಾಕಿದ ಹಸ್ತ!

Latest Videos
Follow Us:
Download App:
  • android
  • ios