Asianet Suvarna News Asianet Suvarna News

ಮೋದಿ ಎಲ್ಲಾ ಮಾತಾಡ್ತಾರೆ, ಸಮಸ್ಯೆಯೊಂದನ್ನು ಬಿಟ್ಟು: ರಾಹುಲ್ ವ್ಯಂಗ್ಯ!

‘ಪ್ರಧಾನಿ ಮೋದಿ ಬೇಕಾದ್ದು, ಬೇಡವಾದದ್ದು ಎಲ್ಲಾ ಮಾತಾಡ್ತಾರೆ’| ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ| ದೇಶದ ಜ್ವಲಂತ ಸಮಸ್ಯೆಗಳ ಕುರಿತು ಮೋದಿ ತುಟಿ ಬಿಚ್ಚುವುದಿಲ್ಲ ಎಂದ ರಾಹುಲ್| ‘ಮೋದಿ ಭಾಷಣದಲ್ಲಿ ನಿರುದ್ಯೋಗ ಸಮಸ್ಯೆ, ಆರ್ಥಿಕ ಹಿಂಜರಿಕೆ ಪ್ರಸ್ತಾಪವೇ ಇಲ್ಲ’| ‘ಜನರ ಗಮನ  ಬೇರೆಡೆ ಸೆಳೆಯುವ ಕಲೆಯನ್ನು ಪ್ರಧಾನಿ ಮೋದಿ ಕರಗತ ಮಾಡಿಕೊಂಡಿದ್ದಾರೆ’| 

Rahul Gandhi Blames PM Modi Talkes Everything Except Country Problem
Author
Bengaluru, First Published Feb 6, 2020, 4:18 PM IST

ನವದೆಹಲಿ(ಫೆ.06): ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತ ಪ್ರಧಾನಿ ಮೋದಿ ಭಾಷಣವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಸುಮಾರು 2 ಗಂಟೆಗಳ ಸುದೀರ್ಘ ಭಾಷಣದಲ್ಲಿ ಪ್ರಧಾನಿ ಮೋದಿ ಬೇಕಾದ್ದು, ಬೇಡವಾಗಿದ್ದು ಎಲ್ಲಾ ಮಾತನಾಡಿದ್ದಾರೆ. ಆದರೆ ದೇಶದ ಜ್ವಲಂತ ಸಮಸ್ಯೆಗಳ ಕುರಿತು ತುಟಿ ಬಿಚ್ಚಲಿಲ್ಲ ಎಂದು ರಾಹುಲ್ ಕಿಡಿಕಾರಿದ್ದಾರೆ.

ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಎಲ್ಲವನ್ನೂ ಮಾತನಾಡಿದರು. ಆದರೆ ಯುವ ಸಮುದಾಯವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ, ಆರ್ಥಿಕ ಹಿಂಜರಿಕೆ ಕುರಿತು ಮೋದಿ ಮಾತನಡಲೇ ಇಲ್ಲ ಎಂದು ರಾಹುಲ್ ಹರಿಹಾಯ್ದರು.

ಗಾಂಧಿ ನಿಮಗೆ ಟ್ರೇಲರ್ ಇದ್ದಂತೆ, ನಮಗೆ ಜೀವನ: ವಿಪಕ್ಷಗಳ ಕಾಲೆಳೆದ ಮೋದಿ!

ಲೋಕಸಭೆ ಕಲಾಪದ ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ಮೂಲ ಸಮಸ್ಯೆಯಿಂದ ಜನರ ಗಮನ  ಬೇರೆಡೆ ಸೆಳೆಯುವ ಕಲೆಯನ್ನು ಪ್ರಧಾನಿ ಮೋದಿ ಕರಗತ ಮಾಡಿಕೊಂಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಗತಿಸಿದ ಇತಿಹಾಸವನ್ನೇ ಕೆದಕುತ್ತಾ ದೇಶ ಸದ್ಯ ಎದುರಿಸುತ್ತಿರುವ ಸಮಸ್ಯೆಗಳಿಂದ ವಿಮುಖವಾಗುವುದು ಪ್ರಧಾನಿ ಮೋದಿ ಚಾಳಿ ಎಂದು ರಾಹುಲ್ ಈ ವೇಳೆ ಅಸಮಾಧಾನ ಹೊರಹಾಕಿದರು.

ಯಾರಿಗೋ ಪ್ರಧಾನಿಯಾಗುವ ಬಯಕೆಯಿತ್ತು, ಅದಕ್ಕೆ ದೇಶ ಇಬ್ಭಾಗವಾಯ್ತು: ಮೋದಿ!

Follow Us:
Download App:
  • android
  • ios