Asianet Suvarna News Asianet Suvarna News

ರಾಹುಲ್ ಭಾರತ್ ಜೋಡೋ ಯಾತ್ರೆಗೆ ಮಣಿಪುರ, ಅಸ್ಸಾಂನಲ್ಲಿ ಅನುಮತಿ ನಿರಾಕರಣೆ

ಭಾನುವಾರದಿಂದ ಪ್ರಾರಂಭಕ್ಕೆ ಉದ್ದೇಶಿಸಲಾಗಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

Rahul Gandhi Bharat Jodo Yatra denied permission in Manipur Assam akb
Author
First Published Jan 10, 2024, 8:30 AM IST

ಗುವಾಹಟಿ: ಭಾನುವಾರದಿಂದ ಪ್ರಾರಂಭಕ್ಕೆ ಉದ್ದೇಶಿಸಲಾಗಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ವೇಣುಗೋಪಾಲ್, 'ಜನಾಂಗೀಯ ಹಿಂಸಾಚಾರದಿಂದ ನಲುಗಿದ್ದ ಮಣಿಪುರ ಜನರ ನೋವು ಆರಲಿ ಎಂದು ಅಲ್ಲಿಂದಲೇ ನಾವು ಯಾತ್ರೆಗೆ ಉದ್ದೇಶಿಸಿ ಕಳೆದ ವಾರವೇ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದೆವು. ಆದರೀಗ, ನಾವು ಅನುಮತಿ ನೀಡಲು ಸಾಧ್ಯವಿಲ್ಲ. ಅರ್ಜಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಮಣಿಪುರ ಸರ್ಕಾರ ಹೇಳುತ್ತಿದೆ. ಇದೇ ರೀತಿ ಅಸ್ಸಾಂನಲ್ಲೂ ಸಹ ಶಾಲೆಯ ಮೈದಾನವೊಂದರಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಸಮಾವೇಶಕ್ಕೆ ಅನುಮತಿ ನಿರಾಕರಿಸಿದ್ದಾರೆ.

ಕಾಂಗ್ರೆಸ್‌ನಿಂದ ಉದ್ದುದ್ದ ಭಾರತ ಜೋಡೋ ಯಾತ್ರೆ ಆಯ್ತು, ಜ.14ರಿಂದ ಅಡ್ಡಡ್ಡ ಯಾತ್ರೆ ಆರಂಭ: ಇದು ಪಕ್ಕಾ ಬಸ್‌ ಯಾತ್ರೆ!

ಈ ರೀತಿ ರಾಜ್ಯವೊಂದರಲ್ಲಿ ರಾಜಕೀಯ ಪಕ್ಷವೊಂದರ ಸಮಾವೇಶಕ್ಕೆ ಅನುಮತಿ ನೀಡುವುದು ಕೇಂದ್ರ ಸರ್ಕಾರದ ಕೆಲಸವೇ' ಎಂಬುದಾಗಿ ಪ್ರಶ್ನಿಸಿದ್ದಾರೆ. ಈ ಹಿಂದೆ ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಶ್ರೀನಗರಕ್ಕೆ ಸೆ.7, 2022ರಿಂದ 136 ದಿನಜ.30ರವರೆಗೆ 12 ರಾಜ್ಯದಲ್ಲಿ ರಾಹುಲ್ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸಲಾಗಿತ್ತು.

ಇದರ ಮುಂದುವರಿದ ಭಾಗವಾಗಿ ಲೋಕಸಭಾ ಚುನಾವಣೆಗೂ ಮುನ್ನ ಭಾರತ್ ಜೋಡೋ ನ್ಯಾಯಯಾತ್ರೆಯನ್ನು ಮಣಿಪುರದ ಇಂಫಾಲ್‌ನಿಂದ ಜ.14ರಂದು ಪ್ರಾರಂಭಿಸಿ ಮಾ.20ರಂದು ಮುಂಬೈನಲ್ಲಿ ಮುಗಿಸಲು ಕಾಂಗ್ರೆಸ್ ಉದ್ದೇಶಿಸಿದೆ. ಇದು ಪೂರ್ವದಿಂದ ಪಶ್ಚಿಮದ ಕಡೆಗಿನ ಯಾತ್ರೆ.

ರಾಹುಲ್ ಯಾತ್ರೆಗೆ ಜನ ಸೇರುತ್ತಾರೆ, ಮತ ಹಾಕಲ್ಲ; ಕಾರಣ ಬಿಚ್ಚಿಟ್ಟ AIUDF ಮುಖ್ಯಸ್ಥ ಬದ್ರುದ್ದೀನ್!

Latest Videos
Follow Us:
Download App:
  • android
  • ios