ಕಾಂಗ್ರೆಸ್‌ನಿಂದ ಉದ್ದುದ್ದ ಭಾರತ ಜೋಡೋ ಯಾತ್ರೆ ಆಯ್ತು, ಜ.14ರಿಂದ ಅಡ್ಡಡ್ಡ ಯಾತ್ರೆ ಆರಂಭ: ಇದು ಪಕ್ಕಾ ಬಸ್ ಯಾತ್ರೆ!
ರಾಹುಲ್‌ಗಾಂಧಿ ಕಳೆದ ವರ್ಷ ದೇಶದ ಉದ್ದುದ್ದ (ಕನ್ಯಾಕುಮಾರಿಯಿಂದ ಕಾಶ್ಮೀರ) 'ಭಾರತ ಜೋಡೋ ಯಾತ್ರೆ' ಮಾಡಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದ ಬೆನ್ನಲ್ಲಿಯೇ ಲೋಕಸಭಾ ಚುನಾವಣೆಗೆ ಮುನ್ನ ಜ.14ರಿಂದ ಅಡ್ಡಡ್ಡ (ಮಣಿಪುರದಿಂದ ಮಹಾರಾಷ್ಟ್ರ) ಭಾರತ ಜೋಡೋ ನ್ಯಾಯ ಯಾತ್ರೆ ಮಾಡಲು ಮುಂದಾಗಿದ್ದಾರೆ.
ಬೆಂಗಳೂರು (ಜ.04): ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಕಳೆದ ವರ್ಷ ದೇಶದ ಉದ್ದುದ್ದ (ಕನ್ಯಾಕುಮಾರಿಯಿಂದ ಕಾಶ್ಮೀರ) 'ಭಾರತ ಜೋಡೋ ಯಾತ್ರೆ' ಮಾಡಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದ ಬೆನ್ನಲ್ಲಿಯೇ ಲೋಕಸಭಾ ಚುನಾವಣೆಗೆ ಮುನ್ನ ಜ.14ರಿಂದ ಅಡ್ಡಡ್ಡ (ಮಣಿಪುರದಿಂದ ಮಹಾರಾಷ್ಟ್ರ) ಭಾರತ ಜೋಡೋ ನ್ಯಾಯ ಯಾತ್ರೆ ಮಾಡಲು ಮುಂದಾಗಿದ್ದಾರೆ.
ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಗೊಂದಲದ ನಡುವೆಯೂ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಈಗಾಗಲೇ ಒಂದು ಕಳೆದ ವರ್ಷ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಜೋಡೋ ಯಾತ್ರೆಯನ್ನು ಮಾಡಿ ಯಶಸ್ವಿಯಾಗಿದ್ದಾರೆ. ಹಿಮಾಚಲ ಪ್ರದೇಶ, ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ, ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಂಡಿದೆ. ದೇಶದ ಉದ್ದುದ್ದಕ್ಕೆ ಯಾತ್ರೆ ಮಾಡಿ ಯಶಸ್ವಿಯಾದ ರಾಹುಲ್ ಗಾಂಧಿ ಅವರು ಈಗ ದೇಶದಲ್ಲಿ ಅಡ್ಡಡ್ಡ (ಮಣಿಪುರದಿಂದ ಮಹಾರಾಷ್ಟ್ರ) ಯಾತ್ರೆ ಮಾಡಲು ಮುಂದಾಗಿದ್ದಾರೆ. ಆದರೆ, ಇದು ಪಾದಯಾತ್ರೆಯಾಗಿರದೇ, ಬಹುಭಾಗ ಬಸ್ ಯಾತ್ರೆಯಾಗಿದೆ.
ರಾಹುಲ್‌ಗಾಂಧಿ ಅವರು ಲೋಕಸಭಾ ಚುನಾವಣೆಗೂ ಮುನ್ನವೇ ಜ.14ರಿಂದ ಮಣಿಪುರದಿಂದ ಮಹಾರಾಷ್ಟರ ಭಾರತ ಜೋಡೋ ನ್ಯಾಯ ಯಾತ್ರೆ ಮಾಡಲು ಮುಂದಾಗಿದ್ದಾರೆ. ಇನ್ನು ಈ ಯಾತ್ರೆಗೆ ಹೆಸರನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡಿರುವ ಕಾಂಗ್ರೆಸ್ ‘ಭಾರತ ಜೋಡೋ ನ್ಯಾಯ ಯಾತ್ರೆ’ ಎಂದು ಕಾಂಗ್ರೆಸ್ ಮರುನಾಮಕರಣ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಹಿತಿಯನ್ನು ನೀಡಿದ್ದಾರೆ.
ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಆಹ್ವಾನಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅರ್ಹರಲ್ಲ, ಇಲ್ಲಿದೆ ಕಾರಣ!
ಭಾರತದ ರಾಜಕೀಯ ಇತಿಹಾಸದಲ್ಲಿ ರಾಹುಲ್‌ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಾಗಿದ ಭಾರತ್ ಜೋಡೋ ಯಾತ್ರೆ (ಸೆಪ್ಟೆಂಬರ್ 2022ರಿಂದ 2023ರ ಜನವರಿವರೆಗೆ) ಹೊಸ ಅಧ್ಯಯವನ್ನು ಬರೆದಿತ್ತು. ಈ ಯಾತ್ರೆ ಹಿಮಾಚಲ ಪ್ರದೇಶ, ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬರುವಲ್ಲಿ ಪಾತ್ರವನ್ನು ವಹಿಸಿತ್ತು. ಆದ್ದರಿಂದ ಆ ಯಾತ್ರೆಯನ್ನು ಮತ್ತೆ ಜನರ ನೆನಪಿನಲ್ಲಿರಿಸಲು ಕಾಂಗ್ರೆಸ್ ಯತ್ನಿಸುತ್ತಿದೆ.
ದೇಶದಲ್ಲಿ ಜನಾಂಗೀಯ ಹಿಂಸಾಚಾರ ನಡೆದ ಮಣಿಪುರದ ರಾಜಧಾನಿ ಇಂಫಾಲ್‌ನಿಂದ ಜನವರಿ 14ರ ಮಧ್ಯಾಹ್ನ 12 ಗಂಟೆಗೆ ಭಾರತ ಜೋಡೋ ನ್ಯಾಯ ಯಾತ್ರೆ ಪ್ರಾರಂಭವಾಗಲಿದೆ. ರಾಹುಲ್ ಗಾಂಧಿ 66 ದಿನಗಳ ಯಾತ್ರೆಯಲ್ಲಿ ನಿತ್ಯ 2 ಬಾರಿ ಮೆರವಣಿಗೆ ಉದ್ದೇಶಿಸಿ ಮಾತನಾಡಲಿದ್ದಾರೆ. ಅರುಣಾಚಲ ಪ್ರದೇಶವನ್ನು ಮನಸ್ಸಿನಲ್ಲಿಟ್ಟುಕೊಂಡು ಒಟ್ಟು 15 ರಾಜ್ಯಗಳ ಮೂಲಕ ಯಾತ್ರೆ ಸಾಗಲಿದೆ. ಮಣಿಪುರದಿಂದ ಈ ಯಾತ್ರೆಯು 14 ರಾಜ್ಯಗಳ ಒಟ್ಟು 85 ಜಿಲ್ಲೆಗಳಲ್ಲಿ 6,700 ಕಿ.ಮೀ. ಕ್ರಮಿಸಲಿದೆ.
ಮಣಿಪುರದಿಂದ ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸಗಢ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ನಲ್ಲಿ ಸಾಗಿ ಕೊನೆಯದಾಗಿ ಮಹಾರಾಷ್ಟ್ರ ತಲುಪಲಿದೆ. ಯಾತ್ರೆಯ ಬಹುಭಾಗ ಬಸ್‌ನಲ್ಲೇ ಸಾಗಲಿದ್ದು, ಆಯ್ದ ಸ್ಥಳಗಳಲ್ಲಿ ಪಾದಯಾತ್ರೆ ನಡೆಯಲಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.