ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ತಮ್ಮ ಸೌಂದರ್ಯದ ರಹಸ್ಯ, ಮದುವೆ, ತಮ್ಮ ಕಾಲೇಜು ಕ್ರಷ್ ಬಗ್ಗೆ ಏನೆಲ್ಲಾ ಹೇಳಿದ್ದಾರೆ ನೋಡಿ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳನ್ನು ಭೇಟಿಯಾಗಿ ತಮ್ಮ ಕಾಲೇಜು ಪ್ರೀತಿ, ಮದುವೆ ಮತ್ತು ನೆಚ್ಚಿನ ಪ್ರಯಾಣ ತಾಣದ ಬಗ್ಗೆ ಮೋಜಿನ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಂಭಾಷಣೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂಭಾಷಣೆ ಬಗ್ಗೆ ಮೆಚ್ಚುಗೆಯ ಮಾತುಗಳೂ ಕೇಳಿಬರುತ್ತಿವೆ. ಮೊದಲಿಗೆ ಅವರ ಸೌಂದರ್ಯದ ಬಗ್ಗೆ ಪ್ರಶ್ನಿಸಲಾಯಿತು. ಅದಕ್ಕೆ ರಾಹುಲ್ ಗಾಂಧಿ ಅವರು, ನಾನು ಸೋಪನ್ನು ಎಂದಿಗೂ ಬಳಸುವುದಿಲ್ಲ. ಯಾವುದೇ ಕ್ರೀಂ ಹಚ್ಚುವುದಿಲ್ಲ. ಸದಾ ನೀರಿನಿಂದ ಮುಖ ತೊಳೆದುಕೊಳ್ಳುತ್ತಿರುತ್ತೇನೆ ಎಂದರು.
ತಮ್ಮ ಕಾಲೇಜಿನ ಕ್ರಷ್ ಯಾರು? ಮದುವೆ ಬಗ್ಗೆ ಹೇಳಿದ್ದೇನು?
ರಾಹುಲ್ ಗಾಂಧಿ ಅವರಿಗೆ ವಿದ್ಯಾರ್ಥಿಯೊಬ್ಬ ನಿಮ್ಮ ಕಾಲೇಜಿನ ಕ್ರಷ್ ಯಾರು ಎಂದು ಪ್ರಶ್ನಿಸಿದಾಗ ಮುಗುಳ್ನಕ್ಕ ಕಾಂಗ್ರೆಸ್ ನಾಯಕ, ಏನನ್ನೋ ಹೇಳಲು ಹೋಗಿ ಬೇಡ ಎಂದು ಅದರಿಂದ ನುಣುಚಿಕೊಂಡರು. ಕೊನೆಗೆ ಮದುವೆಯ ಬಗ್ಗೆ ಪ್ರಶ್ನೆ ಕೇಳೀದಾಗ, ನಾನು ಪಕ್ಷದ ರಾಜಕೀಯ ಬದ್ಧತೆಗಳಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದೇನೆ. ಇದೇ ಮದುವೆಯಾಗದಿರಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಅಲ್ಲಿಗೆ ರಾಹುಲ್ ಗಾಂಧಿ ಅವರಿಗೆ ಮದುವೆಯಾಗಿದೆ, ಮಕ್ಕಳಿದ್ದಾರೆ. ಅದಕ್ಕಾಗಿಯೇ ಅವರು ವಿದೇಶಕ್ಕೆ ಆಗಾಗ್ಗೆ ಹೋಗಿ ಬರುತ್ತಿರುತ್ತಾರೆ ಎನ್ನುವ ಬಗೆಗಿನ ವಿವಾದಕ್ಕೆ ಈ ಉತ್ತರ ಮೂಲಕ ರಾಹುಲ್ ತೆರೆ ಎಳೆದಿದ್ದಾರೆ.
ಇಷ್ಟದ ಸ್ಥಳ- ಆಹಾರ
ಆ ಬಳಿಕ ನಿಮಗೆ ಇಷ್ಟದ ಸ್ಥಳ ಯಾವುದು ಎಂದು ಕೇಳಿದಾಗ, ನಾನು ಇಲ್ಲಿಯವರೆಗೆ ಯಾವ ಸ್ಥಳಗಳಿಗೆ ಭೇಟಿ ಕೊಟ್ಟಿಲ್ಲ ಎಲ್ಲ ಸ್ಥಳಗಳೂ ನನಗೆ ಇಷ್ಟ. ಹೊಸ ಸ್ಥಳಗಳನ್ನು ಅನ್ವೇಷಿಸುವುದನ್ನು ನಾನು ಆನಂದಿಸುತ್ತೇನೆ ಎಂದಿದ್ದಾರೆ. ಅದೇ ರೀತಿ ಆಹಾರದ ಬಗ್ಗೆ ಕೇಳಿದ ಪ್ರಶ್ನೆಗೆ ನನಗೆ ಎಲ್ಲಾ ರೀತಿಯ ಆಹಾರಗಳೂ ಇಷ್ಟ. ಹಾಗಲಕಾಯಿ, ಬಟಾಣಿ ಮತ್ತು ಪಾಲಕ್ ಅನ್ನು ಇಷ್ಟಪಡುವುದಿಲ್ಲ. ಅದನ್ನು ಹೊರತುಪಡಿಸಿ ಎಲ್ಲ ರೀತಿಯ ಆಹಾರ ತಿನ್ನುತ್ತೇನೆ ಎಂದಿದ್ದಾರೆ.
ಖತಮ್, ಟಾಟಾ, ಬೈ-ಬೈ
ನಂತರ ಒಬ್ಬ ವಿದ್ಯಾರ್ಥಿನಿ ರಾಹುಲ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲಿಂಗ್ ಮಾಡುವ ಬಗ್ಗೆ ಅಥವಾ ಇಂಟರ್ನೆಟ್‌ನಲ್ಲಿ ವೈರಲ್ ಆಗಿರುವ ಮೀಮ್‌ಗಳ ಬಗ್ಗೆ ಕೇಳಿದಾಗ ಸಂಭಾಷಣೆ ಇನ್ನಷ್ಟು ಆಸಕ್ತಿದಾಯಕವಾಯಿತು. ರಾಹುಲ್ ಅವರ ಪ್ರಸಿದ್ಧ ಮೀಮ್‌ಗಳಲ್ಲಿ ಒಂದಾದ "ಖತಮ್, ಟಾಟಾ, ಬೈ-ಬೈ" ಸಕತ್ ವೈರಲ್ ಆಗ್ತಿದೆಯಲ್ಲಾ ಎಂದು ಪ್ರಶ್ನಿಸಿದಾಗ ಅದಕ್ಕೆ ಖುಷಿಯಿಂದ ನಕ್ಕ ರಾಹುಲ್ ಗಾಂಧಿ, ಕೆಲವೊಮ್ಮೆ ಅದನ್ನು ಹೇಳಬೇಕಾಗುತ್ತದೆ ಎಂದು ಅಲ್ಲಿಯೇ ತಮ್ಮ ಆದ ವಿಶಿಷ್ಟ ಶೈಲಿಯಲ್ಲಿ ಮತ್ತೊಮ್ಮೆ ಅದನ್ನು ಹೇಳಿದರು.


