Asianet Suvarna News Asianet Suvarna News

ಇಸ್ಲಾಂ ಮೂಲಭೂತವಾದದ ಪ್ರಚಾರಕ ಜಾಕೀರ್‌ ನಾಯ್ಕ್‌ ಓಮನ್‌ನಿಂದ ಗಡಿಪಾರು?

ಮೂಲಭೂತವಾದವನ್ನು ತನ್ನ ಬೋಧನೆಗಳ ಮೂಲಕ ತುಂಬುತ್ತಿದ್ದ ಜಾಕೀರ್‌ ನಾಯ್ಕ್‌ 2017 ರಿಂದ ಮಲೇಷ್ಯಾದಲ್ಲಿ ವಾಸ ಮಾಡುತ್ತಿದ್ದಾನೆ. ರಂಜಾನ್ ಸಮಯದಲ್ಲಿ ಮಾರ್ಚ್ 23 ಮತ್ತು ಮಾರ್ಚ್ 25 ರಂದು ರಾಜಧಾನಿ ಮಸ್ಕತ್‌ನಲ್ಲಿ ಎರಡು ಧಾರ್ಮಿಕ ಉಪನ್ಯಾಸಗಳನ್ನು ನೀಡಲು ಓಮನ್ ಸರ್ಕಾರ ಇತ್ತೀಚೆಗೆ ನಾಯಕ್ ಅವರನ್ನು ಆಹ್ವಾನಿಸಿತ್ತು.
 

radical Islamist preacher Zakir Naik  Zakir Naik likely to be deported from Oman san
Author
First Published Mar 21, 2023, 5:31 PM IST

ನವದೆಹಲಿ (ಮಾ.21): ಭಾರತದಿಂದ ಪರಾರಿಯಾಗಿರುವ ಮೂಲಭೂತವಾದವನ್ನು ತುಂಬುತ್ತಿದ್ದ ಇಸ್ಲಾಂಮಿಸ್ಟ್‌ ಬೋಧಕ ಜಾಕೀರ್‌ ನಾಯ್ಕ್‌, ಓಮಾನ್‌ ದೇಶದಿಂದ ಗಡಿಪಾರು ಆಗುವ ಸಾಧ್ಯತೆ ದಟ್ಟವಾಗಿದೆ. ಮಾರ್ಚ್ 23 ರಂದು ಒಮಾನ್‌ಗೆ ಭೇಟಿ ನೀಡಿದಾಗ ಜಾಕೀರ್‌ ನಾಯ್ಕ್‌ನನ್ನು ಬಂಧಿಸಲು ಭಾರತೀಯ ಗುಪ್ತಚರ ಸಂಸ್ಥೆಗಳು ಓಮನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿವೆ. ಭಾರತೀಯ ಮೂಲದ ಇಸ್ಲಾಮಿಕ್‌ ಬೋಧಕನಾಗಿರುವ ಜಾಕೀರ್‌, 2017ರಿಂದ ಮಲೇಷ್ಯಾದಲ್ಲಿ ವಾಸ ಮಾಡುತ್ತಿದ್ದಾನೆ. ಇತ್ತೀಚೆಗೆ ಓಮಾನ್‌ ಸರ್ಕಾರ ರಂಜಾನ್‌ ಪ್ರಯುಕ್ತ ಮಾರ್ಚ್‌ 23 ಹಾಗೂ 25 ರಂದು ರಾಜಧಾನಿ ಮಸ್ಕತ್‌ನಲ್ಲಿ ಧಾರ್ಮಿಕ ಭಾಷಣ ನೀಡಲು ಆತನನ್ನು ಆಹ್ವಾನ ಮಾಡಿತ್ತು. ವರದಿಯ ಪ್ರಕಾರ, ಸ್ಥಳೀಯ ಭಾರತೀಯ ರಾಯಭಾರ ಕಚೇರಿಯು ಆತನನ್ನು ಬಂಧಿಸಲು ಮತ್ತು ಅಂತಿಮವಾಗಿ ಭಾರತಕ್ಕೆ ಗಡೀಪಾರು ಮಾಡಲು ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದೆ. ಬಂಧನದ ನಂತರ ಮುಂದಿನ ಕ್ರಮಕ್ಕಾಗಿ ಭಾರತ ಕಾನೂನು ತಂಡವನ್ನು ಕಳುಹಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ, ಈ ವಿಷಯವನ್ನು ಸ್ವತಃ ವಿದೇಶಾಂಗ ಇಲಾಖೆಗಳ ಅಧಿಕಾರಿಗಳು ಓಮನ್‌ ರಾಯಭಾರಿಗೆ ತಲುಪಿಸಿದ್ದಾರೆ..

57 ವರ್ಷದ ಜಾಕೀರ್‌ ನಾಯ್ಕ್‌ 2016ರಿಂದಲೂ ಭಾರತದ ತನಿಖಾ ತಂಡಕ್ಕೆ ಬೇಕಾದ ವ್ಯಕ್ತಿಯಾಗಿದ್ದಾನೆ. ಆತನ ಇಸ್ಲಾಮಿನ್‌ ರಿಸರ್ಚ್‌ ಫೌಂಡೇಷನ್‌ಅನ್ನು (ಐಆರ್‌ಎಫ್‌) ಅನ್ನು ಅದೇ ವರ್ಷ ನಿಷೇಧ ಹೇರಲಾಗಿತ್ತು. ಅದಲ್ಲದೆ, ಆತನ ವಿರುದ್ಧ ಎಫ್‌ಐಆರ್‌ ಕೂಡ ದಾಖಲಿಸಲಾಗಿತ್ತು. ಭಾರತ ಮತ್ತು ವಿದೇಶಗಳಲ್ಲಿನ ಮುಸ್ಲಿಂ ಯುವಕರನ್ನು ಭಯೋತ್ಪಾದಕರನ್ನಾಗಿ ಮಾಡಿ, ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಪ್ರಚೋದನೆ ನೀಡಿದ ಆರೋಪ ಅವರ ಮೇಲಿದೆ.

2019ರಲ್ಲಿ ಈತನಿಗೆ ಮಲೇಷ್ಯಾದಲ್ಲಿಯೂ ಸಾರ್ವಜನಿಕವಾಗಿ ಭಾಷಣಗಳನ್ನು ಮಾಡಲು ನಿಷೇಧ ಹೇರಲಾಗಿತ್ತು. ಈತ ನಿರ್ವಹಿಸುತ್ತಿದ್ದ ಪೀಸ್‌ ಟಿವಿ ನೆಟ್‌ವರ್ಕ್‌ಅನ್ನು ಭಾರತ ಮಾತ್ರವಲ್ಲದೆ, ಬಾಂಗ್ಲಾದೇಶ, ಕೆನಡಾ, ಶ್ರೀಲಂಕಾ ಮತ್ತು ಇಂಗ್ಲೆಂಡ್‌ನಲ್ಲೂ ನಿಷೇಧಿಸಲಾಗಿತ್ತು

ನೂಪುರ್ ಶರ್ಮಾ ಬಳಿ ಕ್ಷಮೆ ಕೇಳುವ ಮಂದಿ ಝಾಕಿರ್ ಬಳಿ ಯಾಕೆ ಕೇಳಿಲ್ಲ? ಬಿಜೆಪಿ ನಾಯಕಿ ಬೆಂಬಲಕ್ಕೆ ಠಾಕ್ರೆ!

2022 ರ ಮಂಗಳೂರು ಆಟೋ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಅವರು ಜಾಕಿರ್‌ ನಾಯ್ಕ್‌ ಅವರ ವೀಡಿಯೊಗಳಿಂದ ಪ್ರಭಾವಿತನಾಗಿದ್ದಾಗಿ ತಿಳಿಸಿದ್ದ ಮತ್ತು ಇತರ ಸಹ ಆರೋಪಿಗಳೊಂದಿಗೆ ಈತನ ಭಾಷಣಗಳನ್ನು ಹಂಚಿಕೊಂಡಿದ್ದಾಗಿ ತಿಳಿಸಿದ್ದಾರೆ.

'ಯೋಗ್ಯ' ಸೊಸೆಯ ಹುಡುಕಾಟದಲ್ಲಿ ಜಾಕಿರ್ ನಾಯ್ಕ್: ಇಂತಹ ಹುಡುಗಿ ಸಿಗಲ್ಲ ಎಂದ ನೆಟ್ಟಿಗರು!

ರಾಜ್ಯದ ಪೊಲೀಸ್‌ ಅಧಿಕಾರಿಗಳು ಶಾರಿಕ್‌ನ ಫೋನ್‌ಗಳನ್ನು ವಶಪಡಿಸಿಕೊಂಡಿದ್ದರು. ಇದರಲ್ಲಿ ಜಾಕಿರ್‌ ನಾಯ್ಕ್‌ ಅವರ ವಿಡಿಯೋಗಳನ್ನು ಹ್ಯಾಂಡ್ಲರ್‌ಗಳು ಟೆಲಿಗ್ರಾಮ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಾದ ಸಿಗ್ನಲ್, ವೈರ್, ಇನ್‌ಸ್ಟಾಗ್ರಾಮ್ ಮತ್ತು ಎಲಿಮೆಂಟ್ ಮೂಲಕ ಹಂಚಿಕೊಂಡಿದ್ದಾರೆ.

Follow Us:
Download App:
  • android
  • ios