* ಕಳೆದ ತಿಂಗಳು ಹರ್ಯಾಣದಲ್ಲಿ ನಡೆದ ಪೊಲೀಸ್ ಮತ್ತು ರೈತರ ನಡುವೆ ನಡೆದ ಸಂಘರ್ಷ* ಕರ್ನಾಲ್ ಡೀಸಿಗೆ ಕಡ್ಡಾಯ ರಜೆ: ರೈತ ಪ್ರತಿಭಟನೆ ಅಂತ್ಯ
ಕರ್ನಾಲ್(ಸೆ.12): ಕಳೆದ ತಿಂಗಳು ಹರ್ಯಾಣದಲ್ಲಿ ನಡೆದ ಪೊಲೀಸ್ ಮತ್ತು ರೈತರ ನಡುವೆ ನಡೆದ ಸಂಘರ್ಷವನ್ನು ನ್ಯಾಯಾಂಗ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ. ಜೊತೆಗೆ ರೈತರ ಮೇಲೆ ಲಾಠಿಚಾರ್ಜ್‌ಗೆ ಆದೇಶಿಸಿದ್ದ ಐಎಎಸ್ ಅಧಿಕಾರಿಯನ್ನು ರಜೆಯ ಮೇಲೆ ಕಳುಹಿಸಲಾಗಿದೆ. ಹಾಗಾಗಿ ಕರ್ನಾಲ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ.
ಜಿಲ್ಲಾಧಿಕಾರಿ ಆಯುಷ್ ಸಿನ್ಹಾ ರೈತರ ಮೇಲೆ ಲಾಠಿ ಪ್ರಹಾರ ನಡೆಸುವಂತೆ ಪೊಲೀಸರಿಗೆ ಆದೇಶ ನೀಡಿದ್ದರು. ಅವರನ್ನು ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ರೈತರು ಕರ್ನಾಲ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
ಪ್ರತಿಭಟನೆಗೆ ಸರ್ಕಾರ ಮಣಿದಿದ್ದು, ‘ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಈ ತನಿಖೆ ನಡೆಯಲಿದೆ. ಒಂದು ತಿಂಗಳಲ್ಲಿ ತನಿಖೆ ಪೂರ್ಣಗೊಳ್ಳಲಿದೆ ಅಲ್ಲಿಯವರೆಗೆ ಸಿನ್ಹಾ ರಜೆಯಲ್ಲಿ ಇರಲಿದ್ದಾರೆ’ ಎಂದು ಹರ್ಯಾಣ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇವೇಂದ್ರ ಸಿಂಗ್ ಹೇಳಿದ್ದಾರೆ. ನಂತರ ರೈತ ನಾಯಕ ಗುರ್‌ನಾಮ್ ಸಿಂಗ್ ಚೌದಾನಿ ಪ್ರತಿಭಟನೆ ಅಂತ್ಯಗೊಳಿಸುತ್ತದ್ದೇವೆ ಎಂದು ಹೇಳಿದ್ದಾರೆ.
