ಜಗನ್ನಾಥ ದೇಗುಲದ ಭೂ ಆಸ್ತಿ ಪುರಿ ನಗರಕ್ಕಿಂತ 15 ಪಟ್ಟು ಹೆಚ್ಚು!

ದೇಶದ ಅತೀ ಶ್ರೀಮಂತ ದೇಗುಲಗಳಲ್ಲಿ ಪುರಿ ಜಗನ್ನಾಥವೂ ಒಂದು | ಈ ದೇಗುಲದ ಆಸ್ತಿ ಮೌಲ್ಯ ಪುರಿ ಪಟ್ಟಣಕ್ಕಿಂತ 15 ಪಟ್ಟು ಹೆಚ್ಚು | ದೇಗುಲದ ಸುಪರ್ದಿಯಲ್ಲಿ ಹಲವು ಕ್ವಾರಿ ಹಾಗೂ ಗಣಿಗಾರಿಕೆಗಳಿವೆ

puri Jagannath temple owns land 15 times Puri city area

ನವದೆಹಲಿ (ನ. 09): ದೇಶದ ಅತೀ ಶ್ರೀಮಂತ ದೇಗುಲಗಳಲ್ಲಿ ಒಂದಾದ ತಿರುವನಂತಪುರಂನ ಪದ್ಮನಾಭಸ್ವಾಮಿ ದೇಗು ಲದ ನೆಲ ಮಾಳಿಗೆಯಲ್ಲಿ ರುವ ಸಂಪತ್ತನ್ನು ಪತ್ತೆ ಹಚ್ಚಬೇಕೆಂದು 2011 ರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಈಗ ಪುರಿಯ ಜಗನ್ನಾಥ ದೇಗುಲದ ಬಗ್ಗೆಯೂ ಇಂಥಹದ್ದೊಂದು ಆದೇಶ ನೀಡಿದೆ.

ಅಯೋಧ್ಯೆ ತೀರ್ಪು: ವಿವಾದ ಇರುವುದೇ 2.77 ಎಕರೆ ಭೂಮಿಗಾಗಿ!

ಒಡಿಶಾದ ಒಳಗೂ ಹೊರಗೂ ಪುರಿ ಜಗನ್ನಾಥ ದೇಗುಲಕ್ಕೆ ಸುಮಾ ರು 60,418 ಎಕರೆ ಅಂದರೆ 244.5 ಚದರ ಕಿ.ಮೀ ಭೂಮಿ ಇದ್ದು, ಇದು ಪುರಿ ಪಟ್ಟಣಕ್ಕಿಂತ 15 ಪಟ್ಟು ಹೆಚ್ಚು. ದೇಗುಲದ ಸುಪರ್ದಿಯಲ್ಲಿ ಹಲವು ಕ್ವಾರಿ ಹಾಗೂ ಗಣಿ ಗಾರಿಕೆಗಳಿದ್ದು, ಲೈಸೆನ್ಸ್ ಪಡೆದವರು ದೇಗುಲಕ್ಕೆ ಹಣ ಪಾವತಿ ಮಾಡುತ್ತಿಲ್ಲ ಎನ್ನುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಹಾಗಾಗಿ ಉಳಿದ ಭೂ ಆಸ್ತಿಗಳ ದಾಖಲೆಗಳನ್ನು ಸಲ್ಲಿಕೆ ಮಾಡಿ ಎಂದು ಸುಪ್ರೀಂ ಹೇಳಿದೆ.

ನ್ಯಾ. ಅರುಣ್ ಮಿಶ್ರಾ, ನ್ಯಾ. ಎಂಆರ್ ಶಾ ಹಾಗೂ ನ್ಯಾ.ರವೀಂದ್ರ ಭಟ್ ಅವರಿದ್ದ ಪೀಠ ನಿರ್ದೇಶನ ನೀಡಿದ್ದು, ಆರು ತಿಂಗಳೊಳಗೆ ರಾಜ್ಯದ ಒಳಗೂ ಹೊರಗೂ ಇರುವ ದೇಗುಲದ ಭೂಮಿಗಳ ಬಗ್ಗೆ ದಾಖಲೆಗಳನ್ನು ಸಲ್ಲಿಸ ಬೇಕು. ಅಲ್ಲದೇ ಅವುಗಳ ಬಳಕೆ ಹಾಗೂ ಅದರಿಂದ ಬರುವ ಆದಾಯ, ಬರಬೇಕಿರುವ ಆದಾಯದ ಬಗ್ಗೆಯೂ ಮಾಹಿತಿ ನೀಡಬೇಕು. 

Latest Videos
Follow Us:
Download App:
  • android
  • ios