Asianet Suvarna News Asianet Suvarna News

ದೆಹಲಿ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಕರ್ಮಕಾಂಡ, ಅಧಿಕಾರಿಗಳ ಸೆಕ್ಸ್ ಬಯಕೆ ಬಯಲು!

ದೆಹಲಿಯಲ್ಲಿ ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಗಳ ಕರ್ಮಕಾಂಡ ಬಯಲಾಗಿದೆ. ಸೂಟು ಬೂಟು ಹಾಕಿ ಎಸಿ ಕಚೇರಿಯಲ್ಲಿ ಕುಳಿತರೂ ಪಾಕಿಸ್ತಾನದ ಬುದ್ದಿ ಮಾತ್ರ ಬಿಟ್ಟಿಲ್ಲ ಅನ್ನೋ ಟೀಕೆಯೂ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.  ರಾಯಭಾರ ಕಚೇರಿಗೆ ತೆರಳುವ ಮಹಿಳೆಯರನ್ನು ಸೆಕ್ಸ್‌ಗೆ ಒತ್ತಾಯಿಸುವ ಕೆಲ ಘಟನೆ ಬಹಿರಂಗವಾಗಿದೆ.

Punjab woman professor accuse Pakistan High Commission staff for Asked sexual desires during her visit ckm
Author
First Published Jan 12, 2023, 8:26 PM IST

ನವದೆಹಲಿ(ಜ.12): ಪಾಕಿಸ್ತಾನದಲ್ಲಿನ ಪರಿಸ್ಥಿತಿ ವರ್ಷದ ಬಹುತೇಕ ದಿನ ನೆಟ್ಟಗಿರಲಿಲ್ಲ. ಪಾಕಿಸ್ತಾನ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮಾತ್ರವಲ್ಲ ಸೆಕ್ಸ್ ಕರ್ಮಕಾಂಡಗಳು ಸಾಕಷ್ಟು ನಡೆಯುತ್ತವೆ ಅನ್ನೋದು ಈಗಾಗಲೇ ಬಹಿರಂಗವಾಗಿದೆ. ಇದೀಗ ಭಾರತದ ರಾಜಧಾನಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿರುವ ಅಧಿಕಾರಿಗಳು  ಸೆಕ್ಸ್‌ಗೆ ಒತ್ತಾಯ ಮಾಡಿದ ಘಟನೆಯೊಂದು ಬಹಿರಂಗವಾಗಿದೆ. ಪಂಜಾಬ್‌ನ ಉಪನ್ಯಾಸಕಿ ವೀಸಾ ಸಂಬಂಧಿಸಿ ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಗೆ ತೆರಳಿದ್ದರು. ಆ ವೇಳೆ ಪಾಕಿಸ್ತಾನ ಅಧಿಕಾರಿಗಳು ಸೆಕ್ಸ್‌ಗೆ ಒತ್ತಾಯಿಸಿದ ಘಟನೆ ನಡೆದಿದೆ. ಈ ಕುರಿತು ಉಪನ್ಯಾಸಕಿ ಬಹಿರಂಗಪಡಿಸಿದ್ದಾರೆ.

ಲೋಹಾರ್ ವಿಶ್ವವಿದ್ಯಾಲಯದಲ್ಲಿನ ಉಪನ್ಯಾಸ ಕಾರ್ಯಕ್ರಮಕ್ಕೆ ಪಂಜಾಬ್‌ನ ಉಪನ್ಯಾಸಕಿಯನ್ನು 2021ರಲ್ಲಿ ಆಹ್ವಾನಿಸಲಾಗಿತ್ತು. ಇದಕ್ಕಾಗಿ ಪಂಜಾಬ್ ಉಪನ್ಯಾಸಕಿ ವೀಸಾ ಪಡೆಯಲು ದೆಹಲಿಯಲ್ಲಿರುವ ಪಾಕ್ ರಾಯಭಾರ ಕಚೇರಿಗೆ ಆಗಮಿಸಿದ್ದಾರೆ. ಆನ್‌ಲೈನ್ ಮೂಲಕ ವೀಸಾ ಅಪಾಯಿಂಟ್‌ಮೆಂಟ್ ಪಡೆದ ಉಪನ್ಯಾಸಕಿ, ರಾಯಭಾರ ಕಚೇರಿಗೆ ತೆರಳಿದರೆ ಅಲ್ಲಿ ಅಧಿಕಾರಿಗಳ ವರ್ತನೆಗೆ ಬೇಸತ್ತಿದ್ದಾರೆ. 

ಪಾಕ್‌ನಲ್ಲಿ 1 ಕೆಜಿಗೆ ಗೋಧಿಹಿಟ್ಟಿಗೆ 1500 ರುಪಾಯಿ: ಅಗ್ಗದ ಗೋಧಿಹಿಟ್ಟು ವಿತರಣೆ ವೇಳೆ ಕಾಲ್ತುಳಿತಕ್ಕೆ ನಾಲ್ವರ ಬಲಿ

ವೀಸಾಗೆ ಅನುಮತಿ ನೀಡುವ ನಡುವೆ ಉಪನ್ಯಾಸಕಿ ಬಳಿಕ ಪಾಕಿಸ್ತಾನ ಅಧಿಕಾರಿಗಳು ವೈಯುಕ್ತಿಕ ಪ್ರಶ್ನೆ ಕೇಳಲು ಆರಂಭಿಸಿದ್ದಾರೆ. ಮದುವೆಯಾಗಿಲ್ಲ ಎಂದು ಅರ್ಜಿಯಲ್ಲಿ ನಮೂದಿಸಿದ್ದೀರಿ. ಹೀಗಾಗಿ ಸೆಕ್ಸ್ ಬಯಕೆ ಹೇಗೆ ಈಡೇರಿಸಿಕೊಳ್ಳುತ್ತೀರಿ? ನಿಮ್ಮ ಒಪ್ಪಿಗೆಯ ಮೇರೆಗೆ ನಾವು ಸಿದ್ಧ ಎಂದು ನೇರವಾಗಿ ಮಹಿಳೆಯಲ್ಲಿ ಸೆಕ್ಸ್ ಬಯಕೆ ಇಟ್ಟಿದ್ದಾರೆ.

ಅಧಿಕಾರಿಗಳ ಮಾತಿನಿಂದ ಬೆಚ್ಚಿ ಬಿದ್ದ ಪಂಜಾಬ್ ಉಪನ್ಯಾಸಕಿ, ವೀಸಾ ಬೇಡ ನಾನು ಮರಳುವುದಾಗಿ ಹೇಳಿದ್ದಾರೆ. ಈ ವೇಳೆ ಬೆದರಿಕೆ ಹಾಕಿ ಸೆಕ್ಸ್‌ಗೆ ಒತ್ತಾಯಿಸಿದ್ದಾರೆ ಎಂದು ಉಪನ್ಯಾಸಕಿ ಇಂಗ್ಲೀಷ್ ಮಾಧ್ಯಮ ಇಂಡಿಯಾ ಟುಡೆಗೆ ನೋವಿನ ಘಟನೆ ವಿವರಿಸಿದ್ದಾರೆ. 

ಈ ಘಟನೆ ಬಳಿಕ ಭಾರತ ಸರ್ಕಾರದ ವಿರುದ್ಧ ಬರೆಯುವಂತೆ ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಗಳು ಆಮಿಷ ಒಡ್ಡಿದ್ದಾರೆ. ಇಷ್ಟೇ ಅಲ್ಲ ಖಲಿಸ್ತಾನ ಹೋರಾಟಕ್ಕೆ ಬೆಂಬಲ ಸೂಚಿಸಲು ಹೇಳಿದ್ದಾರೆ. ಈ ಎರಡು ಕಲಸ ಮಾಡಿದರೆ ಉತ್ತಮ ಸಂಭಾವನೆ ನೀಡುವುದಾಗಿ ಪಾಕಿಸ್ತಾನ ಅಧಿಕಾರಿಗಳು ಹೇಳಿದ್ದರು. ಇದರ ವಿರುದ್ಧ ಕೆರಳಿದ ಉಪನ್ಯಾಸಕಿ ಭಾರತ ವಿದೇಶಾಂಕ ಇಲಾಖೆಗೆ ದೂರು ನೀಡಿದ್ದರು. ಇದೇ ವೇಳೆ ಪಾಕಿಸ್ತಾನ ವಿದೇಶಾಂಗ ಇಲಾಖೆಗೆಗೂ ದೂರು ನೀಡಿದ್ದರು. ಆದರೆ ಪಾಕಿಸ್ತಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇತ್ತ ಭಾರತದ ಈ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿದೆ.

ರಾತ್ರಿ 8 ಗಂಟೆಗೆ ಮಾರುಕಟ್ಟೆ ಮುಚ್ಚೋ ದೇಶದಲ್ಲಿ ಮಕ್ಕಳ ಜನನ ಕಡಿಮೆಯಂತೆ!

ಪಾಕಿಸ್ತಾನ ರಾಯಭಾರ ಕಚೇರಿಗೆ ತೆರಳುವ ಮಹಿಳೆಯರು ಎಚ್ಚರವಹಿಸಬೇಕು ಎಂದು ಉಪನ್ಯಾಸಕಿ ಮನವಿ ಮಾಡಿದ್ದಾರೆ. ಹಲವು ಕಾರಣಗಳನ್ನು ಒಡ್ಡಿ ವೀಸಾ ತಿರಸ್ಕರಿಸುತ್ತಾರೆ. ಬಳಿಕ ಸೆಕ್ಸ್ ಬಯಕೆಗೆ ಬೇಡಿಕೆ ಇಡುತ್ತಾರೆ. ಇದು ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿನ ಅಧಿಕಾರಿಗಳ ವರ್ತನೆ ಎಂದು ಪಂಜಾಬ್ ಉಪನ್ಯಾಸಕಿ ಹೇಳಿದ್ದಾರೆ.

1 ಕೆಜಿಗೆ ಗೋಧಿಹಿಟ್ಟಿಗೆ 1500 ರುಪಾಯಿ!
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳು ಬೆಲೆ ಕೈಸುಡುವ ಮಟ್ಟಕ್ಕೆ ಹೋಗಿದೆ. ಅದರಲ್ಲೂ ಪಾಕಿಸ್ತಾನದ ಬಹುತೇಕ ಜನರ ನಿತ್ಯ ಆಹಾರದ ಮೂಲ ವಸ್ತುವಾದ ಗೋಧಿಹಿಟ್ಟಿನ ಬೆಲೆ 1 ಕೆಜಿಗೆ ಕನಿಷ್ಠ 150 ರು.ನಿಂದ ಗರಿಷ್ಠ 1500 ರು.ವರೆಗೂ ತಲುಪಿದೆ. ವಿದೇಶಿ ವಿನಿಯಯ ಕೊರತೆಯಿಂದಾಗಿ ಪಾಕಿಸ್ತಾನ ವಿದೇಶಗಳಿಂದ ಯಾವುದೇ ಅಗತ್ಯ ವಸ್ತು ಖರೀದಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಆಹಾರ ವಸ್ತುಗಳ ಕೊರತೆ ಎದುರಾಗಿದೆ. 45 ಲಕ್ಷ ಟನ್‌ಗಳಷ್ಟುಗೋಧಿ ಕೊರತೆ ಕಾಣಿಸಿಕೊಂಡಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಗೋಧಿ ಹಿಟ್ಟಿನ ಬೆಲೆ 150 ರು., 500 ರು.ವರೆಗೂ ತಲುಪಿದೆ. ಅದರಲ್ಲೂ ಸಿಂಧ್‌ ಪ್ರಾಂತ್ಯದಲ್ಲಿ ಗೋಧಿ ಹಿಟ್ಟಿನ ಭಾರೀ ಕೊರತೆ ಉಂಟಾಗಿದ್ದು ಕಾಳಸಂತೆಯಲ್ಲಿ 1 ಕೆಜಿ ಗೋಧಿಹಿಟ್ಟು 1500 ರು.ವರೆಗೂ ಮಾರಾಟವಾಗುತ್ತಿದೆ.

Follow Us:
Download App:
  • android
  • ios