* ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಸಿಎಂ ಡ್ಯಾನ್ಸ್* ಪಂಜಾಬ್ ಹೊಸ ಸಿಎಂ ಭಾಂಗ್ರಾ ನೃತ್ಯಕ್ಕೆ ಸೋಶಿಯಲ್ ಮೀಡಿಯಾ ಫಿದಾ* ಕ್ಯಾಪ್ಟನ್ ಜಾಗಕ್ಕೆ ಆಯ್ಕೆಯಾಗಿದ್ದ ಚರಣ್‌ಜೀತ್ ಸಿಂಗ್ ಚನ್ನಿ 

ಅಮೃತಸರ(ಸೆ. 23) ಪಂಜಾಬ್ ಹೊಸ ಸಿಎಂ ಚರಣ್‌ಜೀತ್ ಸಿಂಗ್ ಚನ್ನಿ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಸಿಂಗ್ ಅವರ ನೃತ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಭಾಂಗ್ರಾ ಸ್ಟೆಪ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಪುರ್ಥಾಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ತಮ್ಮ ಕಲಾ ಪ್ರದರ್ಶನ ಮಾಡಿದ್ದಾರೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ನಂತರ ಚರಣ್‌ಜೀತ್ ಸಿಂಗ್ ನೂತನ ಸಿಎಂ ಆಗಿ ಆಯ್ಕೆಯಾಗಿದ್ದರು. ಚಾಮ್ಕುರ್ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುವ ಸಿಂಗ್ ಕ್ಯಾಪ್ಟನ್ ವಿರುದ್ಧ ಬಂಡಾಯ ಎದ್ದಿದ್ದರು. 

ಕಾರು ಬಂದು ಅಪ್ಪಳಿಸಿದ ಜಾಗದಲ್ಲೇ ಯುವಕ-ಯುವತಿಯರ ಡ್ಯಾನ್ಸ್

ಮೊದಲ ದಲಿತ ಸಿಖ್ ಸಿಎಂ ಎನ್ನುವುದು ಸಿಂಗ್ ಅವರ ವಿಶೇಷ. ಕೆಲ ತಿಂಗಳು ತಮ್ಮ ಪೋಸ್ಟ್ ಎಂಜಾಯ್ ಮಾಡಲಿ ಎಂಬ ಕಮೆಂಟ್ ಗಳು ಬಂದಿವೆ.

58 ವರ್ಷದ ಚರಣಜೀತ್ ಸಿಂಗ್ ಚನ್ನಿಕಳೆದ ಸೋಮವಾರ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅಧಿಕಾರ ವಹಿಸಿಕೊಂಡ ತಕ್ಷಣ, ಸಣ್ಣ ಮನೆಗಳಿಗೆ ಉಚಿತ ನೀರು ಪೂರೈಕೆ, ವಿದ್ಯುತ್ ಬಿಲ್ ಕಡಿತ ಮತ್ತು "ಆಮ್ ಆದ್ಮಿ" ಗೆ ಪಾರದರ್ಶಕ ಸರ್ಕಾರ ಸೇರಿದಂತೆ ಹಲವು ಭರವಸೆಗಳನ್ನು ನೀಡಿದರು . ಚನ್ನಿ ಪಂಜಾಬ್‌ನಲ್ಲಿ 30 ಪ್ರತಿಶತಕ್ಕಿಂತ ಹೆಚ್ಚು ದಲಿತ ಜನಸಂಖ್ಯೆಯನ್ನು ಹೊಂದಿರುವ ಸಮುದಾಯಕ್ಕೆ ಸೇರಿದವರು. 

Scroll to load tweet…