Asianet Suvarna News Asianet Suvarna News

ಅಮರಿಂದರ್ ಆಪ್ತರಿಗೆ ಕೊಕ್, ಚರಣ್‌ಜಿತ್ ಚನಿ ಸಂಪುಟಕ್ಕೆ ಸಿಧು ಬಣದ 15 ಸಚಿವರು!

  • ಪಂಜಾಬ್ ಸಿಎಂ ಚರಣ್‌ಜಿತ್ ಸಂಪುಟಕ್ಕೆ 15 ಸಚಿವರಿಂದ ಪ್ರಮಾಣ ವಚನ
  • ಮಾಜಿ ಸಿಎಂ ಅಮರಿಂದರ್ ಸಿಂಗ್ ಆಪ್ತರಿಗೆ ಕೊಕ್ ನೀಡಿದ ಕಾಂಗ್ರೆಸ್
  • ಸಿಧು ಬಣದ ನಾಯಕರಿಗೆ ಮಂತ್ರಿಗಿರಿ ಭಾಗ್ಯ, ಪಂಜಾಬ್ ಕಾಂಗ್ರೆಸ್‌ನಲ್ಲಿ ಮತ್ತೆ ಗುದ್ದಾಟ
Punjab New CM Charanjit Singh Channi expanded his cabinet by inducting 15 ministers ckm
Author
Bengaluru, First Published Sep 26, 2021, 6:55 PM IST
  • Facebook
  • Twitter
  • Whatsapp

ಪಂಜಾಬ್(ಸೆ.26): ಪಂಜಾಬ್‌ನ(Punjab) ನೂತನ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್(Charanjit Singh Channi) ಪ್ರಮಾಣ ವಚನ ಸ್ವೀಕರಿಸಿದ ಒಂದು ವಾರದ ಬಳಿಕ ಇದೀಗ 15 ಸಚಿವರು ಸಂಪುಟ ಸೇರಿದ್ದಾರೆ. ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ 15 ಸಚಿವರು ಪ್ರಮಾಣ ವಚನ ಸ್ವೀಕರಿಸಿ ಚರಣ್‌ಜಿತ್ ಚನಿ ಸಂಪುಟ(Cabinet Expansion) ಸೇರಿದ್ದಾರೆ. 

ಸಖತ್‌ ವೈರಲ್ ಆಯ್ತು ಪಂಜಾಬ್  ಹೊಸ ಸಿಎಂ ಭಾಂಗ್ರಾ ಡ್ಯಾನ್ಸ್!

ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರ ಪಟ್ಟಿ:
ಬ್ರಹ್ಮ ಮೊಹಿಂದ್ರಾ
ಮನ್ ಪ್ರೀತ್ ಸಿಂಗ್ ಬಾದಲ್
ಟ್ರಿಪ್ಟ್ ರಾಜೇಂದ್ರ ಸಿಂಗ್ ಬಾಜ್ವಾ
ಸುಖಬಿಂದರ್ ಸಿಂಗ್ ಸರ್ಕಾರಿಯಾ 
ರಾಣಾ ಗುರ್ಜಿತ್ ಸಿಂಗ್
ಅರುಣ ಚೌದರಿ 
ರಜಿಯಾ ಸುಲ್ತಾನ
ವಿಜಯ್ ಇಂದರ್ ಸಿಂಗ್ಲಾ
ಭರತ್ ಭೂಷಣ್ ಅಶು
ರಣದೀಪ್ ಸಿಂಗ್ ನಭಾ
ರಾಜ್ ಕುಮಾರ್ ವರ್ಕಾ
ಸಂಗತ್ ಸಿಂಗ್ ಗಿಲ್ಜಿಯಾನ್
ಪರ್ಗತ್ ಸಿಂಗ್
ಅಮರಿಂದರ್ ಸಿಂಗ್ ರಾಜಾ ವಾರ್ರಿಂಗ್
ಗುಕ್ರೀರತ್ ಸಿಂಗ್ ಕೊಟ್ಲಿ

ಪಂಜಾಬ್ ಕಾಂಗ್ರೆಸ್(Punjab Congress) ಅಧ್ಯಕ್ಷ ನವಜೋತ್ ಸಿಂಗ್ ಸಿಧು(Navjot singh sidhu) ಬಣದ 15 ಸಚಿವರಿಗೆ ಸ್ಥಾನ ನೀಡಲಾಗಿದೆ. ಆದರೆ ಮಾಜಿ ಸಿಎಂ ಅಮರಿಂದರ್ ಸಿಂಗ್(Amrinder Singh) ಐವರು ಆಪ್ತರಿಗೆ ಕೊಕ್ ನೀಡಲಾಗಿದೆ. ಈ ಮೂಲಕ ಮತ್ತೊಂದು ಗುದ್ದಾಟಕ್ಕೆ ವೇದಿಕೆ ಸಿದ್ಧವಾಗಿದೆ.

ಅಂತೂ ಕಣ್ಣುಬಿಟ್ಟಿತು ಕೈ ಹೈಕಮಾಂಡ್‌: ವರ್ಷಗಳ ಬಳಿಕ ಪ್ರಿಯಾಂಕಾ, ರಾಹುಲ್ ರಣತಂತ್ರ!

ಪರ್ಗತ್ ಸಿಂಗ್, ರಾಜ್ ಕುಮಾರ್ ವರ್ಕಾ, ಗುರ್ಕೀರತ್ ಸಿಂಗ್ ಕೊಟ್ಲಿ, ಸಂಗತ್ ಸಿಂಗ್ ಗಿಲ್ಜಿಯಾನ್, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ರಣದೀಪ್ ಸಿಂಗ್ ನಭಾ ಮತ್ತು ರಾಣಾ ಗುರ್ಜಿತ್ ಸಿಂಗ್ ಇದೇ ಮೊದಲ ಬಾರಿಗೆ ಸಚಿವರಾಗಿ ಭಡ್ತಿ ಪಡೆದಿದ್ದಾರೆ. 

ಸಿಧು, ಹೈಕಮಾಂಡ್‌ ವಿರುದ್ಧ ಮತ್ತೆ ಸಿಡಿದೆದ್ದ ಅಮರೀಂದರ್‌ ಸಿಂಗ್‌: ಬಿಗ್ ಚಾಲೆಂಜ್!

ಅಮರಿಂದರ್ ಸಿಂಗ್ ಸರ್ಕಾರದ ಸಚಿವರಾಗಿದ್ದ ಇಜಯ್ ಇಂದರ್ ಸಿಂಗ್ಲಾ, ಮನ್ ಪ್ರೀತ್ ಸಿಂಗ್ ಬಾದಲ್, ಬ್ರಹ್ಮ ಮೊಹಿಂದ್ರಾ, ಸುಖಬಿಂದರ್ ಸಿಂಗ್ ಸರ್ಕಾರಿಯಾ, ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ, ಅರುಣ ಚೌಧರಿ, ರಜಿಯಾ ಸುಲ್ತಾನ ಮತ್ತು ಭರತ್ ಭೂಷಣ್ ಅಶು ಅವರನ್ನು ಉಳಿಸಿಕೊಳ್ಳಲಾಗಿದೆ.

 

Follow Us:
Download App:
  • android
  • ios