Asianet Suvarna News Asianet Suvarna News

'ಖಡ್ಗ ಹಿಡಿದು ಯಾರು ಶಾಂತಿಯುತ ಪ್ರತಿಭಟನೆ ಮಾಡ್ತಾರೆ..' ರೈತ ನಾಯಕರಿಗೆ ಚಾಟಿ ಬೀಸಿದ ಪಂಜಾಬ್‌ ಹೈಕೋರ್ಟ್‌!


ಗುರುವಾರದ ವಿಚಾರಣೆ ವೇಳೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳಿಗೆ ಛೀಮಾರಿ ಹಾಕಿದ ಹೈಕೋರ್ಟ್, ಈ ವಿಷಯದಲ್ಲಿ ಎರಡೂ ರಾಜ್ಯಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವಲ್ಲಿ ವಿಫಲವಾಗಿವೆ ಎಂದು ಹೇಳಿದೆ. ರೈತ ಶುಭಕರನ್ ಸಾವಿನ ತನಿಖೆಯನ್ನು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. 
 

Punjab Haryana High Court angry on Sword in Farmer Hand scolded lawyers san
Author
First Published Mar 7, 2024, 3:11 PM IST

ನವದೆಹಲಿ (ಮಾ.7): ಪಂಜಾಬ್ ಮತ್ತು ಹರಿಯಾಣದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಚಂಡೀಗಢದ ಹೈಕೋರ್ಟ್‌ನಲ್ಲಿ ಗುರುವಾರ ವಿಚಾರಣೆ ನಡೆಯಿತು. ಈ ವೇಳೆ ವಕೀಲರಿಗೆ ಹೈಕೋರ್ಟ್ ಛೀಮಾರಿ ಹಾಕಿದರೆ, ಪ್ರತಿಭಟನೆಯ ಚಿತ್ರಗಳನ್ನು ನೋಡಿದ ನ್ಯಾಯಾಧೀಶರು ರೈತರ ಮೇಲೂ ಸಿಟ್ಟಾದರು. ವಿಚಾರಣೆಯ ಸಮಯದಲ್ಲಿ, ಹರ್ಯಾಣ ಸರ್ಕಾರವು ಹೈಕೋರ್ಟ್‌ಗೆ ರೈತ ಪ್ರತಿಭಟನೆಯ ಹಲವು ಫೋಟೋಗಳನ್ನು ನೀಡಿದಾಗ, ರೈತ ನಾಯಕರ ಮೇಲೂ ಆಕ್ರೋಶ ವ್ಯಕ್ತಪಡಿಸಿತು. ಇದೇ ವೇಳೆ ಶುಭಕರನ್‌ ಸಾವಿನ ತನಿಖೆಗೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ಆದೇಶವನ್ನೂ ನೀಡಿದೆ. ರೈತರು ಶಾಂತಿಯುತಯಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ರೈತರ ಪರ ವಕೀಲರು ಹೇಳಿದಾಗ, ಕೈಯಲ್ಲಿ ಖಡ್ಗಗಳನ್ನು ಹಿಡಿದು ಯಾವ ರೈತರು ಶಾಂತಿಯುತವಾಗೊ ಪ್ರತಿಭಟನೆ ಮಾಡಿದ್ದಾರೆ? ಎಂದು ಪ್ರಶ್ನೆ ಮಾಡಿದೆ.

ಈ ವೇಳೆ ಹರಿಯಾಣ ಹಾಗೂ ಪಂಜಾಬ್‌ ಸರ್ಕಾರಗಳನ್ನೂ ತರಾಟೆಗೆ ತೆಗೆದುಕೊಂಡ ಕೋರ್ಟ್‌, ಎರಡೂ ರಾಜ್ಯ ಸರ್ಕಾರಗಳು ಈ ವಿಚಾರದಲ್ಲಿ ತಮ್ಮ ಜವಾಬ್ದಾರಿಯನ್ನು ಮರೆತಂತೆ ವರ್ತನೆ ಮಾಡಿವೆ. ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಈ ಸರ್ಕಾರಗಳು ವಿಫಲವಾಗಿದೆ ಎಂದು ಹೇಳಿದೆ. ಇನ್ನು ಪ್ರತಿಭಟನೆಯ ವೇಳೆ ಸಾವಿಗೀಡಾದ ರೈತ ಶುಭಕರನ್‌ ಸಾವನ್ನು ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದ ಸಮಿತಿ ತನಿಖೆ ಮಾಡಲಿದೆ. ಇದಕ್ಕಾಗಿ 3 ಸದಸ್ಯರ ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಈ ಹಂತದಲ್ಲಿ ಹರಿಯಾಣ ಸರ್ಕಾರ, ರೈತ ಪ್ರತಿಭಟನೆಯಲ್ಲಿ ಭಾಗಿಯಾದ ಕೆಲವು ವ್ಯಕ್ತಿಗಳ ಫೋಟೋಗಳನ್ಜು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ಚಿತ್ರಗಳನ್ನು ನೋಡಿದ ನ್ಯಾಯಾಲಯ ಪ್ರತಿಭಟನಾನಿರತ ರೈತರು ಹಾಗೂ ರೈತ ನಾಯಕರನ್ನೂ ತರಾಟೆಗೆ ತೆಗೆದುಕೊಂಡಿದೆ.

ನಿಮಗೆ ಇಲ್ಲಿ ನಿಲ್ಲೋ ಹಕ್ಕಿಲ್ಲ:  ಫೋಟೊ ನೋಡಿದ ಹೈಕೋರ್ಟ್ ರೈತ ಚಳವಳಿಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಚಿಕ್ಕ ಚಿಕ್ಕ ಮಕ್ಕಳನ್ನು ಮುಂದಿಟ್ಟುಕೊಂಡು ನೀವು ಹೋರಾಟ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ನೀವೆಲ್ಲಾ ಯಾವ ರೀತಿಯ ಪೋಷಕರು ಎನ್ನುವುದೇ ಅರ್ಥವಾಗುತ್ತಿಲ್ಲ. ಮಕ್ಕಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದೀರಲ್ಲ. ನಿಮಗೆ ನಾಚಿಕೆ ಆಗೋದಿಲ್ಲವೇ. ಅದಲ್ಲದೆ, ಆಯುಧಗಳನ್ನು ಹಿಡಿದು ಪ್ರತಿಭಟನೆ ಮಾಡುತ್ತಿರುವ ನಿಮಗೆ ಇಲ್ಲಿ ನಿಲ್ಲುವ ಹಕ್ಕು ಕೂಡ ಇಲ್ಲ. ನೀವೇನು ದೇಶದ ವಿರುದ್ಧ ಯುದ್ಧ ಮಾಡಲು ಹೊರಟಿದ್ದೀರಾ? ಇದು ಪಂಜಾಬ್‌ನ ಸಂಸ್ಕೃತಿಯಲ್ಲ. ನಿಮ್ಮ ನಾಯಕರನ್ನು ಬಂಧಿಸಿ ಮೊದಲು ಚೆನ್ನೈಗೆ ಕಳಿಸಬೇಕು. . ನೀವು ಅಮಾಯಕರನ್ನು ಮುಂದಿಟ್ಟು ಹೋರಾಟ ಮಾಡುತ್ತಿದ್ದೀರಿ ಎಂದು ನ್ಯಾಯಾಲಯ, ಇದೊಂದು ಅವಮಾನಕ ಸಂಗತಿ ಎನ್ನುವ ಪದವನ್ನು ಹಲವು ಬಾರಿ ಪ್ರಯೋಗ ಮಾಡಿದೆ.

ಹೋರಾಟ ತೀವ್ರಗೊಳಿಸಲು ರೈತ ಸಂಘಟನೆ ನಿರ್ಧಾರ, ಮಾ.10ಕ್ಕೆ ದೇಶಾದ್ಯಂತ ರೈಲು ತಡೆ!

ಈ ವೇಳೆ ಬಲ್ಬೀರ್ ಸಿಂಗ್ ರಾಜವಾಲ್ ಕೂಡ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅವರು ಪ್ರಕರಣದಲ್ಲಿ ಪ್ರತ್ಯೇಕ ಪಿಐಎಲ್ ಕೂಡ ಸಲ್ಲಿಸಿದ್ದಾರೆ. ಮೃತ ರೈತ ಶುಭಕರನ್ ಸಾವಿನ ತನಿಖೆಯನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನಡೆಸಲಾಗುವುಲ್ಲದೆ, 3 ಸದಸ್ಯರ ಸಮಿತಿ ರಚಿಸಲಾಗುವುದು ಎಂದು ಕೋರ್ಟ್‌ ತಿಳಿಸಿದೆ.

ದೆಹಲಿ ಮಾತ್ರವಲ್ಲ ಯೂರೋಪ್‌ನಲ್ಲಿ ಬೀದಿಗಿಳಿದ ರೈತರು; ಟ್ರಾಕ್ಟರ್,ಜೆಸಿಬಿ ಬಳಸಿ ರಸ್ತೆ ತಡೆ!

Follow Us:
Download App:
  • android
  • ios