ಭಾರತದಲ್ಲಿ ರೈತರ ಆಕ್ರೋಶ ತೀವ್ರಗೊಳ್ಳುತ್ತಿದೆ. ಈ ಆಕ್ರೋಶ ಭಾರತದ ರೈತರಲ್ಲಿ ಮಾತ್ರವಲ್ಲ, ಈಗಾಗಲೇ ಫ್ರಾನ್ಸ್, ಯೂರೋಪ್ ಸೇರಿದಂತೆ ಹಲೆವೆಡೆ ವ್ಯಾಪಿಸಿದೆ. ಇದೀಗ ಯೂರೋಪ್‌ನಲ್ಲಿ ರೈತರು ಟ್ರಾಕ್ಟರ್, ಜೆಸಿಬಿ ಬಳಸಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಯೂರೋಪ್ ರೈತರ ಪ್ರತಿಭಟನೆಗೆ ಕಾರಣವೇನು?
ಯೂರೋಪ್(ಫೆ.29) ವಿಶ್ವಾದ್ಯಂತ ರೈತರ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದೆ. ಭಾರತದಲ್ಲಿ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಾವಿರಾರು ಟ್ರಾಕ್ಟರ್, ಜೆಸಿಬಿ ಮೂಲಕ ರೈತರು ದಿಲ್ಲಿ ಚಲೋ ಪ್ರತಿಭಟನೆ ನಡೆಸುತ್ತಿದ್ದಾರೆ. ಅತ್ತ ಯೂರೋಪ್‌ನಲ್ಲೂ ರೈತರ ಪ್ರಿತಭಟನೆ ತೀವ್ರಗೊಳ್ಳುತ್ತಿದೆ. ಸಾವಿರಾರು ಟ್ರಾಕ್ಟರ್, ಜೆಸಿಬಿ ಸೇರಿದಂತೆ ಬೃಹತ್ ವಾಹನಗಳ ಮೂಲಕ ನಗರದೊಳಗೆ ನುಗ್ಗಿ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರ ವಿರುದ್ಧ ಜಂಗ್ಲಿ ಕುಸ್ತಿ ನಡೆಸಿದ್ದಾರೆ. ಬೆಲ್ಜಿಯಂ, ಬ್ರಸೆಲ್ಸ್ ನಗರ ಸೇರಿದಂತೆ ಹಲವೆಡೆ ರೈತರು ಆಕ್ರೋಶ ಹೊರಹಾಕಿದ್ದಾರೆ.
ಅತೀ ಕಡಿಮೆ ಬೆಲೆಗೆ ವಿದೇಶಗಳಿಂದ ಬೆಳೆಗಳನ್ನು, ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ಯೂರೋಪ್ ರೈತರ ಪ್ರತಿಭಟನೆಗೆ ಮುಖ್ಯ ಕಾರಣವಾಗಿದೆ. ಯೂರೋಪ್‌ನಲ್ಲಿ ಕೃಷಿ ಮಾಡಲು ಕೆಲ ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕು. ಚೊತೆಗೆ ಯೂರೋಪ್‌ನಲ್ಲಿ ಕಚ್ಚಾವಸ್ತುಗಳ ಬೆಲೆ, ಕೃಷಿ ಉತ್ಪನ್ನಗಳು ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಯೂರೋಪ್‌ನಲ್ಲಿ ರೈತರು ಬೆಳೆಗಳಿಗೆ ದುಬಾರಿ ಬೆಲೆಯಾಗುತ್ತಿದೆ. ಇತ್ತ ಯೂರೋಪ್ ಸರ್ಕಾರ ವಿದೇಶಗಳಿಂದ ಬೆಳೆಗಳನ್ನು ಕಡಿಮೆಗೆ ಆಮದು ಮಾಡಿಕೊಳ್ಳುತ್ತಿದೆ. ಇದರಿಂದ ಯೂರೋಪ್ ರೈತರ ಬೆಳೆಗಳಿಗೆ ಬೆಲೆಯೂ ಸಿಗುತ್ತಿಲ್ಲ, ಮಾರಾಟವೂ ಆಗದೆ ನಷ್ಟವಾಗುತ್ತಿದೆ. ಇದನ್ನು ವಿರೋಧಿಸಿ ಯೂರೋಪ್ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮತ್ತೆ ಅನ್ನದಾತ-ಪೊಲೀಸರ ಸಂಘರ್ಷ: ಇನ್ಸ್‌ಪೆಕ್ಟರ್‌ಗೆ ಗಾಯ, ರೈತರ ಸಾವಿನ ಸಂಖ್ಯೆ 4ಕ್ಕೆ ಏರಿಕೆ
ಯೂರೋಪ್ ಸರ್ಕಾರ ವಿದೇಶದಿಂದ ಕಡಿಮೆ ಬೆಲೆ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವ ನಿರ್ಧಾರವನ್ನು ಹಿಂಪಡೆಯಬೇಕು. ಯುರೋಪ್ ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕು ಅನ್ನೋ ನಿಟ್ಟಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಪೊಲೀಸರು, ಸರ್ಕಾರದ ವಿರುದ್ದ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ರಸ್ತೆಗಳ ನಡುವೆ ಮರ, ಮಣ್ಣುಗಳನ್ನು ಸುರಿಸಿ ಹೆದ್ದಾರಿ, ಅಂತಾರಾಷ್ಟ್ರೀಯ ದಾರಿಗಳನ್ನೂ ರೈತರು ಮುಚ್ಚಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿಯಿಂದ ಯೂರೋಪ್‌ನ ಹಲವು ದೇಶಗಳಲ್ಲಿ ಬೆಲೆ ಏರಿಕೆ, ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸಾಗಿದೆ. ಕೃಷಿ ಬೆಳೆಗೆ ಬೇಕಾದ ಕಚ್ಚಾ ವಸ್ತುಗಳು, ಬೇಳೆ ಕಾಳುಗಳು ಉಕ್ರೇನ್‌ನಿಂದ ರವಾನೆಯಾಗುವುದು ನಿಂತಿದೆ. ಇದರಿಂದ ಯೂರೋಪ್ ಕೃಷಿಕರು ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಂಡು ಕೃಷಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದರ ಜೊತೆಗೆ ಹಮಾವಾನ ಬದಲಾವಣೆ, ನೀರಿನ ಕೊರತೆ, ಮಳೆ ಕೊರತೆ, ಕಾಡ್ಗಿಚ್ಚುಗಳಿಂದ ಯೂರೋಪ್‌ನಲ್ಲಿ ಕೃಷಿ ಅತ್ಯಂತ ಸವಾಲಾಗಿದೆ.
ಪಂಜಾಬ್ ರೈತರು ಹಾಗೂ ಪರಿಸರಕ್ಕಾಗಿ ಮೋದಿ ಸರ್ಕಾರದ 'ಮಹಾಕ್ರಮ', ಭತ್ತ, ಗೋಧಿಗೆ ಗುಡ್‌ಬೈ?
2023ರಲ್ಲಿ ಯೂರೋಪ್ ಗ್ರೀನ್ ಪಾಲಿಸಿ ಜಾರಿಗೆ ತಂದಿದೆ. ಹಸಿರು ಒಪ್ಪಂದ ಭಾಗವಾಗಿ ಯೂರೋಪ್ ತನ್ನ ಕೃಷಿ ನೀತಿಯನ್ನು ಸುಧಾರಿಸಿದೆ. ಹಿಸರುಮನೆ ಅನಿಲ ಹೂರಸೂಸುವಿಕೆ ಕಡಿಮೆ ಮಾಡಲು ಕಟ್ಟು ನಿಟ್ಟಾದ ನಿಯಮ ಜಾರಿಗೆ ತರಲಾಗಿದೆ. ಇದರಿಂದ ಯೂರೋಪ್ ಕೃಷಿಕರಿಗೆ ಹೆಚ್ಚಿನ ಹಣ ಖರ್ಚಾಗುತ್ತಿದೆ. ಕೃಷಿ ನೀತಿಯನ್ನು ವಿರೋಧಿಸಿ ಜನವರಿಯಿಂದ ಆರಂಭಗೊಂಡ ಪ್ರತಿಭಟನೆ ಇದೀಗ ತೀವ್ರಗೊಳ್ಳುತ್ತಿದೆ. ಕೃಷಿ ನೀತಿ ಜೊತೆಗೆ ವಿದೇಶಗಳಿಂದ ಕಡಿಮೆ ಬೆಲೆಗೆ ಆಮದು ಮಾಡುತ್ತಿರುವ ಪ್ರಕ್ರಿಯೆಗಳ ವಿರುದ್ದ ರೈತರು ಹೋರಾಟ ಮಾಡುತ್ತಿದ್ದಾರೆ.
