ದುರಂತದ ಬೆನ್ನಲ್ಲೇ ಪಂಜಾಬ್‌ನ ಜನಪ್ರಿಯ ಟ್ರಾಕ್ಟರ್ ಸ್ಟಂಟ್ ನಿಷೇಧಿಸಿದ ಸರ್ಕಾರ!
ಪಂಜಾಬ್ ಕೃಷಿ ಪ್ರಧಾನ ರಾಜ್ಯ. ಇಲ್ಲಿ ಯಾವುದೇ ಕ್ರೀಡೆ ಇರಲಿ, ಕಾರ್ಯಕ್ರಮ ಇರಲಿ, ಪ್ರತಿಭಟನೆ ಇರಲಿ ಟ್ರಾಕ್ಟರ್ ಇರಲೇ ಬೇಕು. ಹೀಗಾಗಿ ಟ್ರಾಕ್ಟರ್ ಸ್ಟಂಟ್ ಕ್ರೀಡೆ ಭಾರಿ ಜನಪ್ರಿಯ. ಆದರೆ ನಿನ್ನೆ ನಡೆದ ಈ ಸ್ಟಂಟ್ ಕ್ರೀಡೆಯಲ್ಲಿ ಓರ್ವ ಮೃತಪಟ್ಟಿದ್ದಾನೆ. ಇದರ ಬೆನ್ನಲ್ಲೇ ಸರ್ಕಾರ ಟ್ರಾಕ್ಟರ್ ಸ್ಟಂಟ್ ಕ್ರೀಡೆ ನಿಷೇಧಿಸಿದೆ.
ಚಂಡಿಘಡ(ಅ.30) ಪಂಜಾಬ್‌ನಲ್ಲಿ ಟ್ರಾಕ್ಟರ್ ಇರದ ಮನೆ ತೀರಾ ವಿರಳ. ಇನ್ನು ಜಮೀನು ಇಲ್ಲದಿದ್ದರೂ ಟ್ರಾಕ್ಟರ್ ಇದ್ದೇ ಇರುತ್ತೆ. ಹೀಗಾಗಿ ಪಂಜಾಬ್‌ನ ಬಹುತೇಕ ಕಡೆ ಟ್ರಾಕ್ಟರ್ ಸ್ಟಂಟ್ ಕ್ರೀಡೆಗಳು ಆಯೋಜನೆಗೊಳ್ಳುತ್ತದೆ. ಗುರುದಾಸಪುರದ ಬಟಾಲ ಬಳಿ ಆಯೋಜಿಸಿದ್ದ ಟ್ರಾಕ್ಟರ್ ಸ್ಟಂಟ್‌ನಲ್ಲಿ ಓರ್ವ ಮೃತಪಟ್ಟ ಘಟನೆ ಭಾರಿ ಸದ್ದು ಮಾಡಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪಂಜಾಬ್ ಸರ್ಕಾರ ಇದೀಗ ಎಲ್ಲಾ ರೀತಿಯ ಟ್ರಾಕ್ಟರ್ ಸ್ಟಂಟ್ ನಿಷೇಧಿಸಿದೆ.
ಪಂಜಾಬ್‌ನ ಮೂಲೆ ಮೂಲೆಗಳಲ್ಲಿ ಟ್ರಾಕ್ಟರ್ ಸ್ಟಂಟ್ ಆಯೋಜಿಸಲಾಗುತ್ತದೆ. ದುಬಾರಿ ಮೊತ್ತದ ಬಹುಮಾನವನ್ನು ನೀಡಲಾಗುತ್ತದೆ. ಟ್ರಾಕ್ಟರ್ ಮೂಲಕ ಹಲವು ಚಿತ್ರ ವಿಚಿತ್ರ, ಅಪಾಯಕಾರಿ ಸ್ಟಂಟ್ ಪ್ರದರ್ಶಿಸುತ್ತಾರೆ. ಹೀಗೆ ಸುಖಮನ್‌ದೀಪ್ ಸಿಂಗ್ ಟ್ರಾಕ್ಟರ್ ಮೂಲಕ ಸ್ಟಂಟ್ ನಡೆಸುತ್ತಿರುವಾಗ ಟ್ರಾಕ್ಟರ್ ಅಡಿಗೆ ಬಿಡ್ಡು ಅಪ್ಪಚ್ಚಿಯಾಗಿದ್ದರು. ಗಂಭೀರ ಗಾಯಗೊಂಡ ಸುಖಮನ್‌ದೀಪ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದರು.
ಬೇಕಾ ಇಂಥಾ ಮಕ್ಕಳು... ಮುಂಗೋಪಿ ಮಗ ಕಿಡಿಗೇಡಿ ಮೊಮ್ಮಗ : ವೃದ್ಧ ತಾಯಿ ಮೇಲೆ ಹಿಗ್ಗಾಮುಗ್ಗಾ ಥಳಿತ
ಈ ಸ್ಟಂಟ್ ವೇಳೆ ನಡೆದ ದುರ್ಘಟನೆ ವಿಡಿಯೋ ಭಾರಿ ವೈರಲ್ ಆಗಿತ್ತು. ಇದೇ ವೇಳೆ ಆಕ್ರೋಶವೂ ವ್ಯಕ್ತವಾಗಿತ್ತು. ಟ್ರಾಕ್ಟರ್ ಸ್ಟಂಟ್‌ಗಳು ಶೋಕಿಗಳು ಮಾಡಿದ ಕ್ರೀಡೆ. ಇಂತಹ ಅಪಾಯಾಕಾರಿ ಕ್ರೀಡೆಗೆ ಸರ್ಕಾರ ಅವಕಾಶ ನೀಡುತ್ತಿರುವುದೇಕೆ ಎಂದು ಪ್ರಶ್ನೆಯೂ ಎದುರಾಗಿತ್ತು. ಪಂಜಾಬ್ ಸರ್ಕಾರದ ಮೇಲೆ ಟೀಕೆಗಳು ವ್ಯಕ್ತವಾಗಿತ್ತು. ಇದೀಗ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಮಹತ್ವದ ಘೋಷಣೆ ಮಾಡಿದ್ದಾರೆ.
ಪ್ರೀತಿಯ ಪಂಜಾಬಿಗಳೇ, ಟ್ರಾಕ್ಟರ್ ಹೊಲದಲ್ಲಿನ ರಾಜ. ಅದನ್ನು ಸಾವಿನ ರೂವಾರಿಯಾಗಿ ಮಾಡಬೇಡಿ. ಟ್ರಾಕ್ಟರ್ ಬಳಸಿ ಯಾವುದೇ ರೀತಿಯ ಸ್ಟಂಟ್, ಅಪಾಯಕಾರಿ ಡ್ರೈವ್, ಕ್ರೀಡೆಯನ್ನು ನಿಷೇಧಿಸಲಾಗಿದೆ ಎಂದು ಭಗಂವತ್ ಮಾನ್ ಟ್ವೀಟ್ ಮಾಡಿದ್ದಾರೆ.
ಉಚಿತ ಯೋಜನೆಯಿಂದ ಸಾಲದ ಸುಳಿಯಲ್ಲಿ ಪಂಜಾಬ್, ದಾಖಲೆ ಬಹಿರಂಗಪಡಿಸಿದ ಸಿಧು!
ಭಗವಂತ್ ಮಾನ್ ಟ್ವೀಟ್‌ಗೆ ಹಲವರು ಬೆಂಬಲ ನೀಡಿದ್ದಾರೆ. ಇತ್ತ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ಪಂಜಾಬ್‌ನಲ್ಲಿ ಟ್ರಾಕ್ಟರ್ ಸ್ಟಂಟ್ ನಡೆಯುತ್ತಿದೆ. ಟ್ರಾಕ್ಟರ್ ಪಂಜಾಬಿಯ ಒಂದು ಭಾಗ. ಹೀಗಾಗಿ ಸ್ಟಂಟ್ ನಿಷೇಧ ಉಚಿತವಲ್ಲ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಬಹುತೇಕರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.