ಪಂಜಾಬ್‌ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆಮ್ ಆದ್ಮಿ ಪಾರ್ಟಿ ದೆಹಲಿ ರೀತಿಯಲ್ಲೇ ಕೆಲ ಉಚಿತ ಯೋಜನೆ ಜಾರಿ ಮಾಡಿದೆ.ಈ ಉಚಿತ ಯೋಜನೆ ಹಾಗೂ ಆರ್ಥಿಕ ಶಿಸ್ತಿನ ಕೊರತೆಯಿಂದ ಪಂಜಾಬ್ ಸಾಲದ ಸುಳಿಗೆ ಸಿಲುಕಿದೆ.  ಈ ಕುರಿತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ದಾಖಲೆ ಬಿಡುಗಡೆ ಮಾಡಿದ್ದಾರೆ. 

ಚಂಡಿಘಡ(ಸೆ.24) ಕರ್ನಾಟಕ, ದೆಹಲಿ, ಪಂಜಾಬ್ ಸೇರಿದಂತೆ ದೇಶದ ಕೆಲ ರಾಜ್ಯಗಳಲ್ಲಿ ಹಲವು ಉಚಿತ ಯೋಜನೆಗಳು ಜಾರಿಯಲ್ಲಿದೆ. ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರದ ಉಚಿತ ಯೋಜನೆಗಳನ್ನು ಪಂಜಾಬ್‌ನಲ್ಲೂ ಜಾರಿಗೆ ತಂದಿದೆ.ಆದರೆ ಈ ಯೋಜನೆಗಳಿಂದ ಪಂಜಾಬ್ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಪಂಜಾಬ್ ಸಾಲದ ಸುಳಿಗೆ ಸಿಲುಕಿದೆ ಎಂದು ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಹಿರಿಯ ನಾಯಕ ನವಜೋತ್ ಸಿಂಗ್ ಆರೋಪಿಸಿದ್ದಾರೆ. ಕೇವಲ 1 ವರ್ಷ 6 ತಿಂಗಳಲ್ಲಿ ಪಂಜಾಬ್ ಸರ್ಕಾರ ಸಾಲ 50,000 ಕೋಟಿ ರೂಪಾಯಿ ಹೆಚ್ಚಾಗಿದೆ. ಕಳೆದೆರಡು ವರ್ಷದಲ್ಲಿ ಪಂಡಾಬ್ ಸರ್ಕಾರದ ಸಾಲ 70,000 ಕೋಟಿ ರೂಪಾಯಿ ಆಗಿದೆ ಎಂದು ಸಿಧು, ರಾಜ್ಯಪಾಲರ ಪತ್ರದ ಅಂಕಿ ಅಂಶಗಳನ್ನು ಉಲ್ಲೇಖಿಸಿ ಆರೋಪಿಸಿದ್ದಾರೆ.

ಭ್ರಷ್ಟಾಚಾರ, ಉಚಿತ ಯೋಜನೆಗಳಿಂದ ಪಂಜಾಬ್ ಸರ್ಕಾರ ಸಾಲ ಹೆಚ್ಚಾಗುತ್ತಲೇ ಇದೆ. ರಾಜ್ಯದ ಜಿಡಿಪಿ ಶೇಕಡಾ 50 ರಷ್ಟಿದೆ. ಆದರೆ ಆರ್ಥಿಕ ಶಿಸ್ತಿನ ಕೊರತೆಯಿಂದ ಪಂಜಾಬ್ ಸಾಲದ ಹೊರೆ ಹೊರಬೇಕಾಕಿದೆ ಎಂದು ಸಿಧು ಆರೋಪಿಸಿದ್ದಾರೆ. ಪಂಜಾಬ್ ವಿದ್ಯುತ್ ಸರಬಾರದು ನಿಯಮಿತ 18,000 ಕೋಟಿ ರೂಪಾಯಿ ಸಾಲದಲ್ಲಿದೆ. ಮನೆಗಳಿಗೆ ಡಿಜಿಟಲ್ ಮೀಟರ್ ಅಳವಡಿಕೆಗೆ 9,641 ಕೋಟಿ ರೂಪಾಯಿ ಸಾಲ ಮಾಡಿದೆ. ಇನ್ನು ಸಬ್ಸಿಡಿ ಹಾಗೂ ಬಿಲ್ 9,020 ಕೋಟಿ ರೂಪಾಯಿ ಹಾಗೂ 2,548 ಕೋಟಿ ರೂಪಾಯಿ ಸಾಲದಲ್ಲಿದೆ. ಇದಕ್ಕೆ ಕಾರಣ ಪಂಜಾಬ್‌ನಲ್ಲಿ ಆಪ್ ಸರ್ಕಾರ ಘೋಷಿಸಿದ ಉಚಿತ ವಿದ್ಯುತ್ ಚಾಲ್ತಿಯಲ್ಲಿದೆ ಎಂದು ಸಿಧು ಆರೋಪಿಸಿದ್ದಾರೆ.

ವಿವಾದದ ಬಳಿಕ ಇಂಡಿಯಾ ಪೋಸ್ಟರ್‌ಗೆ ಕೇಜ್ರಿವಾಲ್ ಫೋಟೋ ಸೇರಿಸಿದ ಇಂಡಿಯಾ ಕೂಟ

ಅಬಕಾರಿ, ಗಣಿಗಾರಿಗೆ ಸೇರಿದಂತೆ ಇತರ ಕೆಲ ಕ್ಷೇತ್ರದ ಮೇಲೆ ಭಾರಿ ತೆರಿಗೆ ವಿಧಿಸಿ ಆದಾಯ ಕ್ರೋಢಿಕರಿಸುವ ಆಪ್ ಪ್ರಯತ್ನ ಕೈಗೂಡಿಲ್ಲ. ಇಲ್ಲಿ ಮಾಫಿಯಾಕ್ಕೆ ಮಣಿದು ಆಪ್ ಸರ್ಕಾರ ಸರಿಯಾಗಿ ಆದಾಯ ಕ್ರೋಡಿಕರಿಸಲು ಸಾಧ್ಯವಾಗಿಲ್ಲ. ಆಪ್ ಸರ್ಕಾರ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಪಂಜಾಬ್ ಪರಿಸ್ಥಿತಿ ಕೆಲವೇ ದಿನಗಳಲ್ಲಿ ಬಯಲಾಗಲಿದೆ ಎಂದು ಸಿಧು ಆರೋಪಿಸಿದ್ದಾರೆ.

Scroll to load tweet…