Asianet Suvarna News Asianet Suvarna News

ಕಾಶ್ಮೀರ ಭಾರತದ್ದಲ್ಲ ಎಂದ ಸಿಧು ಸಲಹೆಗಾರನಿಗೆ ಕ್ಯಾಪ್ಟನ್‌ ಕ್ಲಾಸ್‌!

* ಕಾಶ್ಮೀರವನ್ನು ಭಾರತ ಅಅಕ್ರಮವಾಗಿ ಆಕ್ರಮಿಸಿದೆ

* ಕಾಶ್ಮೀರ ಪ್ರತ್ಯೇಕ ದೇಶ

* ವಿವಾದಾತ್ಮಕ ಹೆಳಿಕೆ ನೀಡಿದ ನವಜೋತ್ ಸಿಂಗ್ ಸಿಧು ಸಲಹೆಗಾರ

Aarinder Singh slams Sidhu advisors over comments on Kashmir and Pakistan pod
Author
Bangalore, First Published Aug 23, 2021, 11:25 AM IST

ಚಂಡೀಗಢ(ಆ.23): ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಸಲಹೆಗಾರರಿಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧುರವರ ಸಲಹೆಗಾರನ ವಿವಾದಾತ್ಮಕ ಹೇಳಿಕೆ ಭಾರೀ ಗದ್ದಲ ಸೃಷ್ಟಿಸಿದ ಬರನ್ನಲ್ಲೇ, ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇನ್ಮುಂದೆ ಅಂತಹ ಹೇಳಿಕೆ ಬರೆಯದಂತೆ ಎಚ್ಚರಿಕೆ ನೀಡಿದ್ದಾರೆ. ವಾಸ್ತವವಾಗಿ, ಸಿದ್ದು ಅವರ ಸಲಹೆಗಾರ ಮಲ್ವಿಂದರ್ ಸಿಂಗ್ ಮಾಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕಾಶ್ಮೀರ ಪ್ರತ್ಯೇಕ ದೇಶ, ಭಾರತ ಮತ್ತು ಪಾಕಿಸ್ತಾನ ಅದನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಅವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಸಿಎಂ ಅಮರಿಂದರ್ ಸಿಂಗ್, ಸಿಧು ಅವರ ಸಲಹೆಗಾರರಾದ ಡಾ.ಪ್ಯಾರೆ ಲಾಲ್ ಗರ್ಗ್ ಮತ್ತು ಮಾಲ್ವಿಂದರ್ ಸಿಂಗ್ ಮಾಲಿ ಅವರಿಗೆ ಪಿಪಿಸಿಸಿ ಅಧ್ಯಕ್ಷರಿಗೆ ಸಲಹೆ ನೀಡುವುದನ್ನು ಮುಂದುವರಿಸುವಂತೆ ಆಗ್ರಹಿಸಿದ್ದಾರೆ. ಆದರೆ ಸ್ಪಷ್ಟವಾಗಿ ತಿಳಿಯದ ಕಡಿಮೆ ಜ್ಞಾನವಿರುವ ವಿಷಯಗಳ ಬಗ್ಗೆ ಮಾತನಾಡದಂತೆಯೂ ಎಚ್ಚರಿಸಿದ್ದಾರೆ.

ಕಾಶ್ಮೀರ ಮತ್ತು ಪಾಕಿಸ್ತಾನದಂತಹ ಸೂಕ್ಷ್ಮ ರಾಷ್ಟ್ರೀಯ ಸಮಸ್ಯೆಗಳ ಕುರಿತು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಇಬ್ಬರು ಸಲಹೆಗಾರರು ​​ಕೊಟ್ಟ ಹೇಳಿಕೆಯನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಟುವಾಗಿ ಟೀಕಿಸಿದ್ದಾರೆ. ಈ ವಿಚಾರವನ್ನು ಕಂಡಿಸಿದ ಅಅವರು ಇಂತಹ ಹೇಳಿಕೆಗಳು ರಾಜ್ಯ ಮತ್ತು ದೇಶದ ಶಾಂತಿ ಮತ್ತು ಸ್ಥಿರತೆಗೆ ಅಪಾಯಕಾರಿ ಎಂದು ಅವರು ಹೇಳಿದ್ದಾರೆ.

ಸಲಹೆಗಾರ ಹೇಳಿದ್ದೇನು?

ಸಿಧು ಅವರ ಸಲಹೆಗಾರ ಮಾಲ್ವಿಂದರ್ ಸಿಂಗ್ ಮಾಲಿ ಅವರು ತಮ್ಮ ಫೇಸ್‌ಬುಕ್‌ನಲ್ಲಿ, ಕಾಶ್ಮೀರ ಪ್ರತ್ಯೇಕ ದೇಶ, ಭಾರತ ಮತ್ತು ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿದೆ. ಕಾಶ್ಮೀರವು ಕಾಶ್ಮೀರದ ಜನರಿಗೆ ಸೇರಿದ್ದು ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಇತ್ತೀಚೆಗಷ್ಟೇ ಸಿದು ಇವರನ್ನು ತನ್ನ ಸಲಹೆಗಾರರನ್ನಾಗಿ ನೇಮಿಸಿದ್ದರು ಎಂಬುವುದು ಉಲ್ಲೇಖನೀಯ.

ಬಿಜೆಪಿ ಖಂಡನೆ

ಈ ವಿಚಾರವಾಗಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಕೂಡಾ ಪಾಕಿಸ್ತಾನವನ್ನು ಬೆಂಬಲಿಸುವ ಈ ಹೇಳಿಕೆ ಬಗ್ಗೆ ರಾಹುಲ್ ಗಾಂಧಿಯಿಂದ ವಿವರಣೆ ಕೇಳಿದ್ದಾರೆ. ಈ ವಿಚಾರದಲ್ಲಿ ಪಾತ್ರಾ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರಿಗೆ ಟ್ವೀಟ್ ಮಾಡುವ ಮೂಲಕ ಛೀಮಾರಿ ಹಾಕಿದ್ದಾರೆ. ಸಿಧು ಅವರ ಇತ್ತೀಚೆಗೆ ನೇಮಕಗೊಂಡ ಇಬ್ಬರು ಸಲಹೆಗಾರರ ​​ಅಭಿಪ್ರಾಯಗಳನ್ನು ನಾಚಿಕೆಗೇಡು ಎಂದು ಬಿಜೆಪಿ ಹೇಳಿದೆ

Follow Us:
Download App:
  • android
  • ios