ಏಳು ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ ಜಸ್ವೀಂದರ್ ಪ್ರಮಾಣವಚನ ಸಮಾರಂಭಕ್ಕೆ ಸ್ಟೇಜ್ ಸಿದ್ಧತೆ ಮಾಡುತ್ತಿದ್ದ ಪೊಲೀಸ್ ತಪಾಸಣೆಯಿಂದಾಗಿ ಅಮ್ಮನಿಗೆ ಮತ್ತೆ ಸಿಕ್ಕಿದ ಮಗ
ಪಂಜಾಬ್ ಸಿಎಂ ಭಗವಂತ್ ಮಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ಅಪೂರ್ವ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಈ ಸಮಾರಂಭದಲ್ಲಿ ಏಳು ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ ಮಗನೋರ್ವ ಮರಳಿ ಆತನ ತಾಯಿಯನ್ನು ಸೇರಿಕೊಂಡಿದ್ದಾನೆ. ಫರೀದ್‌ಕೋಟ್‌ನ (Faridkot) ಶೇರ್ ಸಿಂಗ್ ವಾಲಾ (Sher Singh Wala) ಗ್ರಾಮದ ಯುವಕ ಜಸ್ವಿಂದರ್ ಸಿಂಗ್ (jaswinder Singh)ಏಳು ವರ್ಷಗಳ ಹಿಂದೆ ಜಗಳವಾಡಿ ಮನೆಯಿಂದ ಓಡಿಹೋಗಿದ್ದ, ಬುಧವಾರ ಶಹೀದ್ ಭಗತ್ ಸಿಂಗ್ ನಗರದ (Shaheed Bhagat Singh Nagar) ಖಟ್ಕರ್ ಕಲಾನ್‌ನಲ್ಲಿ ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆಯ ಸಮಯದಲ್ಲಿ ಈತ ಕೆಲಸ ಮಾಡುತ್ತಿದ್ದಾಗ ತನ್ನ ಹೆತ್ತವರಿಗೆ ಮತ್ತೆ ಸಿಕ್ಕಿದ್ದಾನೆ.
ಪೊಲೀಸ್ ಪರಿಶೀಲನೆಯ ವೇಳೆ 26 ವರ್ಷದ ಜಸ್ವೀಂದರ್ ಸಿಂಗ್ ಬಗ್ಗೆ ತಿಳಿದುಕೊಂಡ ಆತನ ಕುಟುಂಬ ಸದಸ್ಯರು ಮತ್ತೆ ಆತನನ್ನು ಸೇರಿಕೊಂಡಿದ್ದಾರೆ. ಸಿಎಂ ಪ್ರಮಾಣ ವಚನ ಸಮಾರಂಭಕ್ಕಾಗಿ ಗುತ್ತಿಗೆ ಪಡೆದ ಟೆಂಟ್ ಗುತ್ತಿಗೆದಾರರೊಂದಿಗೆ ಜಸ್ವಿಂದರ್ ಕೆಲಸ ಮಾಡುತ್ತಿದ್ದರು. ಜಿಲ್ಲಾ ಪೊಲೀಸರು ಸ್ಥಳದಲ್ಲಿ ಕೆಲಸ ಮಾಡುವ ಎಲ್ಲ ಜನರ ಪರಿಶೀಲನೆಯ ಸಮಯದಲ್ಲಿ ಯಾವುದೇ ಗುರುತಿನ ಪುರಾವೆಗಳನ್ನು ನೀಡಲು ವಿಫಲವಾದಾಗ, ಅವರ ವಿವರಗಳನ್ನು ದೃಢೀಕರಣಕ್ಕಾಗಿ ಫರೀದ್‌ಕೋಟ್ ಜಿಲ್ಲೆಯ ಸಾದಿಕ್ ಪೊಲೀಸ್ ಠಾಣೆಗೆ (Sadiq police station)ಕಳುಹಿಸಲಾಯಿತು.
ಇಂದಿನಿಂದ ಆಪ್ ಕಾ ಪಂಜಾಬ್: ಸಿಎಂ ಆಗಿ ಭಗವಂತ್ ಮಾನ್ ಪ್ರಮಾಣವಚನ ಸ್ವೀಕಾರ
ದೈನಂದಿನ ಕೂಲಿ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಈ ಜಸ್ವಿಂದರ್ ಅವರ ತಂದೆ ದೇವಿಂದರ್ ಸಿಂಗ್ (Davinder Singh) ಈ ಬಗ್ಗೆ ಮಾತನಾಡಿ, ಪೊಲೀಸರು ಮೊದಲು ಪರಿಶೀಲನೆಗಾಗಿ ಬಂದಾಗ ನಾನು ಮನೆಯಲ್ಲಿ ಇರಲಿಲ್ಲ ಮತ್ತು ಯಾರೋ ಅವರು ಇಲ್ಲಿ ವಾಸಿಸುವುದಿಲ್ಲ ಎಂದು ಹೇಳಿ ಅವರನ್ನು ವಾಪಸ್ ಕಳುಹಿಸಿದರು. ನಂತರ, ನನಗೆ ಗೊತ್ತಾದಾಗ, ನಾನು ಸ್ಟೇಷನ್ ಹೌಸ್ ಆಫೀಸರ್ ಮತ್ತು ನಮ್ಮ ಸ್ಥಳೀಯ ಶಾಸಕ ಗುರ್ದಿತ್ ಸಿಂಗ್ ಸೆಖೋನ್ (Gurdit Singh Sekhon) ಅವರನ್ನು ಸಂಪರ್ಕಿಸಿದೆ. ನಂತರ ನಾವು ಖಟ್ಕರ್ ಕಲಾಂಗೆ ತರಾತುರಿಯಲ್ಲಿ ಹೋದೆವು, ಆದರೆ ಸ್ಥಳವನ್ನು ತಲುಪಿದಾಗ, ಪೊಲೀಸರು ನಮ್ಮನ್ನು ಪ್ರವೇಶಿಸಲು ಬಿಡಲಿಲ್ಲ. ಸ್ವಲ್ಪ ಸಮಯದ ನಂತರ, ಅವರು ನನ್ನನ್ನು ಪೊಲೀಸರೊಂದಿಗೆ ಕಳುಹಿಸಿದರು ಮತ್ತು ನಾನು ನನ್ನ ಮಗನನ್ನು ಕಂಡುಕೊಂಡೆ ಎಂದು ಹೇಳಿದರು.
ಆತ ವೇದಿಕೆಯ ಮುಂದೆ ಕುರ್ಚಿಗಳನ್ನು ಜೋಡಿಸುತ್ತಿದ್ದ. ನಂತರ ನಾವು ಮಧ್ಯರಾತ್ರಿಯಲ್ಲಿ ಅವನೊಂದಿಗೆ ಹಿಂತಿರುಗಿದೆವು ಮತ್ತು ನಮ್ಮ ಇಡೀ ಹಳ್ಳಿಯು ಅವನನ್ನು ಸ್ವಾಗತಿಸಲು ಇನ್ನೂ ನಿಂತಿದೆ. ನಾನು ಎಷ್ಟು ಸಂತೋಷವಾಗಿದ್ದೇನೆ ಎಂದು ಹೇಳಲು ಸಾಧ್ಯವಿಲ್ಲ. ಈಗ ಆತ ಟರ್ಬನ್ ಧರಿಸುವುದಿಲ್ಲ ಮತ್ತು ಕ್ಷೌರ ಮಾಡಿದ್ದರಿಂದ ಅವನನ್ನು ಗುರುತಿಸಲು ನನಗೆ ಸ್ವಲ್ಪ ಸಮಯ ಹಿಡಿಯಿತು ಎಂದು ಆತನ ತಂದೆ ದೇವಿಂದರ್ ಸಿಂಗ್ ಅವರು ಹೇಳಿದರು.
ಜಸ್ವಿಂದರ್ ಸಿಂಗ್ 19 ವರ್ಷದವನಿದ್ದಾಗ, ಸೇನಾ ನೇಮಕಾತಿ ಪರೀಕ್ಷೆಗೆ (army recruitment test) ಹೋದರು ಆದರೆ ಅಲ್ಲಿ ಪಾಸಾಗುವಲ್ಲಿ ವಿಫಲರಾದರು. ಇದರಿಂದ ನಿರಾಶೆಗೊಂಡು ಮನೆ ತೊರೆದರು. ಆತ ನಾಪತ್ತೆಯಾದಾಗ ನಾವು ಅವನನ್ನು ಎಲ್ಲೆಡೆ ಹುಡುಕಲು ಪ್ರಯತ್ನಿಸಿದೆವು ಮತ್ತು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದೇವೆ ಎಂದು ಅವರು ಹೇಳಿದರು.
ಪಂಜಾಬ್‌ನ 17 ನೇ ಮುಖ್ಯಮಂತ್ರಿಯಾದ ಭಗವಂತ್ ಮಾನ್, ಜನರ ಪ್ರೀತಿಯ ಋಣ ತೀರಿಸುವುದು ಅಸಾಧ್ಯ!
ಮೆಟ್ರಿಕ್ಯುಲೇಷನ್ ಪೂರೈಸಿರುವ ಜಸ್ವಿಂದರ್, ಮನೆಯಿಂದ ಓಡಿಹೋಗಿ ಅಮೃತಸರಕ್ಕೆ (Amritsar) ಹೋಗಿ ಕೆಲವು ತಿಂಗಳು ದಿನಗೂಲಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು. 'ನಂತರ, ನಾನು ರಾಜಕೀಯ ಸಭೆಗಳು ಮತ್ತು ಮದುವೆಗಳು ಸೇರಿದಂತೆ ಸಮಾರಂಭಗಳಲ್ಲಿ ಟೆಂಟ್‌ಗಳನ್ನು ಹಾಕುವ ಗುತ್ತಿಗೆದಾರರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದೆ. ನಾನು ಆರು ವರ್ಷಗಳಿಂದ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ ಮತ್ತು ಕಳೆದ ಐದು ದಿನಗಳಿಂದ ಖಟ್ಕರ್ ಕಲಾನ್ ಸ್ಥಳದಲ್ಲಿ ವ್ಯವಸ್ಥೆ ಮಾಡುತ್ತಿದ್ದೇನೆ ಎಂದು ಜಸ್ವೀಂದರ್ ಹೇಳಿದರು.