ಪಂಜಾಬ್‌ನ 17 ನೇ ಮುಖ್ಯಮಂತ್ರಿಯಾದ ಭಗವಂತ್ ಮಾನ್, ಜನರ ಪ್ರೀತಿಯ ಋಣ ತೀರಿಸುವುದು ಅಸಾಧ್ಯ!
* ಪಂಜಾಬ್‌ನಲ್ಲಿ ಆಮ್ ಆದ್ಮಿ ಸರ್ಕಾರ
* ರಾಜ್ಯದ 17ನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಭಗವಂತ್ ಮಾನ್
* ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಗ್ರಾಮದಲ್ಲಿ ಕಾರ್ಯಕ್ರಮ
ಚಂಡೀಗಢ(ಮಾ.16): ಪಂಜಾಬ್ ಗೆ ಇಂದು ನೂತನ ಮುಖ್ಯಮಂತ್ರಿಯ ಪದಗ್ರಹಣವಾಗಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ಭಗವಂತ್ ಮಾನ್ ರಾಜ್ಯದ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶಹೀದ್ ಭಗತ್ ಸಿಂಗ್ ಅವರ ಸ್ಥಳೀಯ ಗ್ರಾಮವಾದ ಖಟ್ಕರ್ಕಲನ್ ನಲ್ಲಿ ಅದ್ಧೂರಿ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಪ್ರಮಾಣ ವಚನ ಸಮಾರಂಭಕ್ಕೆ ದೆಹಲಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಸಂಪುಟ ಸಾಕ್ಷಿಯಾಗಿದೆ. ಇದರೊಂದಿಗೆ ಭಗವಂತ್ ಮಾನ್ ಅವರ ಮಗ ಮತ್ತು ಮಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಬ್ಬರೂ ಅಮೆರಿಕದಿಂದ ಇಲ್ಲಿಗೆ ಆಗಮಿಸಿದ್ದರು. ಭಗವಂತ್ ಮಾನ್ ಅವರ ತಾಯಿ ಮತ್ತು ಸಹೋದರಿ ಕೂಡ ಪ್ರಮಾಣ ವಚನ ಸಮಾರಂಭಕ್ಕೆ ಸಾಕ್ಷಿಯಾದರು.
Punjab New CM ಆಪ್ ಸಿಎಂ ಪ್ರಮಾಣವಚನಕ್ಕೆ 40 ಎಕರೆ ಗೋಧಿ ಬೆಳೆ ನಾಶ, ಕ್ರಾಂತಿ ಬದಲು ಕ್ರೌರ್ಯ!
ಈ ಜನಸಾಮಾನ್ಯರ ಸರ್ಕಾರ - ಮಾನ್
ಪ್ರಮಾಣ ವಚನ ಸ್ವೀಕರಿಸಿದ ನಂತರ, ಪಂಜಾಬ್‌ನ ನೂತನ ಸಿಎಂ ಭಗವಂತ್ ಮಾನ್, ಸಮಾರಂಭಕ್ಕೆ ಆಗಮಿಸಿದವರಿಗೆ ಮನಃಪೂರ್ವಕ ಧನ್ಯವಾದ ಅರ್ಪಿಸಿದರು. ದೆಹಲಿ ಸಚಿವ ಸಂಪುಟ ಇಲ್ಲಿಯೇ ಕುಳಿತಿದೆ ಎಂದ ಅವರು, ಸಿಎಂ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಬಂದಿದ್ದಾರೆ. ಉತ್ತಮ ಗೆಲುವು ಸಾಧಿಸಿಲು ಕಾರಣರಾದ ಪಂಜಾಬ್‌ನ ಶಾಸಕರು ಇಲ್ಲಿ ಕುಳಿತುಕೊಂಡಿದ್ದಾರೆ ಎಂದಿದ್ದಾರೆ. ಇದೇ ವೇಳೆ ಇಲ್ಲಿರುವುದಕ್ಕೆ ವಿಶೇಷ ಕಾರಣವಿದೆ, ಅದು ಭಗತ್ ಸಿಂಗ್ ಗ್ರಾಮ. ಈ ಗ್ರಾಮ ನನಗೆ ಹೊಸದಲ್ಲ. ಇಲ್ಲಿಗೆ ಹಲವು ಬಾರಿ ಬಂದಿದ್ದೇನೆ. ಸಾರ್ವಜನಿಕರು ನೀಡಿದ ಪ್ರೀತಿ ಋಣ ತೀರಿಸಲು ಹಲವು ಜನ್ಮಗಳು ಬೇಕಾಗುತ್ತವೆ ಎಂದಿದ್ದಾರೆ.
ಮೂರು ವಿಭಿನ್ನ ವೇದಿಕೆಗಳು
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮೂರು ವಿಭಿನ್ನ ವೇದಿಕೆಗಳನ್ನು ಸಿದ್ಧಪಡಿಸಲಾಗಿತ್ತು. ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಭಗವಂತ್ ಮಾನ್ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಮುಖ್ಯ ಕಾರ್ಯದರ್ಶಿಯೂ ವೇದಿಕೆಯಲ್ಲಿದ್ದರು. ಭಗವಂತ್ ಮಾನ್ ಹೊರತುಪಡಿಸಿ ಉಳಿದ 91 ಶಾಸಕರಿಗೆ ಬಲ ಬದಿಯ ವೇದಿಕೆಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದರೆ, ಎಡ ವೇದಿಕೆಯಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ ಹಿರಿಯ ನಾಯಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಖಟ್ಕರ್ ಕಲಾಂನಲ್ಲಿರುವ ಶಹೀದ್ ಭಗತ್ ಸಿಂಗ್ ಸ್ಮಾರಕದ ಹಿಂಭಾಗದಲ್ಲಿ 13 ಎಕರೆ ಪ್ರದೇಶದಲ್ಲಿ ದೊಡ್ಡ ಟೆಂಟ್ ನಿರ್ಮಿಸಲಾಗಿದೆ. ಸುಮಾರು ನಲವತ್ತು ಸಾವಿರ ಕುರ್ಚಿಗಳನ್ನು ಅಳವಡಿಸಲಾಗಿದೆ. ಇದಲ್ಲದೇ ಹೆದ್ದಾರಿ ಹಾಗೂ ಸ್ಮಾರಕದ ಹಿಂಭಾಗದ ಹೊಲಗಳಲ್ಲಿ 45 ಎಕರೆಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಸಮಾರಂಭದಲ್ಲಿ ಭದ್ರತೆಗಾಗಿ 10,000 ಯೋಧರನ್ನು ನಿಯೋಜಿಸಲಾಗಿದೆ. ಮಹಿಳೆಯರು ಮತ್ತು ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಹಳದಿ ಪೇಟ ಮತ್ತು ಸೀರೆ-ಸ್ಟಾಲ್‌ಗಳನ್ನು ಧರಿಸಿ ಆಗಮಿಸಿದ್ದಾರೆ.
ಹುತಾತ್ಮರ ಗ್ರಾಮದಲ್ಲಿ ಪ್ರಥಮ ಬಾರಿಗೆ ಪ್ರಮಾಣ ವಚನ
ಪಂಜಾಬ್‌ನಲ್ಲಿ ಪ್ರಥಮ ಬಾರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜಭವನದಲ್ಲಿ ನಡೆಯದೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಗ್ರಾಮದಲ್ಲಿ ನಡೆದಿತ್ತು. ಇದಕ್ಕೂ ಮುನ್ನ ಭಗವಂತ್ ಮಾನ್ ಅವರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು. ಅದರ ಪರಿಣಾಮವೂ ಕಂಡು ಬಂದಿದೆ. ಭಗವಂತ್ ಮಾನ್ ಅವರು ಪಂಜಾಬ್‌ನ ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ 45 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ ಎಂಬುವುದು ಉಲ್ಲೇಖನೀಯ. ಈಗ ಮುಖ್ಯಮಂತ್ರಿ ಾಗಿರುವ ಮಾನ್, ವೃತ್ತಿಪರ ಹಾಸ್ಯನಟರಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಅವರು ಜುಗೂನ್ ಪಾತ್ರದೊಂದಿಗೆ ರಾಜಕೀಯದ ಬಗ್ಗೆ ಸಾಕಷ್ಟು ವ್ಯಂಗ್ಯವಾಡುತ್ತಿದ್ದರು. ನಂತರ ಅವರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದರು. ಆದರೆ, ಅವರು ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಸೋತರು.
Punjab New CM ಪಂಜಾಬ್ ಸರ್ಕಾರ ರಚನೆ ತಯಾರಿ ಬೆನ್ನಲ್ಲೇ ಎಂಪಿ ಸ್ಥಾನಕ್ಕೆ ಭಗವಂತ್ ಮಾನ್ ರಾಜೀನಾಮೆ!
ಹೊಸ ಸೂರ್ಯೋದಯವಾಗುತ್ತದೆ'
ಪ್ರಮಾಣವಚನಕ್ಕೆ ಮುನ್ನ ಭಗವಂತ್ ಮಾನ್ ಟ್ವೀಟ್ ಇಂದು ಸೂರ್ಯನ ಚಿನ್ನದಂತಹ ಕಿರಣವು ಹೊಸ ಉದಯವನ್ನು ತಂದಿದೆ. ಶಹೀದ್ ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅವರ ಕನಸುಗಳನ್ನು ಸಾಕಾರಗೊಳಿಸಲು, ಇಡೀ ಪಂಜಾಬ್ ಇಂದು ಖಟ್ಕರ್ ಕಲಾನ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದೆ. ಶಹೀದ್ ಭಗತ್ ಸಿಂಗ್ ಜಿ ಅವರ ಆಲೋಚನೆಗಳನ್ನು ಕಾಪಾಡಲು, ನಾನು ಅವರ ಸ್ಥಳೀಯ ಗ್ರಾಮವಾದ ಖಟ್ಕರ್ ಕಲಾನ್‌ಗೆ ಹೊರಡುತ್ತಿದ್ದೇನೆ ಎಂದು ಬರೆದಿದ್ದರು. ಮತ್ತೊಂದೆಡೆ, ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ ಇಂದು ಪಂಜಾಬ್‌ಗೆ ದೊಡ್ಡ ದಿನ ಎಂದು ಹೇಳಿದ್ದಾರೆ. ಹೊಸ ಭರವಸೆಯ ಈ ಸುವರ್ಣ ಮುಂಜಾನೆಯಲ್ಲಿ, ಇಂದು ಇಡೀ ಪಂಜಾಬ್ ಒಗ್ಗೂಡಿ ಸಮೃದ್ಧ ಪಂಜಾಬ್ ಮಾಡಲು ಪ್ರತಿಜ್ಞೆ ಮಾಡಲಿದೆ. ಆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ನಾನು ಸಹ ಶಹೀದ್ ಭಗತ್ ಸಿಂಗ್ ಅವರ ಹುಟ್ಟೂರು ಖಟ್ಕರ್ ಕಲಾನ್‌ಗೆ ಹೊರಟಿದ್ದೇನೆ ಎಂದಿದ್ದರು.